ಇಂತಿ ನಿಮ್ಮ ಆತ್ಮೀಯ

Author : ಕೌಶಿಕ್ ಕೂಡುರಸ್ತೆ

Pages 102

₹ 80.00
Year of Publication: 2018
Published by: ಕೆಂಜಳಿಲು ಪ್ರಕಾಶನ
Address: ಜಯನಗರ, ಚಿಕ್ಕಮಗಳೂರು- 577101

Synopsys

‘ಇಂತಿ ನಿಮ್ಮ ಆತ್ಮೀಯ’ ಲೇಖಕ ಕೌಶಿಕ್ ಕೂಡಿರಸ್ತೆ ಅವರು ಬರೆದಿರುವ ನೈಜ ಘಟನೆ ಆಧಾರಿತ ಕಾದಂಬರಿ. ಇದು ಸುನೀತಾ ಮತ್ತು ಜಯಪ್ರಕಾಶ್ ಎಂಬುವವರ ಬದುಕಿಗೆ ಸಂಬಂಧಿಸಿದ ನೈಜ ಘಟನೆಯಾಧಾರಿತ ಕಾದಂಬರಿಯಾಗಿದ್ದು, ಅವರೊಂದಿಗೆ ಸಂದರ್ಶನ ಮಾಡಿದ್ದ ಲೇಖಕರು ಅದೇ ಎಳೆಯನ್ನು ಸೃಜನಶೀಲವಾಗಿ ಬಳಸಿ ಕಾದಂಬರಿ ಕಟ್ಟಿದ್ದಾರೆ. ಈ ಕೃತಿ ರಚನೆಯ ಹಿಂದಿನ ಅನುಭವಗಳನ್ನು ಬರೆಯುತ್ತಾ.. ‘ಅದೊಂದಿನ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ವಿಶೇಷ ಸಂಚಿಕೆಯೊಂದು ನನ್ನ ಕಣ್ಸೆಳೆಯಿತು. ಪಿಯುಸಿಯಲ್ಲಿ ಇಷ್ಟಪಟ್ಟಿದ್ದ ಗೆಳತಿಯೊಬ್ಬಳಿಗೆ ಅಪಘಾತವಾಗಿ ಸಂಪೂರ್ಣ ಮುಖವೇ ಮಾಯವಾಗಿ, ಜೀವನ್ಮರಣವಾದ ನಡುವೆ ಹೋರಾಡುತ್ತಿದ್ದರೂ ಲೆಕ್ಕಿಸದೆ, ಪ್ರೀತಿಯಿಂದ ಅವಳ ಆರೈಕೆ ಮಾಡಿ, ಜೀವನ ಪರ್ಯಂತ ಅವಳೊಡನೆ ಜೀವನ ಹಂಚಿಕೊಳ್ಳುವ ನಿರ್ಧಾರ ಮಾಡಿದ್ದ ಆ ಗೆಳೆಯನ ಸಹೃದಯತೆ ನನ್ನನ್ನು ಆಶ್ಚರ್ಯಕ್ಕೆ ದೂಡಿತ್ತು. ಹುಡುಗಿ ಒಂಚೂರು ಕಪ್ಪು, ಸೊಡ್ಡು ನೆಟ್ಟಗಿಲ್ಲ ಎಂದು ಮದುವೆ ಅಲ್ಲಗೆಳೆಯುವ ಎಷ್ಟೋ ಜನರ ನಡುವೆ, ಮುಖದ ಅಂದ ಎಂದಿಗೂ ಶಾಶ್ವತವಲ್ಲ, ಅಂತರಂಗದ ಸೌಂದರ್ಯದೊಂದಿಗೆ ಬಾಳಿದರೆ ಜೀವನದುದ್ದಕ್ಕೂ ಸಂತೋಷ ಕಟ್ಟಿಟ್ಟ ಬುತ್ತಿ ಎಂದು ಅರಿತು ಮುಖವೇ ಇಲ್ಲದ ಸುನೀತಾಳೊಂದಿಗೆ ತನ್ನ ನಿಶ್ಕಲ್ಮಶ ಪ್ರೀತಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಜಯಪ್ರಕಾಶ್ ಇಂದಿನ ಯುವಜನತೆಗೆ ಪ್ರೀತಿ ವಿಚಾರದಲ್ಲಿ ಸ್ಪೂರ್ತಿಯಾಗಬೇಕು. ಹೆತ್ತವರೇ ಅಸಹ್ಯಪಡುವಂತಿದ್ದ ಸುನಿತಾಳ ಮುಖವನ್ನು ಬದಿಗಿರಿಸಿ, ಅವಳ ಪ್ರೀತಿಯನ್ನು ಅರಸಿ ಸುಂದರ ಜೀವನದ ಕನಸನ್ನು ಹೊತ್ತು ಬಾಳುತ್ತಿರುವ ಈ ಪ್ರೇಮಿಗಳಿಗೆ ನನ್ನದೊಂದು ನಮನ ಎನ್ನುತ್ತಾರೆ ಕೌಶಿಕ್ ಕೂಡುರಸ್ತೆ. ಅವರನ್ನು ಭೇಟಿಯಾಗಿ ಮಾತನಾಡಿದ ನಂತರ ಆ ಕತೆಯನ್ನು ಬರೆಯುವುದಾಗಿ ತಿಳಿಸಿದ ಕೌಶಿಕ್ ಕಥೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡೆ, ಕಥೆಯಲ್ಲಿ ಪ್ರತಿಯೊಂದು ವಿಷಯನ್ನು ವಿವರಿಸಬೇಕಾದ್ದರಿಂದ, ಜಯಪ್ರಕಾಶ್ ಗೆ ಕೇಳಬೇಕಾದ ಪ್ರಶ್ನೆಗಳು, ಸುನಿತಾರಿಗೆ ಕೇಳಬೇಕಿದ್ದ ಪ್ರಶ್ನೆಗಳು, ಇಬ್ಬರೂ ಉತ್ತರಿಸಬೇಕಾದ ಪ್ರಶ್ನೆಗಳು ಎಂದು ಮೂರು ವಿಭಾಗ ಮಾಡಿಕೊಂಡು, ಆ ಪ್ರಶ್ನೆಗಳಿಗೆ ಉತ್ತರವಾಗಿ ಇವೆಲ್ಲಾ ವಿಷಯಗಳು ಒಳಗೊಂಡಿರಬೇಕು ಎಂದು ಪ್ರತಿಯೊಂದು ಪ್ರಶ್ನೆಗಳಿಗೆ ಉಪಪ್ರಶ್ನೆಗಳನ್ನು ಸೇರಿಸಿ ಒಟ್ಟಾರೆ ನಲವತ್ತು ಉಪವಿಂಗಡಣೆ ಮಾಡಿಕೊಂಡೆ ಎನ್ನುತ್ತಾರೆ. ಜೊತೆಗೆ ಪ್ರತಿಬಾರಿ ಅವರ ಮನೆಯಲ್ಲಿ ಕೂತು ಮಾತನಾಡುವಾಗ ನನ್ನ ಸುತ್ತಲು ನಿಶ್ಕಲ್ಮಶ ಪ್ರೀತಿಯು ಆವರಿಸಿಕೊಂಡಂತೆ ಭಾಸವಾಗುತ್ತದೆ. ಇಂತಹ ನವಿರಾದ ಪ್ರೇಮಕಥೆಯನ್ನು ಅಕ್ಷರವಾಗಿಸುವ ಸುಮಧುರ ಅವಕಾಶ ನನಗೆ ಒಲಿದಿದ್ದು ನನ್ನ ಭಾಗ್ಯವೆಂದೇ ಭಾವಿಸುತ್ತೆ, ಈ ಸುಂದರ ಕಥೆಯು ಪ್ರೀತಿ ಹೊತ್ತ ಎಲ್ಲಾ ಮನಗಳಿಗೆ ಆತ್ಮೀಯವಾಗಲಿ ಎಂಬುದೇ ನನ್ನ ಆಶಯ ಎಂದಿದ್ದಾರೆ.

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books