ಕನ್ಯಾಮಣಿ

Author : ಕೃಷ್ಣಮೂರ್ತಿ ಪುರಾಣಿಕPublished by: ಇಂದಿರಾ ಪ್ರಕಾಶನ
Address: ನಂ,972ಸಿ, 4'ಇ 'ಬ್ಲೋಕ್,10ನೇ 'ಎ 'ಮುಖ್ಯ ರಸ್ತೆ, ರಾಜಾಜಿ ನಗರ ಬೆಂಗಳೂರು

Synopsys

ಕಾದಂಬರಿಕಾರ ಕೃಷ್ಣ ಮೂರ್ತಿ ಪುರಾಣಿಕ ಅವರ ಸಾಮಾಜಿಕ ಕಾದಂಬರಿ ಕನ್ಯಾಮಣಿ. ಜೀವನದಲ್ಲಿ ಒಂದು ಮಹತಿಯನ್ನು ಸಾಧಿಸಲು ಸಮಗ್ರ ಜೀವನವನ್ನು ಗಂಧದ ಕೊರಡಿನಂತೆ ತೇದ, ನಿತ್ಯ ಜೀವನದಲ್ಲಿ ಕಂಡ ಸತ್ಯಗಳನ್ನು ಎದುರಿಸಿದ ಧೀರ ಕನ್ಯೆ ಕಥಾ ನಾಯಕಿ 'ಗಂಗಾ '. ತಾಯಿ ಇಲ್ಲದ ತಮ್ಮ ತಬ್ಬಲಿ ಮಕ್ಕಳಾದ ಗಂಗಾ ಹಾಗೂ ಅವಳ ತಮ್ಮ ನರಸೂವನ್ನು, ತಮ್ಮಸಂಪನ್ನ ಸಂಪನ್ನ ಹಾಗೂ ಆತನ ಪತ್ನಿ ಸೀತಾಳ ಸುಪರ್ದಿಗೊಪ್ಪಿಸಿ ವೆಂಕೋಬರಾಯರು ಅರೋಗ್ಯ ಕ್ಷೀಣಿಸಿ ಸಾವನ್ನಪ್ಪುತ್ತಾರೆ.ನರಸೂ ವಿನ ಶಿಕ್ಷಣಕ್ಕೂ, ಗಂಗಾಳ ಮದುವೆಗೂ ಬೇಕಾದ ಹಣ ಹಾಗೂ ಚಿನ್ನವನ್ನೂ ಒಪ್ಪಿಸುತ್ತಾರೆ.ಆದರೇ ದುಷ್ಟೇ ಸೀತಾ, ತನ್ನ ಏಕ ಮಾತ್ರ ಸಂತಾನವಾದ ಶ್ರೀಪತಿ ಯ ಮೇಲಿನ ಮೋಹದಿಂದ ಸ್ವಾರ್ಥಿಯಾಗಿ ಮಕ್ಕಳನ್ನು ಲಾಪಟಾಯಿಸಿ, ಮಕ್ಕಳಿಬ್ಬರಿಗೂ ಮಾನಸಿಕ ದೈಹಿಕ ಹಿಂಸೆಯನ್ನು ಕೊಡುತ್ತಾಳೆ.ಸಂಪನ್ನ ಮೂಕ ಪ್ರೇಕ್ಷಕನಾಗುತ್ತಾನೆ ಹೊರತು ಅನ್ಯಾಯವನ್ನು ತಡೆಯುವುದಿಲ್ಲ. ಸಹನೆ ಮೀರಿ ಸಹಿಸಲಸಾದ್ಯವಾದಾಗ ಗಂಗಾ, ನರಸೂ ಇಬ್ಬರೂ ಮನೆ ಬಿಟ್ಟು ಹೊರಟು, ಗಿಡ ಮರಗಳಡಿಯಲ್ಲಿ, ದೇಗುಲದ ಛತ್ರಗಳಲ್ಲಿ ವಿರಮಿಸಿ, ಭಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಾ, ನಗರ ಸೇರಿ, ಮೊದಲೇ ಪರಿಚಿತರಾದ ರಾಮಸ್ವಾಮಿ, ಸುಬ್ಬಲಕ್ಷ್ಮಿ ದಂಪತಿಗಳ ಆಶ್ರಯ ಪಡೆಯುತ್ತಾರೆ... ಪರಿಸ್ಥಿತಿಯ ಒತ್ತಡದಿಂದಾಗಿ ಅಲ್ಲಿಯ ವಾಸವೂ ಅಸಹನೀಯವಾದಾಗ ಅಲ್ಲಿಂದಲೂ ಹೊರಬೀಳುತ್ತಾರೆ.... ತದನಂತರ ಅವರು ಏನೆಲ್ಲಾ ಅನುಭವಿಸಿದರು? ಗಂಗಾಳ ಜಪವಾದ ತಮ್ಮನ ಶಿಕ್ಷಣ ಪೂರೈಸಿತೇ? ಎಲ್ಲ ದುಷ್ಕ್ರತ್ಯ ಗಳನ್ನು ಎಸಗಿದ ಸೀತಾಳ ಗತಿ ಏನಾಯ್ತು?, ಎಂಬುದನ್ನು ಅರಿಯಲು ‘ಕನ್ಯಾಮಣಿ ‘ಎಂಬ ಕಾದಂಬರಿಯನ್ನು ಅಮೂಲಾಗ್ರವಾಗಿ ಓದಬೇಕು.

