ಸೀಳು ನಾಲಿಗೆ

Author : ಸುದರ್ಶನ ದೇಸಾಯಿ

Pages 204

₹ 48.00




Year of Publication: 1998
Published by: ಸಾಹಿತ್ಯ ಪ್ರಕಾಶನ,
Address: ಸಿಟಿ ಕ್ಲೀನಿಕ್‌ ಸಂಕೀರ್ಣ, ದಾಜೀಬಾನ ಪೇಟೆ, ಹುಬ್ಬಳ್ಳಿ- 580028.

Synopsys

'ಸೀಳು ನಾಲಿಗೆ' ಕಾದಂಬರಿಯನ್ನು ಲೇಖಕ ಸುದರ್ಶನ ದೇಸಾಯಿ ಅವರು ರಚಿಸಿದ್ದಾರೆ. ಈ ಕೃತಿಯು ಸಾಹಿತ್ಯ ಪ್ರಕಾಶನದವರ ಐವತ್ತನೇ ಪುಸ್ತಕವಾಗಿದೆ. ಬೆಳಗಾವಿಯ ಕನ್ನಡಮ್ಮದಲ್ಲಿ ಧಾರವಾಹಿಯಾಗಿ ಈ ಕಾದಂಬರಿಯು ಪ್ರಸಾರವಾಗುತ್ತಿತ್ತು. ಈ ಪುಸ್ತಕದಲ್ಲಿ ತನಿಖೆ ಅಧಾರಿತ ಕತೆಯಿದ್ದು ಅನಿರೀಕ್ಷಿತ ತಿರುವುಗಳೊಂದಿಗೆ ಕಥೆಯು ಸಾಗುತ್ತದೆ. ಪತ್ತೇದಾರಿ ಕಾದಂಬರಿಯು ಇದಾಗಿದ್ದು ಸಮಾಜದಲ್ಲಿ ಪ್ರಸ್ತುತ ನಡೆಯುವ ವಿದ್ಯಾಮಾನಗಳನ್ನೇ ಅಧರಿಸಿಕೊಂಡು ಕಥೆ ಹೆಣೆಯಲಾಗಿದೆ. ಒಟ್ಟಿನಲ್ಲಿ ಪತ್ತೇದಾರಿ ವಿಷಯಗಳ ಜೊತೆಗೆ ಕೌಟುಂಬಿಕ ಭಾವನೆಗಳ ಮಿಶ್ರಣವನ್ನು ಈ ಕಾದಂಬರಿಯಲ್ಲಿ ಕಾಣಬಹುದಾಗಿದೆ.

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books