ಆರಾಧನೆ

Author : ಬೇಲೂರು ರಾಮಮೂರ್ತಿ

Pages 158

₹ 100.00
Year of Publication: 2017
Published by: ತೇಜು ಪಬ್ಲಿಕೇಷನ್ಸ್
Address: #233, 7ನೇ ‘ಎ’ ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-560028
Phone: 9900195626

Synopsys

‘ಆರಾಧನೆ’ ಕೃತಿಯು ಬೇಲೂರು ರಾಮಮೂರ್ತಿ ಅವರ ಸಾಮಾಜಿಕ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಎಷ್ಟೋ ವರ್ಷಗಳ ಹಿಂದೆ ಇಂದಿರೆ ಎನ್ನುವ ಹುಡುಗಿಯನ್ನು ಇಷ್ಟಪಟ್ಟ ಶಾಮಸುಂದರ ಆಲಿಯಾಸ್ ಶಾಮಿ, ಅವಳೇ ತನ್ನ ಮನದೇವತೆ ಅಂದುಕೊಂಡಿದ್ದ. ಅವಳನ್ನು ಮದುವೆ ಮಾಡ್ಕೊಬೇಕು ಅಂತ ಬಯಸಿದ. ತನ್ನ ಮನದಾಳವನ್ನು ಬಿಚ್ಚಿಡುವ ಮೊದಲೇ ಅವಳ ಮದುವೆಯಾಗಿರುತ್ತೆ. ಅವಳನ್ನು ನೋಡಿದ ಒಂದೇ ಕ್ಷಣದಲ್ಲಿ ಅವಳ ಬಗೆಗೆ ಅವನ ಹೃದಯದಲ್ಲಿ ಆಸೆಯ ಗೋಪುರವನ್ನೇ ಕಟ್ಟಿಕೊಂಡಿದ್ದ. ಅವನ ಮನದಲ್ಲಿ ಇದ್ದ ಆಸೆಗಳನ್ನು ಬೇರೆ ಯಾರಿಗೂ ವಿವರಿಸುವಂತೆಯೇ ಇರಲಿಲ್ಲ. ಅವಳ ಮದುವೆಯಾಗಿ ಹೋಯಿತು ಅಂತ ಗೊತ್ತಾದಾಗ ಶಾಮಸುಂದರ ಆಲಿಯಾಸ್ ಶಾಮಿ ಹುಚ್ಚನಂತಾಗಿ ಹೋದದ್ದು. ಮುಂದೆ ಅವನ ಬದುಕೇ ಶೂನ್ಯ ಅನಿಸಿತು. ಆದರೆ ಅವನು ಎಲ್ಲರಂತೆ ಇಂದಿರೆಯ ಎದುರಿಗೆ ಬಂದು ಅವನ ಪ್ರೀತಿ ತೋಡಿಕೊಂಡು ಇಂದಿರೆ ಸಂಸಾರ ಹಾಳು ಮಾಡೋ ಕೆಲಸ ಮಾಡಲಿಲ್ಲ. ಆದರೆ ಅವನು ಇಂದಿರೆ ಮನೆಗೆ ಬಂದು ಸೇರಿಕೊಂಡು ಅವಳ ನೆರಳಾಗಿ ಎಲ್ಲ ರೀತಿಯಿಂದಲೂ ಸುಖ ಸಂತೋಷ ಸಿಗುವ ಹಾಗೆ ನೋಡಿಕೊಂಡ. ಅವಳು ಮರುಗಿದಾಗ ಅವನೂ ಮರುಗಿದೆ. ಇಂದಿರೆ ಸುಧಾಕರನ ಹೆಂಡತಿಯಾಗಿ ಸುಖವಾಗಿರೋದು ಅವನ ಗುರಿಯಾಗಿತ್ತು. ಇಂದಿರೆಯ ಬದುಕಿನ ಪ್ರತಿ ಹಂತದಲ್ಲೂ ಅವಳಿಗೆ ನೆರಳಾಗಿ ನೆರವಾಗಿ ಇದ್ದ. ಅವಳ ಇಬ್ಬರು ಮಕ್ಕಳನ್ನು ತನ್ನ ಮಕ್ಕಳಂತೆಯೇ ನೋಡಿಕೊಂಡ. ಶಾಮಿ ಇಂದಿರೆಯನ್ನು ಮನಸಾರೆ ಆರಾಧಿಸಿದ್ದರಿಂದ ಮತ್ತೆ ಇನ್ನೊಂದು ಹೆಣ್ಣಿನ ಕಡೆ ನೋಡಲೇ ಇಲ್ಲ. ನೋಡಬೇಕು ಅಂತ ಅನ್ನಿಸಲೂ ಇಲ್ಲ. ಬಹಳಷ್ಟು ಜನ ಶಾಮಿಯ ಮದುವೆಗೆ ಒತ್ತಾಸೆ ತಂದರೂ ಅವನು ಒಪ್ಪಲಿಲ್ಲ. ಇಂದಿರೆ ಬದುಕಿರೋ ತನಕ ಅವಳ ನರಳಾಗಿ, ಅವಳಿಗೆ ಏನೊಂದು ಆತಂಕವೂ ಬಾರದ ಹಾಗೆ ನಡೆದುಕೊಳ್ಳೋದೇ ಅವನ ಇಡೀ ಬದುಕಿನ ಗುರಿಯಾಗಿತ್ತು. ಆ ಗುರಿಯನ್ನು ಶಾಮಿ ಹೇಗೆ ಸಾಧಿಸಿದ, ಇಂದಿರೆ ಇಡುವ ಪ್ರತಿ ಹೆಜ್ಜೆಯಲ್ಲೂ ಅವನು ಹೇಗೆ ಅವಳಿಗೆ ನೆರವಾದ ಎನ್ನುವುದೇ ‘ಆರಾಧನೆ’ಯ ಕಥಾ ವಸ್ತುವಾಗಿದೆ. ಒಂದು ವಸ್ತು ನಮ್ಮಿಂದ ಕೈ ತಪ್ಪಿ ಹೋದಾಕ್ಷಣ ಅದರ ಮೇಲೆ ಹಗೆ ಸಾಧಿಸದೇ ಅದು ಸುಖವಾಗಿರಲಿ ಎಂದು ಬಯಸುವುದೇ ನಮ್ಮ ಹೃದಯದ ದೊಡ್ಡತನವಾಗಬೇಕು ಮತ್ತು , ಅದೇ ಬದುಕಿನ ಆರಾಧನೆಯಾಗಬೇಕು ಎನ್ನುವುದೇ ಈ ಕಾದಂಬರಿಯ ಆಶಯವಾಗಿದೆ ಎನ್ನುತ್ತಾರೆ ಲೇಖಕ ಬೇಲೂರು ರಾಮಮೂರ್ತಿ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books