ವಸುಂಧರೆ

Author : ಸಿರಿಮೂರ್ತಿ ಕಾಸರವಳ್ಳಿ

Pages 176

₹ 150.00




Year of Publication: 2021
Published by: ನಿವೇದಿತ ಪ್ರಕಾಶನ
Address: #3437, 1ನೇ ಮಹಡಿ, 4ನೇ ಮುಖ್ಯ ರಸ್ತೆ, 9ನೇ ಅಡ್ಡ ರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ ಬೆಂಗಳೂರು

Synopsys

‘ವಸುಂಧರೆ’ ಕೃತಿಯು ಸಿರಿಮೂರ್ತಿ ಕಾಸರವಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯ ಕುರಿತು ಅಶ್ವಥ ನಾರಾಯಣ ಅವರು, `ಈ ಕಥೆಯು ನಮ್ಮ ಸಂಸ್ಕೃತಿಯ ಚಿತ್ರಣವನ್ನು ಹೆಮ್ಮೆಯಾಗಿ ಸ್ವೀಕರಿಸಿದ ಘಟನೆಗಳಿಂದ ಕೂಡಿದೆ. ಪ್ರತಿಯೊಂದು ಘಟನೆಯಲ್ಲೂ ಹಲವಾರು ಸಂಸ್ಕೃತಿಯ ಬಿಂದುಗಳು ಎದ್ದು ಕಾಣುತ್ತಿವೆ. ಕಥೆಯ ಭಾಷೆ ಸರಳವೂ ಸುಂದರವೂ ಆಗಿದ್ದು ತುಂಬಾ ಸುಂದರವಾದ ಎಲ್ಲರೂ ಮೆಚ್ಚುವ ಕಥೆ ಇದು ಎಂಬುವುದರಲ್ಲಿ ಸಂಶಯವಿಲ್ಲ. ಪ್ರತಿ ಪಾತ್ರಗಳಲ್ಲೂ ಅವ್ಯಕ್ತವಾದ ಎಷ್ಟೊ ಭಾವನೆಗಳು ಅವರವರ ಮಾತುಗಳಿಂದ ಧ್ವನಿಯಾಗಿ ಹೊರಬಂದಿವೆ. ನನಗೆ ತುಂಬಾ ಇಷ್ಟವಾದ ಕಥಾ ನಿರೂಪಣೆ ಇದು’ ಎಂದು ಪ್ರಶಂಸಿಸಿದ್ದಾರೆ.

