ಸುಗಂಧ ಮಾರುತ

Author : ಹೆಚ್.ಜಿ. ರಾಧಾದೇವಿ

Pages 152

₹ 100.00




Published by: ಸ್ನೇಹ ಪ್ರಿಂಟರ್ಸ್
Address: ನಂ 16, 1ನೇ ಮುಖ್ಯರಸ್ತೆ, ಶ್ರೀ ರಾಘವೇಂದ್ರ ಮಠ ರಸ್ತೆ, ಪಾಪರೆಡ್ಡಿಪಾಳ್ಯ, 11ನೇ ಬ್ಲಾಕ್, ನಾಗರಭಾವಿ 2ನೇ ಹಂತ, ಬೆಂಗಳೂರು
Phone: 9845062549

Synopsys

ಕಾದಂಬರಿಗಾರ್ತಿ ಹೆಚ್.ಜಿ. ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಸುಗಂಧ ಮಾರುತ. ಭ್ರಮರಪ್ಪ ,ಗಂಗಮ್ಮಳ ಮಗಳು ಪ್ರಮೋದಿನಿ... ಗಂಗಮ್ಮಳಿಗೆ ತನ್ನ ಮಗಳನ್ನು ಓದಿಸುವ ಆಸೆ. ಆದರೆ ಗಂಗಮ್ಮಳ ತಾಯಿ ಹೊನ್ನಮ್ಮಳಿಗೆ ತನ್ನ ಮಗನೊಂದಿಗೆ ಇವಳ ಮದುವೆ ಮಾಡುವ ಆತುರ. ಹೊನ್ನಮ್ಮ ತನ್ನ ಮಗಳಿಗೆ ಮದುವೆ ಮಾಡಿಸಿದ್ದೆ ತನ್ನ ಸ್ವಂತ ತಮ್ಮನೊಂದಿಗೆ. ಹೆಣ್ಣು ಮಕ್ಕಳು ಜಾಸ್ತಿ ಓದಬಾರದು. ತಾಯಿಯ ಮಾತನ್ನು ಕೇಳದೆ ಗಂಗಮ್ಮ ತನ್ನ ಪ್ರತಿಜ್ಞೆಯಂತೆ ಓದಿಸಲು ಕಳಿಸುತ್ತಾಳೆ. ಸೌಂದರ್ಯವತಿಯಾದ ಪ್ರಮೋದಿನಿ ತನ್ನ ತಾಯಿಯ ಸಂಬಂಧ ಕಡೆಯ ಮದುವೆಗೆ ಹೋದಾಗ ಅಲ್ಲಿ ಡಾಕ್ಟರ್ ಸಾತ್ವಿಕ್'ನ ಪರಿಚಯ ಆಗುತ್ತೆ. ಅವನು ಇವನನ್ನು ತುಂಬಾ ಇಷ್ಟಪಡುತ್ತಾನೆ. ಇವಳ ಬಡತನದ ಕಾರಣದಿಂದಾಗಿ ಇವಳನ್ನ ನಿರಾಕರಿಸುತ್ತಾನೆ. ಇದರ ಜೊತೆಜೊತೆಗೆ ಕಾಲೇಜಿನ ಲೆಕ್ಚರ್ ಕೂಡ ಇವಳ ಹಿಂದೆ ಬಿದ್ದು ಹಿಂದೆ ಸರಿದಿರುತ್ತಾರೆ. ಇವೆಲ್ಲದರಿಂದ ಸರಿ ಇದ್ದರು ಕೆಲವರು ಬೇಕಂತಲೇ ಇವಳನ್ನು ನಡೆತೆಗೆಟ್ಟವಳೆಂದೆ ಹೇಳುತ್ತಾರೆ. ಹೊನ್ನಮ್ಮನಂತೂ ಆದಷ್ಟು ಬೇಗ ತನ್ನ ಮಗ ಕೃಷ್ಣನಿಗೆ ಕೊಟ್ಟು ಮದುವೆ ಮಾಡು ಅಂತ ಹೇಳುತ್ತಾಳೆ. ಕೃಷ್ಣನಿಗೆ ಬೇರೆ ಮದುವೆಯಾದರೂ ಎರಡನೇ ಹೆಂಡತಿಯಾಗಿ ಆದರೂ ಮಾಡಿಸಲು ಹೇಳಿದಾಗ ಗಂಗಮ್ಮಾ ಕೂಡ ತುಂಬಾ ನೊಂದುಕೊಳ್ಳುತ್ತಾಳೆ. ಹೀಗೆ ಕತೆಯ ಎಳೆ ಸಾಗುತ್ತದೆ..

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books