ದೆಂಗ

Author : ಅಕ್ಷಯ ಆರ್. ಶೆಟ್ಟಿ

Pages 256

₹ 300.00




Year of Publication: 2022
Published by: ಬಹುರೂಪಿ
Address: ಎಂಬೆಸಿ ಸೆಂಟರ್, ಮೊದಲ ಮಹಡಿ, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 7019182729

Synopsys

ಲೇಖಕಿ ಅಕ್ಷಯ ಆರ್.‌ ಶೆಟ್ಟಿ ಅವರ ತುಳು ಕಾದಂಬರಿ ಕೃತಿ ʻದೆಂಗʼ. ತುಳು ಸಂಸ್ಕೃತಿಯ ಚಿತ್ರಣ ಮತ್ತು ಆಧುನಿಕ ಸಮಾಜದ ಅತ್ಯುನ್ನತ ತಂತ್ರವಿಜ್ಞಾನದ ಅನಾವರಣದ ಕುರಿತು ಈ ಕಾದಂಬರಿಯು ಹೇಳುತ್ತದೆ. ಶೀರ್ಷಿಕೆಯಲ್ಲಿ ಹೇಳಿರುವ ʻದೆಂಗʼ ಅನ್ನುವ ಪದದ ಅರ್ಥ, ಹಿಂದಿನ ಕಾಲದಲ್ಲಿ ತುಳುವರ ಅಡುಗೆ ಕೋಣೆಯ ಒಲೆಯ ಮೇಲಕ್ಕೆ ಸಮನಾಗಿ ಒಂದು ಹಲಗೆಯನ್ನು ನೇತುಹಾಕಿ ಅದರ ಮೇಲೆ ಮನೆಯ ನಿತ್ಯ ಬಳಕೆಯ ವಸ್ತುಗಳಾದ ಉಪ್ಪಿನಕಾಯಿ, ದಿನಸಿ, ಒಣಮೆಣಸು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಿಡುತ್ತಿದ್ದರು. ಇದರಿಂದ ಅಡುಗೆಗೆ ಒಲೆಯನ್ನು ಹೊತ್ತಿಸಿದಾಗ ಅದರಿಂದ ಬರುವ ಹೊಗೆಯಿಂದ ಈ ದೆಂಗದಲ್ಲಿಟ್ಟಿರುವ ವಸ್ತುಗಳು ಹಾಳಾಗದೆ ಚೆನ್ನಾಗಿ ಬಾಳಿಕೆ ಬರುತ್ತಿತ್ತು. ಇದನ್ನು ದೆಂಗ ಎಂದು ಕರೆಯುತ್ತಾರೆ. ಹೀಗೆ ಈ ಕಥನದಲ್ಲಿ ಬರುವ ಕಥಾನಾಯಕಿ ʻಸಿರಿಮಾʼ ಎಂಬವರ ಮನಸ್ಸಿಲ್ಲಿ ಒಂದರ ಮೇಲೊಂದರಂತೆ ಭದ್ರವಾಗಿ ಕುಳಿತ ಹತ್ತು ಹಲವು ವಿಚಾರಗಳು, ಯೋಚನೆಗಳು,ಚಿಂತೆಗಳನ್ನು ʻದೆಂಗʼದ ರೂಪದಲ್ಲಿ ಲೇಖಕಿ ಇಲ್ಲಿ ಚಿತ್ರಿಸಿದ್ದಾರೆ. ಮೂಲ ಊರಿನ ಬಗ್ಗೆ ಸಂಶೋಧನೆ ಮಾಡಲು ವಿದೇಶದಿಂದ ಬಂದ ʻಸಿರಿಮಾʼ ಮುಂದೆ ತನ್ನ ನಾಡಿನ, ಮಣ್ಣಿನ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುತ್ತಾ ಹೋಗುವ ವಿಚಾರಗಳು, ನಂಬಿಕೆಗಳನ್ನು ಕಾದಂಬರಿಯು ಹೇಳುತ್ತದೆ. ಜೊತೆಗೆ, ತುಳು ನಾಡಿನಲ್ಲಿ ಮಣ್ಣಿನಲ್ಲಿ ಅನಾದಿ ಕಾಲದಿಂದಲೇ ನೆಲೆನಿಂತಿರುವ ಸತ್ಯ ದೈವಗಳ ಕುರಿತಾದ ವಿಚಾರವೂ ಬರುತ್ತದೆ.

About the Author

ಅಕ್ಷಯ ಆರ್. ಶೆಟ್ಟಿ

ಲೇಖಕಿ ಅಕ್ಷಯ ಆರ್. ಶೆಟ್ಟಿ ಅವರು ಪ್ರಸ್ತುತ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು.  ಎಂ. ಎ.  ಮತ್ತು ಎಂ. ಬಿ. ಎ.  ಪದವೀಧರರು. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಕ್ಷಯ ಅವರ ಎರಡನೇ ಕವನ ಸಂಕಲನ "ಬದುಕು ಭಾವದ ತೆನೆ "ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ್ದ  'ಸುಶೀಲಮ್ಮ ದತ್ತಿ ನಿಧಿ ಪ್ರಶಸ್ತಿ' ಹಾಗೂ ಇವರ ಕಥೆಗಳಿಗೆ 'ತ್ರಿವೇಣಿ ಧತ್ತಿ ನಿಧಿ ಪ್ರಶಸ್ತಿ' ಮತ್ತು ಸಾಧನಾ ಪ್ರತಿಷ್ಠಾನದ 'ಬಾಂಧವ್ಯ ಪ್ರಶಸ್ತಿ'  ಲಭಿಸಿವೆ. ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಇವರ  'ಹೆಣ್ಣು ಬಂಗಾರದ ಕಣ್ಣು ...

READ MORE

Reviews

‘ದೆಂಗ’ದಲ್ಲಿ ಅಡಗಿರುವ ಸೂಕ್ಷ್ಮಗಳು(ಪ್ರಜಾವಾಣಿ 03-01-2023)

https://avadhimag.in/%e0%b2%b0%e0%b2%be%e0%b2%9c%e0%b2%b6%e0%b3%8d%e0%b2%b0%e0%b3%80-%e0%b2%aa%e0%b3%86%e0%b2%b0%e0%b3%8d%e0%b2%b2-%e0%b2%93%e0%b2%a6%e0%b2%bf%e0%b2%a6-%e0%b2%a6%e0%b3%86%e0%b2%82%e0%b2%97/

 

Related Books