About the Author

ಕೃಷ್ಣಮೂರ್ತಿ ಪುರಾಣಿಕ
(05 September 1911 - 09 November 1985)

ಅಗ್ರಶ್ರೇಣಿಯ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಹುಟ್ಟಿದ್ದು ಬಾಗಲಕೋಟ ಜಿಲ್ಲೆಯ ಬೀಳಗಿಯಲ್ಲಿ.1911 ಸೆಪ್ಟಂಬರ್ 5ರಂದು. 1933ರಿಂದ ಸಾಹಿತ್ಯ ಕೃಷಿ ಆರಂಭಿಸಿದ ಪುರಾಣಿಕರು 1946ರಲ್ಲಿ 'ರಾಮೂನ ಕಥೆಗಳು' ಪ್ರಕಟಿಸಿದರು. ಅವರ 'ಧರ್ಮದೇವತೆ' ಕಾದಂಬರಿ 'ಕರುಣೆಯೇ ಕುಟುಂಬದ ಕಣ್ಣು' ಎಂಬ ಚಲನಚಿತ್ರವಾಗಿದೆ. ಪುರಾಣಿಕರ 11 ಕೃತಿಗಳು  ಬೆಳ್ಳೆತೆರೆ ಕಂಡಿವೆ.  'ಸನಾದಿ ಅಪ್ಪಣ್ಣ' ಕನ್ನಡಿಗರೆಂದೂ ಮರೆಯದ ಕೃತಿ. ಮೊದಲ ಪ್ರಕಟಿತ ಗದ್ಯ ಕೃತಿ, 'ರಾಮೂನ ಕಥೆಗಳು'. ಮೊದಲ ಕವನ ಸಂಕಲನ 'ಬಾಳ ಕನಸು'. ಮೊದಲ ಕಾದಂಬರಿ 'ಮುಗಿಲಮಲ್ಲಿಗೆ'. 'ಮೌನಗೌರಿ', 'ಮುತ್ತೈದೆ', `ಮನೆ ತುಂಬಿದ ಹೆಣ್ಣು', 'ಮಣ್ಣಿನ ಮಗಳು', 'ಕುಲವಧು', 'ಮನಸೋತ ಮನದನ್ನೆ', 'ಧರ್ಮ ...

READ MORE

Related Books