ಅಂತರಂಗದ ಅತಿಥಿ

Author : ಕೆ.ಟಿ.ಗಟ್ಟಿ

Pages 296

₹ 175.00




Year of Publication: 2011
Published by: ವಸಂತ ಪ್ರಕಾಶನ
Address: # 360, 10ನೇ ಬಿ;ಮುಖ್ಯರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 08022443996

Synopsys

'ಅಂತರಂಗದ ಅತಿಥಿ' ಕೆ.ಟ್ಟಿ.ಗಟ್ಟಿಯವರ 26ನೇ ಕಾದಂಬರಿ. ಮನುಷ್ಯನೊಡನೆ ಮನುಷ್ಯನಾಗಿ ಸ್ಪಂದಿಸುವುದರಲ್ಲಿ ಸಿಗುವಷ್ಟು ಸುಖ, ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಅಂಥ ಸ್ಪಂದನವನ್ನುಂಟುಮಾಡುವ ಶಕ್ತಿಯಿರುವುದು ಪ್ರೇಮಕ್ಕೆ, ಸ್ನೇಹಕ್ಕೆ; ಅಚಿಜನದಂತೆ ಅದಕ್ಕೆ ಎಲ್ಲವನ್ನೂ ಶುದ್ಧೀಕರಿಸುವ ಶಕ್ತಿಯಿದೆ. 'ಅಂತರಂದ ಅತಿಥಿ'ಯ ನಾಯಕ ಸಂತೋಷನಿಗೆ ಬದುಕು ಒಂದು ಸ್ಪಂದನ ಅಷ್ಟೆ. ಇಲ್ಲಿ 'ಅತಿಥಿ' ಹೊರಗಿನವನಲ್ಲ; ಒಳಗಿನವನು. ವಿನೂತನ ನಿರೂಪಣಾ ವಿಧಾನದ ಕಾದಂಬರಿ.

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Related Books