ಎಡಕಲ್ಲು ಗುಡ್ಡದ ಮೇಲೆ

Author : ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)

₹ 125.00




Year of Publication: 2020
Published by: ರವೀಂದ್ರ ಪುಸ್ತಕಾಲಯ
Address: ಸಾಗರ, ಜಿ: ಶಿವಮೊಗ್ಗ

Synopsys

ಎಡಕಲ್ಲು ಗುಡ್ಡದ ಮೇಲೆ-ಈ ಕಾದಂಬರಿ ಕರ್ತೃ ಭಾರತೀಸುತ. ಆಕಸ್ಮಿಕವಾಗಿ ಮಾಡಿದ ತಪ್ಪಿಗೆ ಅನುಭವಿಸಬೇಕಾದ ನೋವುಗಳ ಸರಣಿಯು ಈ ಕಾದಂಬರಿಯ ಕಥಾವಸ್ತು. ಕೇರಳ ರಾಜ್ಯದ ವಯನಾಡು ಬಳಿಯ ಎಡಕಲ್ಲು ಎಂಬ ಪ್ರದೇಶವು ಸುಂದರವಾದ ಪ್ರವಾಸಿ ತಾಣ. ಪುಟ್ಟಣ ಕಣಗಲ್ ನಿರ್ದೇಶನದ ಚಿತ್ರವು (1973) ಜನಮೆಚ್ಚುಗೆ ಪಡೆದಿದೆ. ಸಾಹಿತ್ಯಕ ವಾಗಿಯೂ ಗಮನ ಸೆಳೆದ ಕೃತಿ ಇದು.

About the Author

ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್)
(15 May 1915 - 04 April 1976)

ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು.  ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...

READ MORE

Related Books