ಅಶ್ವಘೋಷ

Author : ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)

Pages 124

₹ 60.00




Year of Publication: 2003
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 26617100, 26617755

Synopsys

ಅಶ್ವಘೋಷ ಕೃತಿಯು ಸತ್ಯಕಾಮರು ರಚಿಸಿದ ಕಾದಂಬರಿ. ಅಶ್ವಘೋಷ ಸುಮಾರು ಒಂದನೇ ಶತಮಾನದ ಪ್ರಾಚೀನ ಸಂಸ್ಕೃತದ ಕವಿ. ತನ್ನ ಉತ್ತಮ ಕಾವ್ಯಗಳ ಮೂಲಕ ಬುದ್ಧನ ಕಾರುಣ್ಯ, ಜ್ಞಾನ, ತ್ಯಾಗವನ್ನು ಸಾರಿದವನು. ಈ ಕೃತಿಯ ಪ್ರಾರಂಭದ ಪುಟಗಳಲ್ಲಿ ಸತ್ಯಕಾಮರು ಅಶ್ವಘೋಷ ಕವಿಯನ್ನು ವರ್ಣಿಸಿರುವ ಬಗೆ ಈ ರೀತಿ ಇದೆ :

’ವಜ್ರದ ರಸವನ್ನು ಎರಕ ಹೊಯ್ದ ಮೈಕಟ್ಟು.ಅಗಲವಾದ ಎದೆ, ನೀಳ ತೋಳುಗಳು, ಎತ್ತರದ ನಿಲುವು, ಎಷ್ಟು ನೋಡಿದರೂ ಸಾಲದ ಚೆಲವು…ತಮಗೆ ಕಣ್ಣಿದ್ದುದು ಸಾರ್ಥಕವಾಯಿತು’ ಇದು ನೋಡಿದ ಹಲವರ ಉಲ್ಲೇಖ., ದಾರಿ ನಡೆಯುವವರೆಲ್ಲ ತಡೆದು ನಿಂತು ನೋಡುತ್ತಾರೆ. ನೋಡಿದ ಜನರ ತಲೆಯೊಳಗಿನ ಚಕ್ರಕ್ಕೆ ಹೊಸಗತಿ. ನೋಡದ ಹಲವರಿಗೆ ಕುತೂಹಲ. ಹುಡುಗಿಯರಿಗೆ ಇವನೊಬ್ಬ ಇಮ್ಮಡಿ ರತಿಪತಿ. ಈ ಹಾದಿಗೆ ಇವನು ಬಂದದ್ದು ಇಂದೇ. ಯಾರ ಕಣ್ಣೂ ಈ ಪುರುಷಸಿಂಹನನ್ನು ಹಿಡಿದು ನಿಲ್ಲಿಸುವುದಿಲ್ಲ. ಹಾಗೆಯೇ ಮುಂದೆ ಮುಂದೆ ಸಾಗಿದ್ದಾನೆ. ಈಗ  ಈತ ನಡೆದದ್ದು ನಗರದ ಒಂದು ಅಂಚಿನಲ್ಲಿ, ಅಲ್ಲ, ಸೆರಗಿನಲ್ಲಿ.ಇದು ನಿಜವಾಗಿಯೂ ಸಾಕೇತದ ಸೆರಗು. ಸಾಕೇತದ ಆಕರ್ಷಕ ವಸ್ತುಗಳು ಇಲ್ಲಿವೆ. ನಗರದ ಸೌಂದರ್ಯದ ಭಂಡಾರವೇ ಇಲ್ಲಿದೆ. ಆತ ನಡೆಯುತ್ತಿದ್ದಂತೆಯೇ ಗಕ್ಕನೆ ನಿಂತ. ಸಿಂಹ ಚಕಿತವಾಗಿತ್ತು. ನಿಂತ ಎನ್ನುವುದರೊಳಗಾಗಿಯೇ ಮುಂದೆ ಬಂದಿದ್ದ. ಹಿಂದೆ ನೋಡಿದ. ಅದು ಸಿಂಹಾವಲೋಕನ. ಅವನೇ ಶ್ರುತಿಸ್ತೋಮ, ಅಶ್ವಘೋಷ.’.

ಬೌದ್ದ ದಾರ್ಶನಿಕ ಗ್ರಂಥಕರ್ತೃನಾಗಿ, ನಾಟಕಕಾರನಾಗಿಯೂ ಸಾಹಿತ್ಯ ಪ್ರಪಂಚದಲ್ಲಿ ಅಶ್ವಘೋಷನ ಹೆಸರು ಸುಪ್ರಸಿದ್ದವಾಗಿದೆ. ಬೌದ್ಧ ಧರ್ಮದ ಪ್ರಚಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅಶ್ವಘೋಷನ ಕಾಲ, ಕೃತಿ, ಆತನ ಬದುಕು, ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಸತ್ಯಕಾಮರು ಈ ಕೃತಿಯಲ್ಲಿ ತಿಳಿಸಿದ್ದಾರೆ.

 

About the Author

ಸತ್ಯಕಾಮ (ಅನಂತ ಕೃಷ್ಣಾಚಾರ್ಯ ಶಹಾಪುರ)
(02 March 1920 - 20 October 1998)

’ಸತ್ಯಕಾಮ’ ಎಂಬುದು ಅನಂತ ಕೃಷ್ಣಾಚಾರ್ಯ ಶಹಾಪುರ ಅವರ ಕಾವ್ಯನಾಮ. ತಮ್ಮ ಕಾದಂಬರಿ ಹಾಗೂ ತಂತ್ರವಿದ್ಯೆ, ಕೃಷಿಯ ಮೂಲಕ ನಾಡಿನ ಮನೆ ಮಾತಾದವರು ’ಸತ್ಯಕಾಮ’. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿಯಲ್ಲಿ 1920ರ ಮಾರ್ಚ್ 2ರಂದು ಜನಿಸಿದರು. (ಕೆಲವು ಕಡೆ ಏಪ್ರಿಲ್ 16 ಎಂದು ದಾಖಲಾಗಿದೆ.)  ಆರಂಭಿಕ ಶಿಕ್ಷಣವನ್ನು ಗಲಗಲಿಯಲ್ಲಿ ಪಡೆದ ಅವರು ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶಾಲೆಯ ಗೊಡವೆಗೇ ಹೋಗದೆ ಒಂದು ವರ್ಷ ಗಲಗಲಿಯಲ್ಲಿಯೇ ಕಳೆದರು. 1935ರಲ್ಲಿ ಬಾಗಲಕೋಟೆಯ ಸಕ್ರಿ ಹೈಸ್ಕೂಲಿಗೆ ಸೇರಿದರಾದರೂ ಓದು ಮುಂದುವರಿಸಲಿಲ್ಲ. ಭಾರತದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತಿದ್ದ 1930-31ರಲ್ಲಿ ಬಾಲಕ ಅನಂತ ...

READ MORE

Related Books