ದರ್ಪಣ

Author : ಶೈಲಜಾ ಹಾಸನ

Pages 134

₹ 80.00
Published by: ಕಾಗಿನೆಲೆ ಪ್ರಕಾಶನ, ಮೈಸೂರು.

Synopsys

ಎನ್.ಶೈಲಜಾ ಹಾಸನ ಅವರ ಕಥಾ ಸಂಕಲನ ದರ್ಪಣ.  ಒಟ್ಟು ಹದಿನೆಂಟು ಸಣ್ಣ, ಸಣ್ಣ ಕತೆಗಳಿದ್ದು ಎಲ್ಲವೂ‌ ನಮ್ಮ ಸುತ್ತ ಮುತ್ತ ನಡೆದ ಅಥವಾ ನಡೆಯ ಬಹುದಾದ ಘಟನೆಗಳಂತೆಯೆ ಭಾಸವಾಗುತ್ತದೆ. ಈ ಕಥಾಸಂಕಲನ ಇಷ್ಟವಾಗಲು ಇರುವ‌ ಪ್ರಮುಖ ಕಾರಣ ಬರಹಲೋಕದಲ್ಲಿ ಸ್ರೀಯರು ಸ್ರೀ ಶೋಷಣೆಯ ಬಗ್ಗೆಯೆ ಬರೆಯುತ್ತಾರೆ, ಅವರಿಗೆ ಪುರುಷರ ವೇದನೆ , ಅವರ ಶೋಷಣೆ ಕಣ್ಣಿಗೆ ಕಾಣುವುದಿಲ್ಲ ಎಂಬ ಅಪಾವಾದವನ್ನು ಸುಳ್ಳಾಗಿಸುವಂತೆ ಕತೆ ನಿರೂಪಿಸಿದ್ದಾರೆ. ಇವರ ಎಲ್ಲಾ ಕತೆಗಳು ಮಾನವಿತೆಯಾ ನೆಲೆಗಟ್ಟಿನಲ್ಲಿಯೆ ಇದೆ. ಇವರ ಕತೆಯಾ ಇನ್ನೊಂದು ವಿಶೇಷವೆಂದರೆ ಪ್ರತಿ ಕತೆಯನ್ನು ಓದುಗರ ತಿರ್ಮಾನಕ್ಕೆ ಬಿಡುತ್ತಾರೆಯೇ ಹೊರತು, ಎಲ್ಲಿಯೂ ತಾವು ತಮ್ಮ ನಿರ್ಧಾರವನ್ನು ಓದುಗರ ಮೇಲೆ ಹೇರುವುದಿಲ್ಲ. ಅಥವಾ ಇದು ಸರಿ, ಇದು ತಪ್ಪು ಎಂದು ಬೆರಳು ಮಾಡಿ ತೋರಿಸುವುದಿಲ್ಲ. ಈಗೊಂದು ಘಟನೆ ನಮ್ಮ ಸುತ್ತಮುತ್ತಲಿನಲ್ಲಿಯೆ ನೆಡೆದಿರಬಹುದೇ ಎಂಬಂತೆ ಬರೆಯುತ್ತಾರೆ. ