ತುಮುಲ

Author : ಸುಧಾ ಮೂರ್ತಿ

Pages 120

₹ 65.00




Year of Publication: 2019
Published by: ಸಪ್ನ ಬುಕ್ಸ್‌
Address: #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-560009
Phone: 08040114455

Synopsys

ತುಮುಲ ಶೀರ್ಷಿಕೆಯ ಕಾದಂಬರಿಯು ಈಗ 13ನೇ ಮುದ್ರಣ ಕಂಡಿದೆ. ಭಾರತೀಯ ವಿವಿಧ ಭಾಷೆಗಳಲ್ಲಿ ಅನುವಾದವಾಗಿದೆ. ಸನ್ನಿವೇಶ, ಘಟನೆ, ಪಾತ್ರಸೃಷ್ಟಿ, ತಂತ್ರ, ಕಥಾಶೈಲಿ ದೃಷ್ಟಿಯಿಂದ ಕಾದಂಬರಿಯು ಓದುಗರನ್ನು ಸೆಳೆಯುತ್ತದೆ. ಈ ಕಾದಂಬರಿಯು ಪ್ರಕಟಣೆಗೂ ಮುನ್ನ ಪತ್ರಿಕೆಗಳ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಯಾವ ಸಂಸ್ಕೃತಿಯೂ ಸಂಪೂರ್ಣವಾಗಿ ಒಳ್ಳೆಯದಲ್ಲ; ಕೆಟ್ಟದ್ದೂ ಅಲ್ಲ. ಸಂಸ್ಕೃತಿಗಳು ವಿಭಿನ್ನವಾಗಿರುತ್ತವೆ ಅಷ್ಟೆ. ಎಲ್ಲವನ್ನೂ ಗೌರವಿಸಬೇಕು ಎಂಬುದರ ಸಂದೇಶ ಕಾದಂಬರಿಯಲ್ಲಿದೆ.

About the Author

ಸುಧಾ ಮೂರ್ತಿ
(18 August 1950)

ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್‌ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ.  ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ.  ಸುಧಾ ಮೂರ್ತಿ ಅವರಿಗೆ ರೋಟರಿ ...

READ MORE

Related Books