ಮಂಡೋದರಿ

Author : ಕುಮಾರಸ್ವಾಮಿ ತೆಕ್ಕುಂಜ

Pages 110

₹ 100.00
Year of Publication: 2017
Published by: ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನ(ರಿ)
Address: ಅನುಗ್ರಹ, ಶಿವಗಿರಿನಗರ, ಕುಳಾಯಿ-ಹೊಸಬೆಟ್ಟು, ಮಂಗಳೂರು- 575019
Phone: 08242409563

Synopsys

‘ಮಂಡೋದರಿ’ ಕುಮಾರಸ್ವಾಮಿ ತೆಕ್ಕುಂಜ ಅವರ ಪೌರಾಣಿಕ ಕಾದಂಬರಿ ಪ್ರಕಾರಕ್ಕೆ ಇದೀಗ ಹೊಸದಾಗಿ ಸೇರುತ್ತಿರುವ ಇನ್ನೊಂದು ಕೃತಿಯಾಗಿದೆ. ಈ ಕೃತಿಗೆ ಎಸ್.ಆರ್. ವಿಜಯಶಂಕರ ಅವರ ಮುನ್ನುಡಿಯಿದೆ. ನೀಳ್ಗತೆಯೊಂದರ ವಿಸ್ತಾರದಷ್ಟೇ ಪುಟಗಳ ಸಂಖ್ಯೆ ಇರುವ ಕೃತಿಯಾದರೂ, ಪಾತ್ರಗಳ ವೈವಿಧ್ಯ ಹಾಗೂ ಅವುಗಳು ಪ್ರತಿನಿಧಿಸುವ ವಿಭಿನ್ನ ದೃಷ್ಟಿಕೋನಗಳ ಕಾರಣದಿಂದ ಈ ಕೃತಿ ಕಾದಂಬರಿಯ ಸಾಧ್ಯತೆಗಳನ್ನು ಮೈಗೂಡಿಸಿಕೊಂಡಿದೆ. ಎಲ್ಲರಿಗೂ ತಿಳಿದಿರುವ ಹಾಗೇ ಲಂಕಾಧಿಪತಿಯಾದ ರಾವಣನ ಪತ್ನಿ ಮಂಡೋದರಿ. ಅವಳು ನಿತ್ಯ ಸ್ಮರಿಸಬೇಕಾದ ಐದು ಜನ ಪತಿವ್ರತೆಯರಲ್ಲಿ ಒಬ್ಬರೆಂದು ಪರಿಗಣಿತಳಾದ ಪವಿತ್ರಾತ್ಮ. ವೃತ್ತಿಯಿಂದ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಹಿರಿಯ ಹುದ್ದೆಯ ಇಂಜಿನಿಯರ್ ಆಗಿರುವ ತೆಕ್ಕುಂಜ ಕುಮಾರಸ್ವಾಮಿ ಅವರು ಮಂಡೋದರಿ ಸುತ್ತ ಹರಡಿರುವ ಈ ಪಾವಿತ್ರ್ಯಕ್ಕೆ ಕಾರಣವೇನು ಎಂಬುದನ್ನು ಆಸಕ್ತಿಯಿಂದ ಹುಡುಕುತ್ತಾ ಹೋದಾಗ ಈ ಕಾದಂಬರಿ ಹುಟ್ಟಿದೆ. ಅವರ ಸಂಶೋಧನೆ, ಅಧ್ಯಯನಗಳಿಂದ ಸಂಗ್ರಹಿಸಿದ ವಿವರಗಳು ಹೊಸತೊಂದು ಕಲ್ಪನೆಯಲ್ಲಿ ಕಾದಂಬರಿಯಾಗಿ ಮೂಡಿದೆ ಎಂದಿದ್ದಾರೆ ಎಸ್.ಆರ್. ವಿಜಯಶಂಕರ. ತೆಕ್ಕುಂಜೆಯವರು ಪುರಾಣದ ಪಾತ್ರಗಳನ್ನು ಅವುಗಳ ಪರಿಪ್ರೇಕ್ಷ್ಯದಲ್ಲಿ ಸ್ವೀಕರಿಸಿ, ಅವಕ್ಕೊಂದು ಪೌರಾಣಿಕ ನೆಲೆಗಳನ್ನು ನೀಡಿ ಇಂದಿನ ಕಾಲದ ಮನೋಭಾವದಲ್ಲಿ ಬರೆದಿದ್ದಾರೆ. ಇದು ಅವರ ಮೊದಲ ಪ್ರಯತ್ನ. ಅವರ ಸೃಷ್ಟಿಶೀಲತೆ ಮುಂದೆ ಇನ್ನಷ್ಟು ಹೊಸ ವಿಚಾರ, ಚಿಂತನೆ, ಕಲ್ಪನೆಗಳಿಂದ ಬೆಳೆಯಲಿ ಎಂದು ಹಾರೈಸಿದ್ದಾರೆ.

About the Author

ಕುಮಾರಸ್ವಾಮಿ ತೆಕ್ಕುಂಜ

ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್‌'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...

READ MORE

Related Books