ಮೌಶಿ

Author : ಕೆ. ನೀಲಾ

Pages 136

₹ 120.00




Year of Publication: 2021
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಕಲ್ಬುರ್ಗಿ

Synopsys

ಕೆ ನೀಲಾ ಅವರು ರಚಿಸಿದ" ಮೌಶಿ" ಕಾದಂಬರಿಯನ್ನು ಅವಲೋಕಿಸಿದಾಗ ಕಲ್ಯಾಣ ಕರ್ನಾಟಕದ ಪ್ರದೇಶದಲ್ಲಿ ಪರಂಪರೆಯಿಂದ ನಡೆದುಕೊಂಡುಬಂದ ಮತ್ತು ನಿರಂತರವಾಗಿ ಚಲಾವಣೆಯಲ್ಲಿರುವ ಅಪರೂಪದ ದೇವದಾಸಿ ಪದ್ಧತಿಯ ಬೆಳಕು ಚೆಲ್ಲುವಂತೆ ಕಥಾಹಂದರವನ್ನು ಹರಡಿಸಿದ್ದಾರೆ. ಕೌಶಲ್ಯ ಎಂಬ ಒಬ್ಬ ಹಿರಿಯ ಮಹಿಳೆಯೊಬ್ಬಳು ತನ್ನ ಬದುಕಿನ ಬವಣೆ ಹೇಳುತ್ತಾ ಹೋಗುತ್ತಾಳೆ.ಆಸಕ್ತಿಯಿಂದ ಕತೆಗಳನ್ನು ಪದ್ಧತಿಯಿಂದ ಪಾರುಮಾಡುವ ಸಂಘರ್ಷದ ವಿಷಯವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.ಜಮೀನ್ದಾರಿ ವ್ಯವಸ್ಥೆಯ ಕೆಳವರ್ಗದ ಸುಂದರ ಸ್ತ್ರೀಯರನ್ನು ಬೋಗಿಸುವುದಕ್ಕಾಗಿ ಹುಟ್ಟುಹಾಕಿದ ಪದ್ಧತಿ ಎಂಬ ವಿಷಯದ ಮನವರಿಕೆಯಾಗುತ್ತದೆ. ಕಲ್ಬುರ್ಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 136 ಪುಟಗಳಿದ್ದು 120 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಕೆ. ನೀಲಾ
(01 August 1966)

ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾ ಅವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು. ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ. ಮಹಿಳೆ- ಸಮಸ್ಯೆ ಸವಾಲುಗಳು  ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ...

READ MORE

Related Books