ಕಣ್ಣಿದ್ದೂ ಕಾಣರು

Author : ಶಿವರಾಮ ಕಾರಂತ

Pages 400

₹ 250.00
Year of Publication: 1981
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಖ್ಯಾತ ಕಾದಂಬರಿಕಾರ ಡಾ. ಕೆ. ಶಿವರಾಮ ಕಾರಂತರ ಕಾದಂಬರಿ-‘ಕಣ್ಣಿದ್ದೂ ಕಾಣರು’. ಹಳ್ಳಿಯ ಸಾಮಾನ್ಯ ಮನುಷ್ಯನೊಬ್ಬ ‘ಜಾಣ’ ಪ್ರಪಂಚದ ವಾಸ್ತವವನ್ನು ಅರಿತು ಮಾತನಾಡುವ ಚಿತ್ರಣವನ್ನು ಬಹಳ ಮನೋಜ್ಞವಾಗಿ ಬಿಂಬಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಂದಿಗೋಣ ಗ್ರಾಮದ ಕಾಸರಕನ ಮನೆ ವಿಘ್ನೇಶ್ವರ ಹೆಗ್ಗಡೆಯವರ ಮಗ ಗಣೇಶ ಹೆಗ್ಗಡೆ, ತನ್ನ ಸೋದರಮಾವ ರಾಮಕೃಷ್ಣರ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ, ತನ್ನ ಜೊತೆ ಕೆಲಸ ಮಾಡುತ್ತಿದ್ದ ವಯಸ್ಸಿನಲ್ಲಿ ತನಗಿಂತ ಹಿರಿಯ ವಿಧವೆಯನ್ನು ಮದುವೆ ಆಗುತ್ತಾನೆ. ಇದು ಸೋದರಮಾವ (ರಾಮಕೃಷ್ಣ ಹೆಗ್ಗಡೆ)  ನಿಗೆ ಅಸಮಾಧಾನವಾಗಿ ‘ಜಾಣ’ನಲ್ಲಿ ಚರ್ಚಿಸುತ್ತಾರೆ. ಗಂಡು ಹೆಣ್ಣಿನ ಸಮಾನತೆ, ಧಾರ್ಮಿಕತೆ, ಜಾತಿ ವ್ಯವಸ್ಥೆ ಕುರಿತು ಮಾತಾನಾಡುವ ಮಾತುಗಳು ರಾಮಕೃಷ್ಣರ ವಿಚಾರಧಾರೆಗಳನ್ನು ಬದಲಾಯಿಸುತ್ತದೆ . ಜಾತಿ ಪದ್ಧತಿ, ಡಾಂಭಿಕ ಆಚರಣೆ ಮತ್ತು ಧಾರ್ಮಿಕ ಸಂಗತಿಗಳ ಸುತ್ತ ಕತೆ ಹೆಣೆದುಕೊಂಡಿದೆ.

ಬೆಂಗಳೂರಿನ ರಾಜಲಕ್ಷ್ಮೀ ಪ್ರಕಾಶನವು 1981ರಲ್ಲಿ (ಪುಟ: 395) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books