ಸುದರ್ಶನ

Author : ಬೆಟಗೇರಿ ಕೃಷ್ಣಶರ್ಮ (ಆನಂದಕಂದ)

Pages 162

₹ 1.00
Year of Publication: 1941
Published by: ಬೆಟಗೇರಿ ಕೃಷ್ಣಶರ್ಮ
Address: ಜಯಂತಿ ಕಾರ್ಯಾಲಯ, ಧಾರವಾಡ

Synopsys

ಧಾರವಾಡದ ಮನೋಹರ ಗ್ರಂಥಮಾಲೆಯು 1933ರಲ್ಲಿ ಸುದರ್ಶನ ಕಾದಂಬರಿಯನ್ನು ಪ್ರಕಟಿಸಿತ್ತು. ನಂತರ ಬೆಟಗೇರಿ ಕೃಷ್ಣಶರ್ಮ ಅವರದ್ದೇ ಆದ ಜಯಂತಿ ಪ್ರಕಾಶನವು ಈ ಕೃತಿಯನ್ನು 2ನೇ ಆವೃತ್ತಿಯಾಗಿ ಪ್ರಕಟಿಸಿತ್ತು. ಸಾಹಿತಿ ವಿ.ಕೃ.ಗೋಕಾಕ ಅವರು ಕೃತಿಗೆ ಮುನ್ನುಡಿ ಬರೆದು ’ಕಥೆಯ ಬಹುತರ ಭಾಗವೆಲ್ಲ ಸಂಭಷಣೆ ರೂಪದಲ್ಲಿದೆ. ಇದೊಂದು ಸಣ್ಣ ನಾಟಕವಾಗಬಹುದಿತ್ತು. ಆದರೆ, ನಾಟಕವಾಗಿದ್ದರೆ ಈಗ ನಡುವೆ ಬರುವ ಕೆಲವು ಅಂದವಾದ ವರ್ಣನೆಗಳು ಲಯವಾಗುತ್ತಿದ್ದವು’ ಎಂದು ಈ ಕೃತಿಯ ಸೊಬಗನ್ನು ಪ್ರಶಂಸಿಸಿದ್ದಾರೆ.

About the Author

ಬೆಟಗೇರಿ ಕೃಷ್ಣಶರ್ಮ (ಆನಂದಕಂದ)
(16 April 1900 - 30 October 1982)

ಬೆಟಗೇರಿ ಕೃಷ್ಣಶರ್ಮರ ಕಾವ್ಯನಾಮ-ಆನಂದಕಂದ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ 1900ರ ಏಪ್ರಿಲ್ 16ರಂದು ಜನಿಸಿದರು. ತಂದೆ ಶ್ರೀನಿವಾಸರಾಯರು; ತಾಯಿ ರಾಧಾಬಾಯಿ..  ಕೃಷ್ಣಶರ್ಮರು 12ನೇ  ವರ್ಷದವನಿರುವಾಗ ತಂದೆ, 15ನೇ ವರ್ಷಕ್ಕೆ ಅಣ್ಣ ಹಣಮಂತರಾಯ, 18ನೇ ವರ್ಷಕ್ಕೆ ತಾಯಿ ತೀರಿಕೊಂಡರು. ಸ್ವತಃ ಕೃಷ್ಣಶರ್ಮರೆ ತಮ್ಮ 14ನೇ ವಯಸ್ಸಿನಲ್ಲಿ  ವಿಷಮಶೀತ ಜ್ವರ ಹಾಗೂ 15ನೇ ವಯಸ್ಸಿಗೆ ಪ್ಲೇಗ್ ನಿಂದ ಬಳಲಿ ಜೀವನುದ್ದಕ್ಕೂ ದುರ್ಬಲ ಕೈ-ಕಾಲುಗಳನ್ನು ಹೊಂದಬೇಕಾಯಿತು. 1928ರಲ್ಲಿ ತುಳಸೀಬಾಯಿಯೊಂದಿಗೆ ಮದುವೆ. ಕೃಷ್ಣಶರ್ಮರು 56 ವಯಸ್ಸಿನವರಿದ್ದಾಗ ಮಗಳು  ಹಾಗೂ  ಮರು ವರ್ಷವೇ ಪತ್ನಿ ತೀರಿ ಹೋದರು. 5ನೇ ತರಗತಿವರೆಗೆ ಬೆಟಗೇರಿಯಲ್ಲಿ ಪ್ರಾಥಮಿಕ ಶಿಕ್ಷಣ ನಂತರ, ಕಂಪಿಸುವ ಕೈ-ಕಾಲುಗಳೊಂದಿಗೆ 5 ...

READ MORE

Related Books