ಇಲ್ಲೇ ಸ್ವರ್ಗ

Author : ಉಷಾ ನವರತ್ನರಾಂ

Pages 160

₹ 65.00
Year of Publication: 2007
Published by: ಓಂ ಶಕ್ತಿ ಪ್ರಕಾಶನ

Synopsys

ಉಷಾ ನವರತ್ನರಾಮ್ ರವರು ಕನ್ನಡದ ಖ್ಯಾತ ಲೇಖಕಿಯರಲ್ಲಿ ಒಬ್ಬರು..ಅವರ ಕಾದಂಬರಿಗಳು ಅಪಾರ ಜನ ಪ್ರೀತಿಯನ್ನು ಗಳಿಸಿಕೊಂಡಿದ್ದವು.ಅವರು ಉನ್ನತ ವರ್ಗದ ಮಧ್ಯಮ ಜೀವನವನ್ನೇ ಚಿತ್ರಿಸುವುದು ಎನ್ನುವ ಅಪವಾದ ಇದ್ದರೂ ಸಹ ಅವರ ಕಾದಂಬರಿಗಳು ಓದುಗರನ್ನು ಆಕರ್ಷಿಸಿದ್ದಂತೂ ಸುಳ್ಳಲ್ಲ. ಇಲ್ಲೇ ಸ್ವರ್ಗ ಒಂದು ಪುಟ್ಟ ರಸಮಯ ಕೃತಿ. ಪ್ರತಿಯೊಬ್ಬರಿಗೂ ತನ್ನ ದೇಶ,ತನ್ನ ನೆಲ ,ತನ್ನ ಭಾಷೆ ಅಂದರೆ ಅಪರಿಮಿತ ಪ್ರೀತಿ ವ್ಯಾಮೋಹ ಇರುವುದು ಸಹಜ...ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನ ಸುಖಮಯ ಜೀವನದ ವ್ಯಾಮೋಹಕ್ಕೆ ಬಲಿಯಾಗಿ ತಾಯ್ನಾಡನ್ನು ತೊರೆದು ವಿದೇಶಗಳಿಗೆ ಹೋಗಿ ನೆಲೆಸುವುದು ಸರ್ವೇ ಸಹಜವಾಗಿದೆ...ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ಹಿರಿಯರು ಹೇಳಿರುವಂತೆ ತಾಯಿ ನಾಡಿನ ತಂಪು ನೆಮ್ಮದಿ ಬೇರೆ ಕಡೆ ಬರುವುದು ಕಷ್ಟವಲ್ಲವೇ ? ಈ ಕಾದಂಬರಿ ಸಹ ಇದೇ ಕಥಾವಸ್ತುವನ್ನು ಆಧರಿಸಿದೆ. ಪ್ರಥಮ ಮುದ್ರಣ- 1995, ದ್ವಿತೀಯ ಮುದ್ರಣ -2007

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books