ಪ್ರಭಾಕರ್ ಕಾರಂತ ಅವರು ಕಾದಂಬರಿಯನ್ನು ಹೀಗೆ ವಿಶ್ಲೇಷಿಸಿದ್ದಾರೆ; ಮೂರು ತಲೆಮಾರಿನ ಹರಿವಿನಲ್ಲಿ ಸಾಗುವ ‘ವಸುಂಧರೆ’ ಕಾದಂಬರಿಯನ್ನು ಬರೆಯಲು ಅಕ್ಕ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಹತ್ತಾರು ಪುಸ್ತಕಗಳನ್ನು ಹೊಸತಾಗಿ ಓದಿಕೊಂಡು ತನ್ನ ಕಾದಂಬರಿಗೆ ಗಟ್ಟಿ ತಳಪಾಯ ಹಾಕಿದ್ದಾರೆ. ಹಲವಾರು ತಜ್ನರೊಂದಿಗೆ ಸಮಾಲೋಚಿಸಿದ್ದಾರೆ.  ಕೃತಿಯೊಂದನ್ನು ಹೊರತರಲು ಎಷ್ಟುಶ್ರಮ ವಹಿಸಬೇಕೋ ಅಷ್ಟನ್ನೂ ಅವರು ಪೂರೈಸಿದ್ದಾರೆ.  ಹಾಗೆಂದೇ ಗಡಿಬಿಡಿಗೆ ತೋಚಿದ್ದು ಗೀಚಿ ಬರೆದ ಕಾದಂಬರಿಯಲ್ಲ ಎಂದು ನಾನಂತೂ ಧೈರ್ಯವಾಗಿ ಹೇಳಬಲ್ಲೆ. ಕಾದಂಬರಿಯಲ್ಲಿ ವಿವಿಧ ಹಿಂದೂ ಸಂಸ್ಕಾರಗಳ ವಿವರಗಳಿದ್ದು ತಜ್ನರೊಂದಿಗೆ ಸಮಾಲೋಚಿಸಿ ಸೂತ್ರ ಹೇಳಿದ್ದನ್ನು ಆಚಾರದಲ್ಲಿರುವುದನ್ನು ಚಾಚೂ ತಪ್ಪದೆ ಅಳವಡಿಸಲಾಗಿದ್ದು ವಿಶೇಷ ಸಂಗತಿ. ಹೆಣ್ಣನ್ನು ನಾಲ್ಕು ಗೋಡೆಗಳ ನಡುವಿನ ತೊತ್ತಾಗಿಸುವ ಸಮಾಜದ ಕುರಿತು ಅಕ್ಕನ ಮನದಲ್ಲಿ ಉದ್ದಕ್ಕೂ ಒಂದು ಪ್ರತಿಭಟನೆ ಇದ್ದೇ ಇತ್ತು. ಸಂಸ್ಕೃತಿಯ ತಳಹದಿಯಲ್ಲೇ ಜೀವನ ನಡೆಸಿ ಯಶಸ್ವಿಯಾಗಿ ಸಾರ್ಥಕ ಬದುಕನ್ನು ಬಾಳುವ ವಸುಂಧರೆಯ ಪಾತ್ರದ ಮೂಲಕ ತನ್ನ ಪ್ರತಿಭಟನೆಯನ್ನು ಪ್ರಕಟಿಸಿದ್ದಾಳೆ ಎಂದು ಪ್ರಶಂಸಿಸಿದ್ದಾರೆ. 

 

About the Author

ಸಿರಿಮೂರ್ತಿ ಕಾಸರವಳ್ಳಿ

ಲೇಖಕಿ ಸಿರಿಮೂರ್ತಿ ಕಾಸರವಳ್ಳಿ ಅವರು ಮೂಲತಃ ಹೊಸನಗರದ ಹುಲಿಕಲ್ ನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರ ಅನೇಕ ಕತೆಗಳು ನಾಡಿವ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಚಿತ್ರಕಲೆ ಹಾಗೂ ಬರಹ ಅವರ  ಆಸಕ್ತಿದಾಯಕ ಕ್ಷೇತ್ರ. ಮೈಸೂರು ಚಿತ್ರಕಲೆ, ತಂಜಾವೂರ್ ಚಿತ್ರಕಲೆ, ಬೌಟಿಕ್ ಚಿತ್ರಕಲೆ, ಕಲಾಕೃತಿ, ದೂರದರ್ಶನದಲ್ಲಿ ಕಸೂತಿ ಕಲೆ ಪ್ರದರ್ಶನ, ಮತ್ತು ಪರಿಕಲ್ಪನೆಯ ಹಲವು ನಾಟಕಗಳ ಪ್ರದರ್ಶನಗಳನ್ನು ನೀಡಿರುತ್ತಾರೆ. ಚಂದನ ವಾಹಿನಿಯಲ್ಲಿ ಸಾಹಿತ್ಯ ಕುರಿತು ಸಂದರ್ಶನ ನೀಡಿದ್ದು, ಆಕಾಶವಾಣಿ ವನಿತಾ ವಿಭಾಗದಲ್ಲಿ ಕತೆ ಪ್ರಸ್ತುತಿಯನ್ನು ಮಾಡಿರುತ್ತಾರೆ. ಕೃತಿಗಳು : ಭಕ್ತಿ ಭಾವ ಸಿರಿ (ಭಕ್ತಿ ಗೀತೆಗಳ ಸಂಕಲನ), ನಡೆದು ಬಂದ ...

READ MORE

Related Books