ಮಿಥ್ಯೆ

Author : ಗೀತಾ ಬಿ.ಯು

Pages 152

₹ 95.00
Year of Publication: 2010
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 26617755

Synopsys

‘ಮಿಥ್ಯೆ’ ಗೀತಾ ಬಿ.ಯು ಅವರ ಕಾದಂಬರಿ. 'ಸುಧಾ' ವಾರಪತ್ರಿಕೆಯಲ್ಲಿ  ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಈ ಕಾದಂಬರಿ ನಾಯಕ ಪ್ರಧಾನವಾದುದು. ಮಹಿಳೆಯರು ಅಪರೂಪವಾಗಿ ಚಿತ್ರಿಸುವಂತಹ ನಾಯಕ ಪುರುಷೋತ್ತಮ. ಮೇಲ್ಮಧ್ಯಮ ವರ್ಗದ ಬ್ರಾಹ್ಮಣ ಸಮಾಜದ ಸಹಜ ಸನ್ನಿವೇಶಗಳು- ಸಂಸಾರಿಕ ಜೀವನ ವಸ್ತುನಿಷ್ಟ ಪಾತ್ರಗಳನ್ನು ತುಂಬಿಕೊಂಡಂತಹ ಕಥೆ ಇದು.

ಇಬ್ಬರು ಹೆಣ್ಣು-ಮಕ್ಕಳ ನಡುವೆ ಒಬ್ಬನೇ ಮಗನಾಗಿ ಹುಟ್ಟಿದ ನಾಯಕ ಹೆಂಗರುಳಿನ ಪುರುಷ. ಅವನ ಸೌಮ್ಯ ಮೆದು ಸ್ವಭಾವದಿಂದಲೇ ಬದುಕಿನ ಹಲವಾರು ಕ್ಷಣಗಳಲ್ಲಿ ಧ್ವನಿ ಕಳೆದುಕೊಳ್ಳುತ್ತಾನೆ. ಚಿತ್ರಕಲೆಯಲ್ಲಿ ಅದಮ್ಯ ಆಸಕ್ತಿ ಇದ್ದೂ ಮನೆಯವರೆಲ್ಲರ ವಿರೋಧದಿಂದ ಅದನ್ನು ತನ್ನ ಕರಿಯರ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೊನೆಗೆ ಹವ್ಯಾಸವಾಗಿಟ್ಟುಕೊಳ್ಳಲೂ ಸಹ ಸಂಸಾರಿಕ ಜವಾಬ್ದಾರಿ ಹಾಗೂ ಅಡ್ಡಿ ಆತಂಕಗಳು, ಹೆಂಡತಿಗೂ ಸಹ ಚಿತ್ರಕಲೆಯ ಬಗ್ಗೆ ಅನಾದರ. ಅವನ ಚಿತ್ರಕಲೆಯ ಸಾಮಗ್ರಿಗಳಿಗಾಗಿ ಒಂದು ರೂಮನ್ನೂ ವೇಸ್ಟ್ ಮಾಡಲು ಯಾರೂ ತಯಾರಿರುವುದಿಲ್ಲ. ಇಂಥಹ ಹಲವು ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಕಾದಂಬರಿ ಓದುಗರನ್ನು ಸೆಳೆಯುತ್ತದೆ.

About the Author

ಗೀತಾ ಬಿ.ಯು

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ  ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’  ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...

READ MORE

Related Books