ಚಾಲುಕ್ಯ ವಿಕ್ರಮ

Author : ಪ್ರಕಾಶ್‌ ಹೇಮಾವತಿ

Pages 195

₹ 202.00




Year of Publication: 2023
Published by: ಕಾಮಧೇನು ಪುಸ್ತಕ ಭವನ
Address: 5/1, ನಾಗಪ್ಪ ಬೀದಿ, ಶೇಷಾದ್ರಿಪುರ, ಬೆಂಗಳೂರು-560020

Synopsys

'ಚಾಲುಕ್ಯ ವಿಕ್ರಮ' ಪ್ರಕಾಶ್ ಹೇಮಾವತಿ ಅವರು ರಚಿಸಿರುವ ಐತಿಹಾಸಿಕ ಕಾದಂಬರಿ. ಈ ಕಾದಂಬರಿಗೆ ಸೂರ್ಯನಾಥ ಕಾಮತ್ ಅವರು ಬೆನ್ನುಡಿ ಬರೆದಿದ್ದಾರೆ. “ಪರಾಕ್ರಮದಲ್ಲಿ, ಪಾಂಡಿತ್ಯದಲ್ಲಿ, ರಾಜನೀತಿ ಪರಿಣಿತಿಯಲ್ಲಿ, ಔದಾರ್ಯದಲ್ಲಿ ಹಾಗೂ ಧಾರ್ಮಿಕ ಮನೋವೃತ್ತಿಯಲ್ಲಿ ಆರನೆಯ ವಿಕ್ರಮಾದಿತ್ಯನು ಕನ್ನಡ ನಾಡಿನ ಹೆಮ್ಮೆಯ ದೊರೆಗಳಲ್ಲಿ ಒಬ್ಬನಾದ ಶಕಪುರುಷ. ಆಂಧ್ರ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ವಿಶಾಲಪ್ರದೇಶವನ್ನು ಆಳುತ್ತಿದ್ದ ಅವನ ಔದಾರ್ಯ, ಧಾರ್ಮಿಕತೆಗಳ ಸಾಕ್ಷಿಯಾಗಿ ನೂರಾರು ಶಾಸನಗಳು ಅವನ ಸಾಮ್ರಾಜ್ಯದ ಉದ್ದಗಲಕ್ಕೂ ಹರಡಿವೆ” ಎನ್ನುತ್ತಾರೆ ಸೂರ್ಯನಾಥ ಕಾಮತ್. ಆರನೆಯ ವಿಕ್ರಮಾದಿತ್ಯನ ಚರಿತ್ರೆಯನ್ನಾಧರಿಸಿ ರಚಿತವಾಗಿರುವ ಈ ಕಾದಂಬರಿಯಲ್ಲಿ ಐತಿಹಾಸಿಕ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ

About the Author

ಪ್ರಕಾಶ್‌ ಹೇಮಾವತಿ

ಮೂಲತಃ ಬೆಂಗಳೂರಿನವರಾಗಿದ್ದು ಚಿಕ್ಕಂದಿನಿಂದಲೂ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಚರಿತ್ರೆಗಳ ಬಗೆಗೆ ಅಪಾರ ಅಸಕ್ತಿ ಬೆಳೆಸಿಕೊಂಡಿರುವ ಪ್ರಕಾಶ ಹೇಮಾವತಿಯವರು ಬೆಂಗಳೂರಿನ ವಿಶ್ವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಾಸ್ತುಶಿಲ್ಪ ಶಾಸ್ತದ ಪದವೀಧರರು. ಕಳೆದ ನಲವತ್ತು ವರುಷಗಳಿಂದಲೂ ಅಮೇರಿಕಾದಲ್ಲಿ ನೆಲೆಸಿರುವ ಇವರು ಇದುವರೆಗೆ ಕರ್ನಾಟಕ ಚರಿತ್ರೆಯ ಬಗೆಗೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇದರೊಂದಿಗೆ ಕಾದಂಬರಿ, ಕಥೆ, ಕವನ, ನಾಟಕಗಳನ್ನು ಸಹ ರಚಿಸಿದ್ದಾರೆ. ಹಲವು ನಾಟಕಗಳನ್ನು ಬರೆದು ಶಿಕಾಗೋ ಹಾಗೂ ಇನ್ನಿತರೆಡೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಕೃತಿಗಳು "ಅಮೋಘವರ್ಷ" , "ಒಬಾಮ", "ಇಮ್ಮಡಿ ಪುಲಿಕೇಶಿ". ...

READ MORE

Related Books