ಲೇಖಕ ಡಿ.ವಿ. ಗುರುಪ್ರಸಾದ್ ಅವರ ಕಾದಂಬರಿ-ಪೊಲೀಸ್ ಎನ್ ಕೌಂಟರ್. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಲಕ್ಷಣಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಬರೆಹಗಾರ ಡಿ. ವಿ. ಗುರುಪ್ರಸಾದ್ ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿಗಳು. ಅವರು ರಾಜ್ಯದ ಪೋಲೀಸ್ ಗುಪ್ತಚರದಳದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ದಿನಗಳ ಅನುಭವ ಮತ್ತು ತಮ್ಮ ವಿಚಾರಗಳನ್ನು ತಮ್ಮ ಕೃತಿಗಳಲ್ಲಿ ದಾಖಲಿಸುವ ಮೂಲಕ ಕ್ರೈಂ ಲೋಕದ ವಿಸ್ಮಯ ಸಂಗತಿಗಳನ್ನು ಓದುಗರಿಗೆ ನೀಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ, ವೀರಪ್ಪನ್ : ದಂತಚೋರನ ಬೆನ್ನಟ್ಟಿ, ಕೈಗೆ ಬಂದ ತುತ್ತು’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಪೊಲೀಸ್ ಎನ್ ಕೌಂಟರ್’ ಅವರ ಕಾದಂಬರಿ. ...
READ MORE