ಕಾಡ ಸೆರಗಿನ ಸೂಡಿ

Author : ಮಂಜುನಾಥ್ ಚಾಂದ್

Pages 196

₹ 180.00
Year of Publication: 2020
Published by: ಅಕ್ಷರ ಮಂಡಲ ಪ್ರಕಾಶನ
Address: ಚಾಂದ್ ಕುಟೀರ, #132 ಮೊದಲ ಬ್ಲಾಕ್, ಬಿ.ಡಿ.ಎ. ಬಡಾವಣೆ, ಬನಶಂಕರಿ ಆರನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು - 560098
Phone: 9449238154

Synopsys

ಲೇಖಕ ಮಂಜುನಾಥ್‌ ಚಾಂದ್‌ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿಯು 1930ರ ದಶಕದ ಭಾರತ ಸ್ವಾತಂತ್ರ್ಯ ಹೋರಾಟವನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ತ್ಯಾಗ ಮತ್ತು ಬಲಿದಾನದ ಕಥನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಲೇಖಕ ಜಗದೀಶ್ ಕೊಪ್ಪ ಅವರು “ ಅನೇಕ ರೋಚಕ ತಿರುವುಗಳ ನಡುವೆಯೂ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ, ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಮಂಜುನಾಥ್ ಚಾಂದ್

ಲೇಖಕ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ಭಾಷೆಯಲ್ಲಿ ಅವರು ಬರೆದಿರುವ ಅನೇಕ ಕಥೆಗಳು ಜನಮನ್ನಣೆ ಗಳಿಸಿವೆ. ‘ಅಮ್ಮ ಕೊಟ್ಟ ಜಾಜಿ ದಂಡೆ’, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಕಾದಂಬರಿ. ...

READ MORE

Related Books