ನನ್ನದಲ್ಲದ್ದು

Author : ನಾ. ಮೊಗಸಾಲೆ

Pages 128

₹ 150.00
Year of Publication: 2023
Published by: ಸಾಹಿತ್ಯ ಪ್ರಕಾಶನ
Address: ಹುಬ್ಬಳಿ

Synopsys

‘ನನ್ನದಲ್ಲದ್ದು’ ಲೇಖಕ ನಾ. ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಕೃತಿಯ ಕುರಿತು ತಿಳಿಸುತ್ತಾ '1977ರಲ್ಲಿ ಮುದ್ರಣವಾಗಿ ಆ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತವಾದ 'ನನ್ನದಲ್ಲದ್ದು' ಕಾದಂಬರಿ ಈಗ ಹುಬ್ಬಳಿಯ ಸಾಹಿತ್ಯ ಪ್ರಕಾಶನದಿಂದ 4 ನೇ ಮುದ್ರಣವಾಗಿದೆ. ಸತ್ತು ಹೋಗುವ ಡಾ. ಶ್ರೀನಿವಾಸರ ಜೀವನವನ್ನು ಅರಸುವ ಕ್ರಮ ಕಾದಂಬರಿಯಲ್ಲಿ ಆಕರ್ಷಕವಾಗಿ ಮೂಡಿಬಂದಿದೆ. ಶ್ರೀನಿವಾಸರ ಜೀವನ ಹಲವಾರು ವಿಧದಲ್ಲಿ ಕತೆಗಾರನ ಜೀವನಕ್ಕಿಂತ ಭಿನ್ನವಾಗಿರುವುದರಿಂದ ವಸ್ತುನಿಷ್ಠ ನಿರೂಪಣೆ ಸಾಧ್ಯವಾಗಿದೆ. ಅನುಭವದ ನಿರೂಪಣೆಯ ನೆಪದಲ್ಲಿ ಭಾಷೆಯ ಮಟ್ಟದಲ್ಲಿ ಮಾತ್ರ ಸೂಕ್ಷ್ಮ ಸಂವೇದನಾಶೀಲರಾಗಿ ದತ್ತಿಗಳನ್ನು ಹಾಗೂ ಘಟನೆಗಳನ್ನು ಮರೆಯುತ್ತಿರುವ ಕಾಂದಬರಿಕಾರರ ಪ್ರಾಶಸ್ತ ಬೆಳೆಯುತ್ತಿರುವ ಈ ಕಾಲದಲ್ಲಿ ಡಾ. ಮೊಗಸಾಲೆಯವರು 'ನನ್ನದಲ್ಲದ್ದು' ಕಾದಂಬರಿಯಲ್ಲಿ ವ್ಯಕ್ತಿಯೊಬ್ಬನ ಜೀವನದ ಮೂರು ಆಯಾಮಗಳನ್ನು ವ್ಯಕ್ತಿಗಳ ಮೂಲಕವೇ ಬಿಚ್ಚಿ ತೋರಿಸಲು ಮಾಡಿದ ಪ್ರಯತ್ನ ಸಮಾಧಾನ ತರುವ ಸಂಗತಿ, ಕೇಂದ್ರ ವ್ಯಕ್ತಿಯಾದ ಶ್ರೀನಿವಾಸರು ಕತೆಗಾರನಾದ ಶೇಖರನ ಮೂಲಕ, ಡೈರಿಯ ಮೂಲಕ ಹಾಗೂ ವಾಮನ ಕಾಮತರ ಮೂಲಕ, ಒಡೆದು ಹೋದ ಕನ್ನಡಿಯನ್ನು ಜೋಡಿಸಿದಾಗ ಬರುವ ಚಿತ್ರದಂತೆ ಮೂಡಿಬರುತ್ತಾರೆ. ಅಂತೆಯೇ ಅವರ ಸ್ನೇಹ ಕಾಮ ಹಾಗೂ ಹದ ತಪ್ಪಿದ ಬಾಳಿನ ಅರಿವೂ ಉಂಟಾಗುತ್ತದೆ ಎಂದಿದ್ದಾರೆ ಮಾಧವ ಕುಲಕರ್ಣಿ.  ಹಾಗೇ ಕಾದಂಬರಿಯ ಬಂಧದ ದೃಷ್ಟಿಯಿಂದ ಈ ಆಯಾಮಗಳು ಅವಶ್ಯಕವೇ ಆಗಿದೆ. ಏಕೆಂದರೆ ಮನುಷ್ಯನನ್ನು ಅರಿಯುವಲ್ಲಿ ಎಂಥ ವೈಜ್ಞಾನಿಕ ದೃಷ್ಟಿಯನ್ನು ಅನುಸರಿಸಿದರೂ ಆತನ ನಿಗೂಢತ್ವವನ್ನು ಸಂಪೂರ್ಣ ಬಗೆಯಾಗುವುದಿಲ್ಲವೆಂದೇ ಕಾದಂಬರಿಯ ಕೇಂದ್ರ ವಸ್ತುವಾಗಿದೆ. ಸಮಾಂತರ ಸಂಬಂಧಗಳನ್ನು ಸ್ಥಾಪಿಸುವಲ್ಲಿ ಉದಂಬರಿ ಯಶಸ್ವಿಯಾಗಿದ್ದರೆ, ಕೃತಿಯ ಬಂಧ ಇನ್ನೂ ಬಿಗಿಯಾಗಬಹುದಿತ್ತು. ಶ್ರೀನಿವಾಸ-ವತ್ಸಲ, ಶೇಖರ-ಗೀತಾರ ಸಂಬಂಧಗಳು ಇಂಥ ಒಂದು ಅನುಕೂಲತೆಯನ್ನು ಒದಗಿಸಿಕೊಟ್ಟಿವೆ ಎಂದಿದ್ದಾರೆ.

About the Author

ನಾ. ಮೊಗಸಾಲೆ
(27 August 1944)

ಕಾಸರಗೋಡು ತಾಲೂಕಿನ ಕೋಳ್ಯೂರಿನ ಮೊಗಸಾಲೆ ಎಂಬ ಗ್ರಾಮದಲ್ಲಿ ಜನಿಸಿದ ಡಾ. ನಾರಾಯಣ ಮೊಗಸಾಲೆ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆಗೆ ಕಥೆ ಕಾದಂಬರಿಗಳನ್ನು ರಚಿಸಿರುವ ಅವರು ಸಾಹಿತ್ಯ ಸೃಷ್ಟಿಯ ಜೊತೆಗೆ ಸಾಹಿತ್ಯ ಪ್ರಸಾರದಲ್ಲಿಯೂ ವಿಶೇಷ ಕೆಲಸ ಮಾಡಿದ್ದಾರೆ. ಕಾಂತಾವರ  ಎಂಬ ಪುಟ್ಟಗ್ರಾಮದಲ್ಲಿ ಕನ್ನಡ ಸಂಘ ಕಟ್ಟಿ ನಿರಂತರ ಸಾಹಿತ್ಯಕ ಚಟುವಟಿಕೆ ನಡೆಸುತ್ತಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ, ಇದಲ್ಲ, ಇಹಪರದ ಕೊಳ, ಕಾಮನ ಬೆಡಗು, ದೇವರು ಮತ್ತೆ ಮತ್ತೆ (ಕವನ ಸಂಕಲನಗಳು), ಅರುವತ್ತರ ತೇರು, ಪೂರ್ವೋತ್ತರ, ಕರಣ ಕಾರಣ (ಸಮಗ್ರ ಕಾವ್ಯ), ಮಣ್ಣಿನ ...

READ MORE

Related Books