ವೈಕಂ ಮುಹಮ್ಮದ್‌ ಬಷೀರ್‌ ಅವರ ಎರಡು ಕಾದಂಬರಿಗಳು

Author : ಪಾರ್ವತಿ ಜಿ. ಐತಾಳ್

₹ 150.00
Year of Publication: 2022
Published by: ಯಾಜಿ ಪ್ರಕಾಶನ
Address: ಭೂಮಿ, ಎಂ. ಪಿ. ಪ್ರಕಾಶ್‌ ನಗರ, ಹೊಸಪೇಟೆ- 583201
Phone: 9449922800

Synopsys

ಲೇಖಕಿ ಡಾ. ಪಾರ್ವತಿ ಐತಾಳ್‌ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ ʻವೈಕಂ ಮುಹಮ್ಮದ್‌ ಬಷೀರ್ ಅವರ ಎರಡು ಕಾದಂಬರಿಗಳುʼ. ವೈಕಂ ಬಷೀರ್‌ ಅವರು ಮಲಯಾಳಂ ಭಾಷೆಯ ಪ್ರಸಿದ್ದ ಲೇಖಕರು. ಅವರು ರಚಿಸಿದ ʻಶಬ್ದಗಳು ' ಮತ್ತು ʻಸಾವಿನ ನೆರಳಿನಲ್ಲಿʼ ಎಂಬ ಎರಡು ಕಾದಂಬರಿಗಳನ್ನು ಇಲ್ಲಿ ಪಾರ್ವತಿ ಅವರು ಅನುವಾದಿಸಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ, “ಭಾರತೀಯ ಪ್ರಾದೇಶಿಕ ಭಾಷಾ ಸಾಹಿತ್ಯಗಳಲ್ಲಿ ಅತ್ಯಂತ ಎದ್ದು ಕಾಣುವ ಹೆಸರು ವೈಕ್ಕಂ ಮುಹಮ್ಮದ್ ಬಷೀರ್ ಅವರದು. ಅತಿ ಕಡಿಮೆ ಹಬ್ಬಗಳಲ್ಲಿ ಅತಿ ಹೆಚ್ಚು ಹೇಳುವ ಅವರ ಕಾದಂಬರಿಗಳೆಲ್ಲವು ಗಾತ್ರದಲ್ಲಿ ಬಹಳ ಚಿಕ್ಕವು, ಆದರೆ ಪುಟಗಟ್ಟಲೆ ಹೇಳಿದರೂ ಮುಗಿಯದಷ್ಟು ವಿಚಾರಗಳನ್ನು ನಾವು ಅವರ ಕೃತಿಗಳಲ್ಲಿ ಕಾಣುತ್ತೇವೆ. ಇಲ್ಲಿರುವ 'ಶಬ್ದಗಳು' ಮತ್ತು 'ಸಾವಿನ ನೆರಳಲ್ಲಿ' ಎಂಬ ಎರಡು ಕಾದಂಬರಿಗಳು ಬಷೀರರ ಇತರ ಕಾದಂಬರಿಗಳಿಗಿಂತ, ಅವುಗಳ ವಸ್ತು, ತಂತ್ರ ಮತ್ತು ನಿರೂಪಣಾ ಶೈಲಿಗಳ ದೃಷ್ಟಿಯಿಂದ ಭಿನ್ನವಾಗಿ ನಿಲ್ಲುವಂಥವುಗಳು. ಆಧುನಿಕ ಬದುಕಿನ ಕ್ರೌರ್ಯವು ಒಬ್ಬ ವ್ಯಕ್ತಿಯಲ್ಲಿ ಅನಾಥ ಪ್ರಜ್ಞೆ ಹಾಗೂ ಅಸಹಾಯಕ ಭಾವಗಳನ್ನು ಮೂಡಿಸಿ ಅವನನ್ನು ಅತಂತ್ರ ಸ್ಥಿತಿಗೆ ದೂಡುವ ಕಾದಂಬರಿ 'ಶಬ್ಬಗಳʼದ್ದಾದರೆ, ಪ್ರತಿಕ್ಷಣವೂ ಸಾವಿನ ಗೆರೆಗಳಲ್ಲೇ ಭಯಪಡುತ್ತ ಬದುಕುವ ಮನುಷ್ಯ ತನ್ನ ನಿರ್ಲಕ್ಷದಿಂದಾಗಿ ತಾನು ಪ್ರತಿಪಾದಿಸಿದ ಸಿದ್ದಾಂತಗಳ ವಿರುದ್ಧ ತಾನೇ ನಡೆಯುತ್ತ ತನ್ನ ಸಾವು ತಾನೇ ತಂದುಕೊಳ್ಳುವ ಕಾದಂಬರಿ 'ಸಾವಿಗೆ ನೆರಳಲ್ಲಿʼ ಇದೆ. ಗಂಭೀರ ವಸ್ತುಗಳಾದರೂ ಬಷೀರರ ಎಂದಿನ ಹಾಗೂ ಕಥನಶೈಲಿ ಮತ್ತು ಆಡುಭಾಷೆಯ ಸೊಗಡುಗಳು ಎರಡೂ ಕಾದಂಬರಿಗಳಲ್ಲಿವೆ” ಎಂದು ಹೇಳಿದ್ದಾರೆ.

About the Author

ಪಾರ್ವತಿ ಜಿ. ಐತಾಳ್
(23 July 1957)

ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು. 1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ  ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು. ಮಂಗಳೂರು ಜಿಲ್ಲೆಯ ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಏಳು ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ದುಡಿದ ಪಾರ್ವತಿಯವರು, ಶ್ರೀ ಗಂಗಾಧರ ಐತಾಳರೊಡನೆ ಮದುವೆಯಾದ ಬಳಿಕ 1988ರಲ್ಲಿ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿಗೆ ಬಂದು ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ...

READ MORE

Related Books