ಕೊಳಗ

Author : ನಾ. ಡಿಸೋಜ

Pages 330

₹ 153.00
Year of Publication: 2013
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರನಗರ, ಶಿವಮೊಗ್ಗ- 577204
Phone: 9449886390

Synopsys

ನಾ. ಡಿಸೋಜ ಅವರು ಬರೆದ ಕಾದಂಬರಿ-ಕೊಳಗ. ಕಾಗೋಡು ಸತ್ಯಾಗ್ರಹ ಹಿನ್ನೆಲೆಯಲ್ಲಿ ಗೇಣಿದಾರರ, ಭೂ ಮಾಲಿಕರ ಬದುಕು, ಮನಸ್ತಾಪಗಳು, ಅದರ ಪರಿಣಾಮಗಳು ತೋರುವ ಕೃತಿ ಇದು. ತಮ್ಮ ಮೇಲೆ ಶೋಷಣೆ ನಡೆಯುತ್ತಿಲ್ಲ. ಆದರೆ, ಇದು ತಮ್ಮ ಕರ್ಮ ಎಂಬ ದಾಸ್ಯ ಭಾವನೆಯಲ್ಲೇ ಬದುಕಿನ ದಿನಗಳನ್ನು ನೂಕುವ ಗೇಣಿದಾರರ ದಯನೀಯ ಬದುಕು, ಅದಕ್ಕೆ ಪ್ರತಿಯಾಗಿ, ಇದು ಕರ್ಮದ ಫಲ ಅಲ್ಲ; ಶೋಷಣೆಯ ಫಲ ಎಂದು ಕಾಗೋಡು ಸತ್ಯಾಗ್ರಹ ಮನದಟ್ಟು ಮಾಡುವ ತನಕವೂ ಶೋಷಣೆಗೆ ಬಲಿಯಾಗುತ್ತಲೇ ಇರುವ ಜನರ ದಾರುಣ ಬದುಕನ್ನು ಚಿತ್ರಿಸುತ್ತದೆ. ಕೊಳಗ ಎಂಬುದು ಶೋಷಣೆಗೆ ಬಲಿಯಾಗುವ ಜನರ ಸಂಕೇತ. ಇದು ತುಂಬಾ ಆರ್ಥಪೂರ್ಣವಾಗಿ ಧ್ವನಿಸಿದೆ. 

About the Author

ನಾ. ಡಿಸೋಜ

ನಾ ಡಿಸೋಜ ಬರಹಗಾರರು, ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿ ನಿವೃತ್ತಿ ಹೊಂದಿದವರು. ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ ಅವರು ಹುಟ್ಟಿದ್ದು ಜೂನ್ 6, 1937 ರಲ್ಲಿ.  ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಪ್ರಾರಂಭದ ದಿನಗಳಲ್ಲಿ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯುತ್ತಿದ್ದರು. ಡಿಸೋಜರ ಮೊದಲ ಕಾದಂಬರಿ ‘ಬಂಜೆ ...

READ MORE

Related Books