ಪಕ್ಕಿಹಳ್ಳದ ಹಾದಿಗುಂಟ

Author : ಅನುಪಮಾ ಪ್ರಸಾದ್

Pages 332

₹ 300.00
Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು ವಯಾ, ಬಳ್ಳಾರಿ ಜಿಲ್ಲೆ - 583113
Phone: 8880087235

Synopsys

”ಪಕ್ಕಿಹಳ್ಳದ ಹಾದಿಗುಂಟ’  ಕಾದಂಬರಿ ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ಸಮಾನವಾಗಿಯೂ, ಸಮರ್ಥವಾಗಿಯೂ ಮಿಡಿಯುತ್ತದೆ. ಇಲ್ಲಿಯ ಕಥೆ ಹಲವು ತಲೆಮಾರುಗಳ ಕಥೆಯಾಗಿಯೂ, ವಿವಿಧ ಕಾಲಘಟ್ಟಗಳ ಕಥೆಯಾಗಿಯೂ, ಜೀವನಶೈಲಿಯ ಪಲ್ಲಟಗಳ ಕಥೆಯಾಗಿಯೂ, ಪರಿಸರದ ದುರಂತ ಕಥೆಯಾಗಿಯೂ, ದಾಖಲಾಗುವುದು ಮಾತ್ರವಲ್ಲ; ಮನುಷ್ಯ ಸಂಬಂಧಗಳ, ಭಾವನೆಗಳ, ಮೌಲ್ಯಗಳ ಕಥೆಯಾಗಿಯೂ ನಿಲ್ಲುತ್ತದೆ. ಜೀವನ ದರ್ಶನದ ಕಥಾನಕವೇ ಅನುಪಮಾ ಪ್ರಸಾದ್  ಅವರ  ಈ ಕಾದಂಬರಿ. 

About the Author

ಅನುಪಮಾ ಪ್ರಸಾದ್
(07 October 1971)

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...

READ MORE

Awards & Recognitions

Reviews

ಪಕ್ಕಿಹಳ್ಳಿಯ ಹಾದಿಗುಂಟ-ನರೇಂದ್ರ ಪೈ-ಅವಧಿಮಗ್‌

ಪಕ್ಕಿಹಳ್ಳದ ಹಾದಿಗುಂಟ

ಪ್ರಕೃತಿಯಲ್ಲಿ ಮಿತಿಯಿಲ್ಲದ ದಾಹಕ್ಕೆ ಬಲಿಯಾದವ ಮನುಷ್ಯ. ನೆಲ, ಜಲ, ಜೀವಜಗತ್ತಿನ ಸಂಬಂಧಗಳು ಬುದ್ಧಿವಂತ ಮನುಷ್ಯನ ಆಸೆಗಳಿಂದ ವಿಕಾರವಾಗುವ ಪರಿ, ಕೊನೆಗೆ ತನ್ನದೇ ವಿಕೃತಿಗಳಿಂದ ಇಡೀ ಜೀವಜಾಲವನ್ನೇ ಬಲಿಗೊಡುವ ಅನೇಕ ಸಂಕಟಗಳ ಹೂರಣವೇ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ. ಹಲವು ತಲೆಮಾರುಗಳ ಕತೆಯಂತಿರುವ ಈ ಕಾದಂಬರಿ ಬಾಲ್ಯದಿಂದ ಹಿಡಿದು ಮುಪ್ಪಿನವರೆಗಿನ ಬದುಕಿನ ಹಾದಿ, ಏರಿಳಿತಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತದೆ. ಇಲ್ಲಿನ ‘ಮುಕ್ತಾತಾಯಿ’, ‘ಹರಿಣಾಕ್ಷಿ’, ‘ಅಣ್ಣಯ್ಯ ಬಲ್ಲಾಳ’ರಂತಹ ಅದೆಷ್ಟೋ ಪಾತ್ರಗಳು ನಮ್ಮೊಳಗನ್ನೂ ಆವರಿಸಿದ್ದರೆ ಅಚ್ಚರಿಯಿಲ್ಲ. ಎಲ್ಲರೂ ಹಾಯ್ದಿರಬಹುದಾದ ಅಥವಾ ಹಾಯುತ್ತಿರುವ ಅನೇಕ ಪಕ್ಕಿಹಳ್ಳಗಳು ಇಲ್ಲಿ ಬಿತ್ತರಗೊಂಡಿವೆ. ಕಾಸರಗೋಡು, ಸುತ್ತಲಿನ‌ ಗ್ರಾಮ್ಯ ಭಾಷೆ ಓದಿನ ಸುಖ ಹೆಚ್ಚಿಸುತ್ತದೆ.

ಕೃಪೆ : ಪ್ರಜಾವಾಣಿ, 2020 ಮಾರ್ಚಿ 01

Related Books