ಮದನಿಕೆ (ದಿ ಲಾಸ್ಟ್‌ ಸೀನ್‌)

Author : ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ

Pages 137

₹ 120.00




Year of Publication: 2019
Published by: ಟೋಟಲ್‌ ಕನ್ನಡ
Address: #638, 31ನೇ ಅಡ್ಡರಸ್ತೆ, 10ನೇ ಬಿ ಮುಖ್ಯರಸ್ತೆ, ಪವಿತ್ರ ಹೋಟೆಲ್‌ ಎದುರಿರುವ ರಸ್ತೆ, ಜಯನಗರ 4ನೇ ಬಡಾವಣೆ, ಬೆಂಗಳೂರು-560011
Phone: 9243455672

Synopsys

‘ಮದನಿಕೆ, ದಿ ಲಾಸ್ಟ್‌ ಸೀನ್‌' -ಸಸ್ಪೆನ್ಸ್‌ ಥ್ರಿಲ್ಲರ್‌ ಕಾದಂಬರಿ. ರಮೇಶ್‌ ಶೆಟ್ಟಿಗಾರರ ಎರಡನೆಯ ಈ ಕೃತಿ. ಚರಿತ್ರೆಯ ಒಂದು ತುಣುಕನ್ನು ವರ್ತಮಾನದಲ್ಲಿ ನಡೆಯುವ ರೋಚಕ ಘಟನೆಯ ಸುತ್ತ ಕಥೆ ಹೆಣೆದಿದ್ದಾರೆ. ಕಾದಂಬರಿಕಾರ ಕೆ.ಎನ್. ಗಣೇಶಯ್ಯ ಅವರು ‘ಮದನಿಕೆ, ದಿ ಲಾಸ್ಟ್‌ ಸೀನ್” ಕಾದಂಬರಿಯು ಕಳೆದ ಕೆಲವು ದಶಕಗಳಿಂದ ಜಗತ್ತಿನಾದ್ಯಂತ ಕಾದಂಬರಿ ಲೋಕದಲ್ಲಿ ವಿಕಾಸಗೊಳ್ಳುತ್ತಿರುವ ಒಂದು ಹೊಸನಾಂದಿಗೆ ಸಾಕ್ಷಿಯಾಗಿದೆ,ಎನ್ನಬಹುದು. ಚರಿತ್ರೆಯನ್ನು ವರ್ತಮಾನದೊಂದಿಗೆ ಬೆರೆಸಿ ಓದುಗರಿಗೆ ಸುಂದರ ಕಥಾಹಂದರವನ್ನು ಕಟ್ಟಿಕೊಡುವ ಈ ಹೊಸ ಮಾದರಿಯು ಪ್ರಪಂಚದಾದ್ಯಂತ ಹಲವಾರು ಭಾಷೆಗಳಲ್ಲಿ ಬೇರೂರಿವೆ. ಮೊದಲ ಪುಟದಿಂದ ಹಿಡಿದಿಡುವ ಈ ಕಥಾಹಂದರ ಓದುಗರ ಮೆಚ್ಚುಗೆಯನ್ನು ಪಡೆಯುವುದರಲ್ಲಿ ಅನುಮಾನವಿಲ್ಲ’ ಎಂದಿದ್ದಾರೆ. 

About the Author

ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ
(13 December 1969)

ಕತೆಗಾರ ರಮೇಶ್‌ ಶೆಟ್ಟಿಗಾರ್‌ ಮಂಜೇಶ್ವರ ಅವರು (ಜನನ: 1969 ಡಿಸೆಂಬರ್‌ 13) ಮಂಜೇಶ್ವರದ ಕೊಡ್ಲಮೊಗರುದವರು. ಕೊಡ್ಲಮೊಗರು ಹಾಗೂ ಮಂಗಳೂರಿನಲ್ಲಿ ಶಿಕ್ಷಣ ಪಡೆದು, ವಾಣಿಜ್ಯ ವಿಭಾಗದಲ್ಲಿ ಪದವೀಧರರು. ಅಂತಾಷ್ಟ್ರೀಯ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪೂರ್ಣಸತ್ಯ, ಮದನಿಕೆ ಹಾಗೂ ಹಾಂಟೆಂಡ್‌ ಹೊಸಮನೆ ಇವರ ಕೃತಿಗಳು. ...

READ MORE

Related Books