ಆತ್ಮವೃತ್ತಾಂತ

Author : ರಜನಿ ನರಹಳ್ಳಿ

Pages 414

₹ 300.00
Year of Publication: 2013
Published by: ಮನೋಹರ ಗ್ರಂಥ ಮಾಲಾ
Address: ಧಾರವಾಡ

Synopsys

ಲೇಖಕಿ ರಜನಿ ನರಹಳ್ಳಿ ಅವರ ಕೃತಿ ‘ಆತ್ಮವೃತ್ತಾಂತ’ ಒಂದು  ಪ್ರಮುಖ ಕೃತಿ.  ರಜನಿ ನರಹಳ್ಳಿ ಅವರ ಈ ಕಾದಂಬರಿಯ ವಸ್ತು ಒಂದು ನಾಯಿಯ ಬಾಳು. ಜತೆಗೆ ಅದರ ಹಿಂದಿನ ಮೂರು ತಲೆಮಾರಿನ ನಾಯಿಗಳ ಆತ್ಮಕತೆಗಳೂ ಸೇರಿಕೊಂಡಿವೆ.  ಬುದ್ಧಿವಂತರು ಎಂದು ಭಾವಿಸಿರುವ ಮನುಷ್ಯರ ಬದುಕನ್ನು ಪ್ರಾಣಿಯ ಮೂಲಕ ನೋಡಲು ಆರಂಭಿಸಿದರೆ ಗೋಚರಿಸುವ ಸತ್ಯಗಳು ಸೋಜಿಗ-ಗಾಬರಿ ಉಂಟು ಮಾಡುತ್ತವೆ. ’ಲಿಯೋ’ ಎಂಬ ಸಾಕುನಾಯಿ ಈ ಪುಸ್ತಕದ ಕೇಂದ್ರ. ಅದರ ಬದುಕಿನ ಸುದೀರ್ಘ ಕಥನ ಈ ಕೃತಿಯಲ್ಲಿದೆ. ಸಕಲ ಜೀವಿಗಳ ಬದುಕಿನ ರೂಪಕವಾಗಿ ಲಿಯೋ ಮಾತಾಡುತ್ತದೆ. ಲೇಖಕಿಯು ತಾನು ಸಾಕಿದ ನಾಯಿಯೊಂದಿಗೆ ಹೊಂದಿದ ಅನ್ಯಾದೃಶ ಆಪ್ತತೆ, ತಾದಾತ್ಮ್ಯ ಪ್ರೀತಿ ಗಮನ ಸೆಳೆಯುತ್ತದೆ.  ಇದನ್ನು ಓದಿದ ಮೇಲೆ ನಾಯಿಯು ‘ಕೇವಲ’ ‘ನಾಯಿ’ ಎಂದಷ್ಟೇ ಅನ್ನಿಸಲು ಸಾಧ್ಯವೇ ಇಲ್ಲ. ನಾಯಿ ಮಾತ್ರವಲ್ಲ; ಯಾವ ಪ್ರಾಣಿಯೂ. ಯಾರೂ ಮುಖ್ಯರಲ್ಲ, ‘ಯಃಕಶ್ಚಿತ್ ಹುಳವೂ’ ಅಮುಖ್ಯವಲ್ಲ ಎಂಬಂತೆ ಚಿತ್ರಿಸಲಾಗಿದೆ.

About the Author

ರಜನಿ ನರಹಳ್ಳಿ

ರಜನಿ ನರಹಳ್ಳಿ ಅವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯವರು. ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ.ಎ.ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.  ಕೃತಿಗಳು: ನನ್ನು ಅಜ್ಜಿಯ ಜಗತ್ತು, ಆತ್ಮವೃತ್ತಾಂತ, ಅಮ್ಮಮ್ಮ ಹೇಳಿದ ಕತೆಗಳು, ಸಂಸ್ಕೃತಿ ಪೋಷಕ ಲಕ್ಷ್ಮೀ ನಾರಾಯಣ ಪ್ರಶಸ್ತಿ-ಪುರಸ್ಕಾರಗಳು:  ವೀಚಿ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಗಳು ಲಭಿಸಿವೆ.  ...

READ MORE

Awards & Recognitions

Related Books