ಈ ಕೃತಿಯು ಸುಮಾರು 40 ವರ್ಷ ಹಿಂದಿನ ಬದುಕನ್ನು ನೆನಪಿಸುತ್ತದೆ. ಭಾವನ ಮತ್ತು ಸ್ವಾಮಿಯವರು ಬದುಕಿದ ರೀತಿಯನ್ನು ವಿವರಿಸುತ್ತದೆ.ಅವರು ಎದುರಿಸಿದ ಸವಾಲುಗಳನ್ನು ಲೇಖಕರು ವಿವರಿಸಿದ್ದಾರೆ.ಸಮಾಧಾನ ದಿಂದ ಬದುಕಲು ಯತ್ನಿಸುವವರ ಕಥೆ. ವೈಯಕ್ತಿಕ ಸಮಸ್ಯಗಳಿಂದಾಗಿ ಜೀವನದಲ್ಲಿ ಅನುಭವಿಸುವ ನೋವುಗಳನ್ನು ವಿವರಿಸಲಾಗಿದೆ. ನಗರೀಕರಣದಿಂದಾಗಿ ಸಮಾಜದಲ್ಲಿ ಉಂಟಾದ ಬದಲಾವಣೆ ಜನರ ಬದುಕನ್ನು ಹೇಗೆ ದುಸ್ತರಗೊಳಿಸಿತು ಎಂಬುದನ್ನು ಲೇಖಕರು ಈ ಕೃತಿಯ ಮೂಲಕ ವಿವರಿಸಿದ್ದಾರೆ.
ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...
READ MORE