ಅಂತರ

Author : ಜಯಪ್ರಕಾಶ ಮಾವಿನಕುಳಿ

Pages 88

₹ 100.00
Year of Publication: 2021
Published by: ಕಾವ್ಯಕಲಾ ಪ್ರಕಾಶನ
Address: #1273, 7ನೇ ಅಡ್ಡರಸ್ತೆ, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9964124831, 9035228290

Synopsys

ಲೇಖಕ ಡಾ. ಜಯಪ್ರಕಾಶ ಮಾವಿನಕುಳಿ ಅವರ ಮೊದಲ ಕಾದಂಬರಿʼ ಅಂತರʼ. ಇದು ಹುಡುಗ ಬರೆದ ಹುಡುಗಿಯ ಕಥೆ ಎಂದು ಲೇಖಕರು ಉಪ ಶೀರ್ಷಿಕೆ ಕೊಟ್ಟಿದ್ದಾರೆ. ಈ ಕಾದಂಬರಿಯ ಬೆನ್ನುಡಿಯಲ್ಲಿ ಡಾ. ಯು. ಆರ್‌. ಅನಂತಮೂರ್ತಿ ಅವರು, ʼಅಂತರʼ ಓದುವುದು ನನಗೆ ಪ್ರಿಯವಾದ, ಮಧುರವಾದ ಅನುಭವವಾಯಿತುʼ. ಎಂದು ಹೇಳಿದರೆ, ಡಾ. ಹಾ. ಮಾ. ನಾಯಕ ಅವರು ʼ ಯಾವ ಫೋಸು ಇಲ್ಲದ ಇಷ್ಟು ಉಲ್ಲಸಿತ ಬರವಣಿಗೆಯನ್ನು ನಾನು ಓದಿರಲಿಲ್ಲ. ಈ ಪುಸ್ತಕ ಓದಿದ ಮರುದಿನ ನಾನು ಗಂಗೋತ್ರಿಗೆ ಹೋಗುತ್ತಿದ್ದಾಗ ಕ್ಯಾಂಟೀನಿನ ಎದುರುಗಡೆಯಲ್ಲಿ ಜಯಪ್ರಕಾಶರ ಪ್ರಭಾಕರ ಮತ್ತು ಸುವರ್ಣ ಇಲ್ಲೇ ಎಲ್ಲೋ ಇರಬಹುದೆಂದೆನಿಸಿ ಆ ಕಡೆ ಕಣ್ಣು ಹಾಯಿಸಿದೆ! ಒಂದು ಕೃತಿ ಇಷ್ಟು ಮಾಡುವುದು ತೀರಾ ಸಾಮಾನ್ಯದ ಗುಣವಲ್ಲ ಎಂದು ಪ್ರಶಂಸಿಸಿದ್ದಾರೆ. ಈ ಕೃತಿಯು 1980 ರಲ್ಲಿ ಮೊದಲು ಪ್ರಕಟಗೊಂಡಿತ್ತು. 

About the Author

ಜಯಪ್ರಕಾಶ ಮಾವಿನಕುಳಿ
(05 May 1951)

ಜಯಪ್ರಕಾಶ ಮಾವಿನಕುಳಿ ವೃತ್ತಿಯಲ್ಲಿ ಓರ್ವ ಕನ್ನಡ ಸಾಹಿತ್ಯದ ಕವಿ, ಕಾದಂಬರಿಕಾರ, ವಿಮರ್ಶಕ, ಸಂಪಾದಕ, ಆಕಾಶವಾಣಿಯ ಧ್ವನಿ ಕಲಾವಿದ, ನಾಟಕಕಾರ, ರಂಗ ನಿರ್ದೇಶಕ ಮತ್ತು ರಂಗಭೂಮಿ ಚಲನಚಿತ್ರ ನಟ. ಕನ್ನಡ ಸಾಹಿತ್ಯಕ್ಕೆ ಇವರು ನಾಟಕಗಳು, ಕಾದಂಬರಿ, ಸಣ್ಣಗಳು, ಕಾವ್ಯ ಮತ್ತು ಇತರರೊಡನೆ ಸಂಪಾದನೆಯು ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ಕೊಟ್ಟಿರುವುದು ಇವರ ಉಡುಪಿಯ ಎಂ.ಜಿ.ಎಂ ಕಾಲೇಜಿನ ಪ್ರಾಚಾರ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books