ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ

Author : ಯ.ರು. ಪಾಟೀಲ

Pages 490

₹ 500.00
Year of Publication: 2017
Published by: ಬೆಳವಡಿ ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನ
Address: ಬೆಳವಡಿ ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನ,ಮಲ್ಲಮ್ಮನ ಬೆಳವಡಿ, ಬೆಳಗಾವಿ ಜಿಲ್ಲೆ,

Synopsys

ಸಾಮಾನ್ಯ ಜನರಿಗೆ ಇತಿಹಾಸದಲ್ಲಿ ಅಭಿರುಚಿಯಿರುವುದು ತೀರ ಕಡಿಮೆ.ಐತಿಹಾಸಿಕ ಘಟನೆಗಳನ್ನು ಕಥೆಗಳ ರೂಪದಲ್ಲಿ ದಾಖಲಿಸಿದರೆ ವ್ಯಾಪ್ತಿ ಹಿರಿದಾಗುತ್ತದೆ.ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ' ಬೆಳವಡಿ ರಾಣಿ ಮಲ್ಲವ ಚಾರಿತ್ರಿಕ ಕಾದಂಬರಿಯನ್ನು ಉತ್ತರ ಕರ್ನಾಟಕ ಭಾಗದ ಸಂಶೋಧಕ, ಲೇಖಕ ಯ.ರು.ಪಾಟೀಲ ಅವರು ಓದುಗರ ಮುಂದಿಟ್ಟಿದ್ದಾರೆ. ಮೂರು ದಶಕಗಳ ಸಂಶೋಧನೆ ಫಲವಾಗಿ ಸುಮಾರು 490 ಪುಟಗಳಲ್ಲಿ ಮಲ್ಲಮ್ಮನ ಸಾಹಸ, ಶೌರ್ಯಗಳು ಕಣ್ಣಿಗೆ ಕಟ್ಟುವಂತೆ ದಾಖಲಾಗಿವೆ. 350 ವರ್ಷಗಳ ಹಿಂದಿನ ಸಾಹಸಗಾಥೆಯನ್ನು ಸೊಗಸಾಗಿ ನಿರೂಪಿಸಿಸಲಾಗಿದೆ. ಆ ಕಾಲಘಟ್ಟದ ಆಚರಣೆ, ಸಂಸ್ಕೃತಿ, ಜಾನಪದ ಕ್ರೀಡೆ, ವಾಡೆ ಕುರಿತು ಜನರ ನಂಬಿಕೆ, ಪರಿಸರದ ಗಂಧಗಾಳಿಯನ್ನು ಕಾದಂಬರಿ ಹಿಡಿದಿಟ್ಟಿದೆ.ಶಿವಾಜಿ ಸೈನ್ಯವು ಬೆಳವಡಿ ಯೋಧರ ಶೌರ್ಯ ಕಂಡು ಕಂಗಾಲಾಗುತ್ತದೆ. ಸಮರ ನಿಲ್ಲಿಸಿ ಶಾಂತಿ ಸಂಧಾನಕ್ಕೆ ಶಿವಾಜಿ ಸಮ್ಮತಿಸುತ್ತಾನೆ. ಆಕೆಯನ್ನು ತಾಯಿಯೆಂದು ಕರೆದ ಶಿವಾಜಿ, ತನ್ನ ಕೃತ್ಯಕ್ಕೆ ಕ್ಷಮೆಯಾಚಿಸುತ್ತಾನೆ.ಮಲ್ಲಮ್ಮನ ಧೀರೋದಾತ್ತ ಬದುಕಿನ ಕತೆ ಎಲ್ಲರಿಗೂ ಪ್ರೇರಣಾದಾಯಕವಾಗಿದೆ.

About the Author

ಯ.ರು. ಪಾಟೀಲ

ಲೇಖಕ ಯ.ರು.ಪಾಟೀಲ ಬೆಳಗಾವಿ ಜಿಲ್ಲಾ ಕಸಪ ಅಧ್ಯಕ್ಷರು.  ಕೃತಿಗಳು: ಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ,  ...

READ MORE

Related Books