ತೆಂಕನಿಡಿಯೂರಿನ ಕುಳುವಾರಿಗಳು

Author : ವ್ಯಾಸರಾವ್ ನಿಂಜೂರ್

Pages 272

₹ 225.00




Year of Publication: 2017
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 - 26617100 | 26617755

Synopsys

‘ತೆಂಕನಿಡಿಯೂರಿನ ಕುಳುವಾರಿಗಳು’ ಲೇಖಕ ವ್ಯಾಸರಾವ್ ನಿಂಜೂರ್ ಅವರ ಕಾದಂಬರಿ. ಅರವತ್ತರ ದಶಕದಲ್ಲಿ ನವ್ಯದ ಪ್ರಭಾವದಿಂದ ಸಣ್ಣಕತೆಗಳನ್ನು ಬರೆಯಲು ಪ್ರಾರಂಭಿಸಿದ ಡಾ. ವ್ಯಾಸರಾವ್ ನಿಂಜೂರ್ ಅವರು ಕ್ರಮೇಣ ಯಾವ 'ವಾದ'ದ ಬೆನ್ನು ಹತ್ತದೆ ತಮ್ಮದೇ ಆದ ಹಾದಿಯಲ್ಲಿ ತಮ್ಮ ಅನುಭವದ ಮೂಸೆಯಿಂದ ಹೊರಬಂದ ಕಥೆಗಳನ್ನು ಬರೆಯಲಾರಂಭಿಸಿದವರು. ದಕ್ಷಿಣ ಕನ್ನಡದ ವಿವಿಧ ಸಮುದಾಯದವರು, ಊರು ಬಿಟ್ಟು ಮುಂಬಯಿ ಸೇರಿದ ನವಯುವಕರ ತವಕ ತಲ್ಲಣಗಳು, 70-80 ರ ದಶಕದಲ್ಲಿ ವಿದೇಶಿ ನೆಲದಲ್ಲಿ ನೆಲೆಸಿದ 'ಇಂಟೆಲಿಜೆಂಟ್” ತರುಣರ ತಾಕಲಾಟಗಳು-ಹೀಗೆ ಗ್ರಾಮೀಣ ಪರಿಸರ, ಸದಾ ಎದ್ದಿರುವ ಮುಂಬಯಿ, ಭಿನ್ನ ಸಂಸ್ಕೃತಿಯ ಹೊರದೇಶದ ಚಿತ್ರಣವನ್ನು ಪರಿಪೂರ್ಣವಾಗಿ ಚಿತ್ರಿಸಿದವರು. ಈಗಾಗಲೇ ನಿಂಜೂರರ ಮೂಲಕ ದೂಜ ಮಾಸ್ತರರು, ಬಾಳಿಗೆ ಮಾಸ್ತರರು, ವಾಸುದೇವ ಭಟ್ಟರು, ಸ್ಟೆಲ್ಲಾ ಟೀಚರ್, ದಾಯ್ದ ನಾಯ್ಕ, ಪಸ್ಸು ನಾಯ್ಕರು ಕನ್ನಡ ಜನತೆಗೆ ಪರಿಚಯವಾಗಿರುವುದರಿಂದ ಅದೇ ತೆಂಕನಿಡಿಯೂರಿನ ತಟ್ಟಿ ಹೊಟೇಲಿನ ಶಿವರಾಮ ಭಟ್ಟರು ಮತ್ತು ಜಿಲ್ಲ ನಾಯ್ಕರಿಗೂ ತಮ್ಮನ್ನು ಡಾಕ್ಟರರು ಕನ್ನಡ ಲೋಕಕ್ಕೆ ಪರಿಚಯಿಸಬೇಕೆಂಬ ಉತ್ಕಟ ಆಸೆ.

ಯಾರ ಮನಸ್ಸನ್ನೂ ನೋಯಿಸುವವರಲ್ಲ ನಿಂಜೂರರು! ತಮ್ಮ ಊರಿನ ಗಣ್ಯ ವ್ಯಕ್ತಿಗಳನ್ನಷ್ಟೇ ಅಲ್ಲ, ಅತಿ ಸಾಮಾನ್ಯರನ್ನೂ ಅವರೆಲ್ಲರ ಸದ್ಗುಣ, ದುರ್ಗುಣಗಳನ್ನು ಮುಚ್ಚುಮರೆಯಿಲ್ಲದೆ ನಿವೇದಿಸಿದ್ದಾರೆ. ತಮ್ಮ ಹುಟ್ಟೂರು ಮತ್ತು ನೆಲೆಸಿರುವ ಮುಂಬಯಿ ಇವೆರಡಕ್ಕೂ ನ್ಯಾಯ ಸಲ್ಲಿಸುತ್ತಾ ಇಬ್ಬದಿಯ ಜೀವನಚಿತ್ರಣವನ್ನು ಮತ್ತೊಮ್ಮೆ ಖುಷಿ ಕೊಡುವ ತಮ್ಮ ಪ್ರಾದೇಶಿಕ ಶೈಲಿಯಲ್ಲಿ ಡಾ. ನಿಂಜೂರರು ನಿರೂಪಿಸಿದ್ದಾರೆ. ಮುಂಬಯಿಯ ರೋಚಕ ಜೀವನ ವಿನ್ಯಾಸ ಇಲ್ಲಿ ಸೊಗಸಾಗಿ ಅನಾವರಣಗೊಂಡಿದೆ.

About the Author

ವ್ಯಾಸರಾವ್ ನಿಂಜೂರ್
(06 October 1940)

ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು.  ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ...

READ MORE

Related Books