ಹೋಟೆಲ್‌ ಗೋದಾವರಿ

Author : ಬಾಳಾಸಾಹೇಬ ಲೋಕಾಪುರ

Pages 110

₹ 100.00




Year of Publication: 2021
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ಎಮ್ಮಿಗನೂರು, ಬಳ್ಳಾರಿ- 583 113
Phone: 9480353507

Synopsys

ಸಮಕಾಲೀನ ಗ್ರಾಮೀಣ ಪ್ರದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕಿನ ವಿದ್ಯಮಾನಗಳನ್ನು ಪ್ರಾಮಾಣಿಕವಾಗಿ ಗ್ರಹಿಸುವ ಕಾದಂಬರಿ ʻಹೋಟೆಲ್‌ ಗೋದಾವರಿʼ. ಇದು ಬಾಳಾಸಾಹೇಬ ಲೋಕಾಪುರ ಅವರ ಏಳನೇ ಕೃತಿ. ಜಾತಿವ್ಯವಸ್ಥೆಯ ಗಾಢ ಛಾಯೆಯಲ್ಲಿ ಬದುಕುವ ಗ್ರಾಮೀಣರು ದಲಿತ ಮಹಿಳೆಯೊಬ್ಬಳ ಹೋಟೆಲ್‌ನಿಂದ ನಿಧಾನವಾಗಿ ತಿಂಡಿತಿನಿಸುಗಳನ್ನು ತಂದು ತಿನ್ನುವ ಮೂಲಕ ಸದ್ದಿಲ್ಲದೆ ಜನರ ಮಧ್ಯೆ ಜಾತಿ ಅಳಿಸಿಹೋಗಿ ನಿರುಂಬಳವಾಗಿ ಬದುಕುವುದು ಇಲ್ಲಿನ ಕತೆಯ ವಸ್ತು. ಹಳ್ಳಿಗರ ಔದಾರ್ಯ, ಕುಹಕ, ಮಾನಾಪಮಾನ, ಜಾತೀಯತೆ, ಹೊಟ್ಟೆಕಿಚ್ಚು ಎಲ್ಲವನ್ನೂ ಎದುರಿಸಿ ಅದೇ ಊರಲ್ಲಿ ತನ್ನ ಬದುಕು ಕಟ್ಟಲು ಶುರುಮಾಡುವ ಕಥಾ ನಾಯಕಿ ಗೋದವ್ವನ ಹೋರಾಟದ, ಆಕೆಯ ಅಂತರಾಳದ ಸ್ವರೂಪವನ್ನು ಹೇಳುವ ಕತೆ ಇದು. ಹೀಗೆ ಕತೆಯುದ್ದಕ್ಕೂ ಲೇಖಕರು ಗ್ರಾಮಜಗತ್ತನ್ನೇ ತೆರೆಯುತ್ತಾ ಹೋಗುತ್ತಾರೆ.

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books