ಜೀವ ಜಲ

Author : ಜಾಣಗೆರೆ ವೆಂಕಟರಾಮಯ್ಯ

Pages 656

₹ 300.00
Year of Publication: 2018
Published by: ಜಾಣಗೆರೆ ಪತ್ರಿಕೆ ಪ್ರಕಾಶನ ಬೆಂಗಳೂರು

Synopsys

ಹಳ್ಳಿ ಬಿಟ್ಟು ನಗರ ಸೇರಿ ಅಲ್ಲಿಯೇ ಜೀವನ ರೂಪಿಸಿಕೊಳ್ಳುವ ಈಗಿನ ತಲೆಮಾರಿನ ಜನರ ನಡುವೆ ಭಿನ್ನ ಎನಿಸುವ ನಿಲುವಿನ ಇಬ್ಬರು ಗೆಳೆಯರ  ಬಗ್ಗೆ ಈ ಕಾದಂಬರಿಯಲ್ಲಿ ವಿವರಿಸಲಾಗಿದೆ. ತುಂಬಾ ಸಂಬಳ ಬರುವ ಕೆಲಸ ಬಿಟ್ಟು ಹುಟ್ಟೂರಾದ ಹಳ್ಳಿ ಸೇರುತ್ತಾರೆ. ಒಂದಾನೊಂದು ಕಾಲದಲ್ಲಿ ದೇಶವೆಲ್ಲಾ ಬಹುಪಾಲು ಹಳ್ಳಿಗಳಿಂದಲೇ ಕೂಡಿತ್ತು.  ಅದು ನಿಜಕ್ಕೂ ಗ್ರಾಮ ಭಾರತವಾಗಿತ್ತು. ಈಗ ಇಂತಹ ಗ್ರಾಮ ಭಾರತದ ಕುರುಹು ಅಷ್ಟಿಷ್ಟು ಇನ್ನೂ ಉಳಿದುಕೊಂಡಿದೆ. ಹೀಗೊಂದು ಹಳ್ಳಿಯ ಈ ಯುವಕರು ನಕ್ಸಲಿಸಂ ಚಳುವಳಿಯ ಕುರಿತು ಒಲವು ಬೆಳೆಸಿಕೊಂಡಿರುತ್ತಾರೆ. ಆದರೆ ಚಳುವಳಿಯ ಆಳಕ್ಕೆ ಧುಮುಕದೆ, ಸಮಾಜದೊಂದಿಗೆ ಬೆರೆತುಕೊಂಡೇ ಸುಧಾರಣೆ, ಕ್ರಾಂತಿ ಸಾಧ್ಯವಾಗಿಸಿಕೊಳ್ಳುತ್ತಾರೆ. ಗ್ರಾಮ ಭಾರತದ ಆದರ್ಶ ಬಹುತೇಕ ಕಡೆಗಣನೆಯಾಗಿರುವ ಈ ಕಾಲಘಟ್ಟದ ದುರಂತಗಳನ್ನು ಚರ್ಚಿಸುವ ಸನ್ನಿವೇಶಗಳನ್ನು ಈ  ಕಾದಂಬರಿಯಲ್ಲಿ ನೀಡಲಾಗಿದೆ. ಜಾತಿ, ಮತಗಳ ಮೂಲಕ ಜನರಲ್ಲಿ ಬಿರುಕು ಮೂಡಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವ ರಾಜಕೀಯ ಶಕ್ತಿಗಳನ್ನು ಮೀರಲು ಜನರ ಸಂಘಟನಾ ಶಕ್ತಿ ಸಮರ್ಥವಿದೆ ಎಂಬುದರ ಕುರಿತು ವಿವರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ.

About the Author

ಜಾಣಗೆರೆ ವೆಂಕಟರಾಮಯ್ಯ
(05 June 1949)

ಹಿರಿಯ ಪತ್ರಕರ್ತ, ಲೇಖಕ ಜಾಣಗೆರೆ ವೆಂಕಟರಾಮಯ್ಯ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜಾಣಗೆರೆಯವರು. ಓದಿದ್ದು ಬಿ.ಕಾಂ ಆದರೂ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಪತ್ರಕರ್ತರಾಗಿ  ಪ್ರಪಾತ, ನನ್ನ ನಲ್ಲ ನನ್ನ ಜನ, ಕಪ್ಪು ನ್ಯಾಯ, ದಡ, ನೆಲೆ, ಗರ, ಮಹಾನದಿ, ಮಾಯಾನಗರಿಯಲ್ಲಿ ಮಾಯಾಶಿಲ್ಲಿ, ಸುಡುಗುಂಡುಗಳ ನಾಡಲ್ಲಿ ಶಾಂತಿಯ ಕನಸು, ಸವೆಯದ ಹಾದಿ, ಎದೆಯಾಳ, ಬೆಂಕಿ ಮತ್ತು ಬೆಳಕು ಇವರ ಪ್ರಮುಖ ಕೃತಿಗಳು.  ಇವರಿಗೆ ವಿ.ನಾಗರಾಜರಾವ್ ಸಮೂಹ ಮಾಧ್ಯಮ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಚ್.ಕೆ. ವೀರಣ್ಣಗೌಡ ಪ್ರಶಸ್ತಿ, ವಿ.ಚಿ. ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ, ...

READ MORE

Related Books