ಆಳೌ ಕರ್ಣಾಟಕದೇವಿ

Author : ವಸುದೇವ ಭೂಪಾಲಂ

Pages 183

₹ 3.00




Year of Publication: 1955
Published by: ಸತ್ಯಶೋಧನ ಪ್ರಕಟನ ಮಂದಿರ
Address: ಕೋಟೆ, ಬೆಂಗಳೂರು

Synopsys

ವಿಜಯನಗರದ ಶ್ರೀ ಕೃಷ್ಣದೇವರಾಯನ ಸಾಮ್ರಾಜ್ಯ ಹಾಗೂ ಪತನದ ಸುದೀರ್ಘ ಐತಿಹಾಸಿಕ ಕಾದಂಬರಿಯನ್ನು ವಸುದೇವ ಭೂಪಾಲಂ ಬರೆದಿದ್ದಾರೆ. ಕರ್ಣಾಟಕವನ್ನು ಸೋಲಿಸಲು ಶತ್ರು ಸುಲ್ತಾನರು ಹೆಣೆದ ಕುಟೀಲತೆಗಳು, ಸಮರಾಂಗಣಗಳ ಪರಂಪರೆ, ಶತ್ರುಗಳನ್ನು ಸದೆಬಡಿದ ಪರಿ, ಸಾಳುವ ತಿಮ್ಮನ ಚಾಣಾಕ್ಷತನ, ಅಸಾದಖಾನನ್ ಕಾರಸ್ಥಾನ ಇತ್ಯಾದಿ ಕಾದಂಬರಿಯ ಜೀವಂತಿಕೆಗಳಾಗಿವೆ. ಇತಿಹಾಸದ ಕಗ್ಗಲ್ಲನ್ನು ಕಡೆದು ಉತ್ತಮ ಕಲಾಕೃತಿಯ ಕಾದಂಬರಿ ರೂಪಿಸಿದ್ದಾರೆ ಲೇಖಕರು.

About the Author

ವಸುದೇವ ಭೂಪಾಲಂ

`ದೇವರು ಸತ್ತ' ಕೃತಿಯ ಮೂಲಕ ತಮ್ಮ ಪ್ರಖರ ವೈಚಾರಿಕತೆಯ ವ್ಯಕ್ತಿತ್ವವನ್ನು ತೋರಿದ ವಸುದೇವ ಭೂಪಾಲಂ ಅವರು ಸಾಹಿತ್ಯದ ಇತರೆ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಸಿಡಿಲು, ಒಲವಿನ ಉಪವನ, ಆಳೌ ಕರ್ಣಾಟಕ ದೇವಿ, ಹೆಣ್ಣು (ಕಥೆ-ಕಾದಂಬರಿಗಳು), ತ್ರಿಶೂಲ, ಕಮ್ಮಟವಲ್ಲಭ ಹಾಗೂ ಕಾಲೇಜು ಹುಡುಗಿ (ನಾಟಕಗಳು), ಗೊಂಚಲ್ ಮಿಂಚು, ಸ್ವಾತಂತ್ಯ್ರವೀರರು (ಜೀವನ ಚರಿತ್ರೆ) ಹೊಸಹಾಡು, ಪ್ರಳಯ ದುಂದುಭಿ, ರಂಜನ (ಕವಿತೆಗಳು), ಹೂ, ಹಹಹ್ಹಾ, ಗುಮ್ಮ ಬಂತು (ಶಿಶುಗೀತೆಗಳು). ...

READ MORE

Related Books