ಹವನ

Author : ಮಲ್ಲಿಕಾರ್ಜುನ ಹಿರೇಮಠ

Pages 216

₹ 150.00
Year of Publication: 2019
Published by: ಸಂಗಾತ ಪುಸ್ತಕ
Phone: 9341757653

Synopsys

ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರ ಕಾದಂಬರಿ ’ಹವನ’. ಇದು ಮೂರನೆಯ ಮುದ್ರಣ. ಈ ಕೃತಿಯು  ಒಂದು ಬುಡಕಟ್ಟು ಜನಾಂಗದ ಜೀವನ ವಿಧಾನಗಳನ್ನು ಸಾಂಸ್ಕೃತಿಕ ಪಲ್ಲಟಗಳನ್ನು ತಿಳಿಸುತ್ತದೆ‌. ಕಾದಂಬರಿಯು ಮುಖ್ಯವಾಗಿ ಇಪ್ಪತ್ಮೂರು ಭಾಗಗಳನ್ನು ಹೊಂದಿದ್ದು, ಮೊದಲಾರ್ಧ ಹತ್ತೊಂಬತ್ತು ಅಧ್ಯಾಯಗಳು ಕಾದಂಬರಿಯ ಪ್ರಮುಖ ಪಾತ್ರವಾಸ ಬಸಪ್ಪ ಮಾಸ್ತರರ ವಿಭಿನ್ನ ನಿರೂಪಣೆಯ ಮೂಲಕ ಕಲ್ಲೂರ ತಾಂಡಾದ ಲಂಬಾಣಿ ಜನಾಂಗದ ಬದುಕಿನ ಆಚಾರ-ವಿಚಾರಗಳು, ಸಂಪ್ರದಾಯಗಳನ್ನು, ಅವರ ಮನದಲ್ಲಿ ನೆಲೆಯೂರಿರುವ ಮೌಢ್ಯಗಳನ್ನು, ದೈವಿಕ ನಂಬಿಕೆಗಳನ್ನು, ನಿಷ್ಠೆಯ ಸ್ವರೂಪವನ್ನು, ನಾಯಕ ಎನ್ನುವ ಪದಕ್ಕಿರುವ ಗೌರವವನ್ನು, ಸೋಮಲ್ಯಾನ ನಾಯಕತ್ವದ ಬದುಕನ್ನು, ಗೋಮಾಳವನ್ನು ಕೃಷಿಭೂಮಿಯನ್ನಾಗಿಸಿ ದುಡಿಯಲು ಪ್ರೇರೇಪಿಸಿದ ಘಟನಗೆಳನ್ನು, ಊರ ಹಬ್ಬದ ಸಡಗರವನ್ನು, ಜಾತ್ರೆಗಳ ಸಂತಸವನ್ನು, ಸಸಿ ಹಬ್ಬದ ಮಹತ್ವವನ್ನು, ಸೇವಾಲಾಲನ ಬದುಕಿನ ಚಿತ್ರಣ ಹಾಗೂ ಮಹಿಮೆಯನ್ನ ಹೇಳುತ್ತಲೇ ಕಲ್ಲೂರು ತಾಂಡಾದ ಜೀವನ ದರ್ಶನವನ್ನು ಮಾಡಿಸುತ್ತವೆ.

ಕಾದಂಬರಿ ಮೊದಲಾರ್ಧ ಲಂಬಾಣಿ ಜನಾಂಗದ ನೆಲೆ ಮೂಲಬೇರಿನ ಕುರಿತಾದ ಚಿತ್ರಣವಾದರೆ, ಕೊನೆಯಾರ್ಧದಲ್ಲಿ ಸೋಮಲ್ಯಾನ ಮಗ ಲೋಕಿಯೇ ಆ ಮೂಲಬೇರಿಗೆ ಕತ್ತರಿ ಹಾಕಿ, ಸಂಪ್ರದಾಯಗಳನ್ನು ಗಾಳಿಗೆ ತೂರಿ ಬದಲಾವಣೆಯೊಂದಿಗೆ ಓಟಕ್ಕಿಳಿದು ಭೂತಾಯಿಯನ್ನು ಬಗೆದು ಕಲ್ಲುಗಣಿ ಮಾಡಿದ ಚಿತ್ರಣವಿದೆ.

'ಹಿರಿಯ ವಿಮರ್ಶಕ -ಸಿ.ಎನ್. ರಾಮಚಂದ್ರನ್  ಅವರು ’ಮಲ್ಲಿಕಾರ್ಜುನ ಹಿರೇಮಠ ಶಿಕ್ಷಣ ವಂಚಿತರಾಗಿ, ಬಡತನ-ರೋಗರುಜಿನಗಳಿಂದ ಬಳಲುವ ಆದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಭಾರತದ ನೂರಾರು ಬುಡಕಟ್ಟು ಜನಾಂಗಗಳ “ಪ್ರಗತಿ'ಯ ಬಗ್ಗೆ ಇಂದು ಭಾರತದಲ್ಲಿ ಎರಡು ಪರಸ್ಪರ ವಿರುದ್ದ ವಿಚಾರ ಧಾರೆಗಳಿವೆ. ಇವೆರಡೂ ಮಾರ್ಗಗಳು ಅಥವಾ ವೈಚಾರಿಕ ಛಾಲೆಗಳು ತಮ್ಮವೇ ಆದ ಮಿತಿಗಳಿಂದ ಕೂಡಿವೆ. ಈ ಸಮಸ್ಯೆಗೆ ಸರಳ ಉತ್ತರ ಹಾಗೂ ಪರಿಹಾರಗಳೇನಿಲ್ಲ ಎಂದು ಪರಿಣಾಮಕಾರಿಯಾಗಿ ದರ್ಶಿಸುವುದೇ ತವಕ ಕಾದಂಬರಿಯ ವಿಶಿಷ್ಟ ಸಾಧನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹವನ ಕಾದಂಬರಿಯು 2001ರಲ್ಲಿ ಮೊದಲ ಬಾರಿಗೆ ಹಾಗೂ 2013ರಲ್ಲಿ ಎರಡನೆಯ ಮುದ್ರಣ ಕಂಡಿತ್ತು.

About the Author

ಮಲ್ಲಿಕಾರ್ಜುನ ಹಿರೇಮಠ
(06 June 1946)

ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು.  ‘ಅಮೀನಪುರದ ಸಂತೆ,  ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು.  ಅವರ ಸಾಹಿತ್ಯ ಸೇವೆಗೆ ‘ಕನಾಟಕ ...

READ MORE

Related Books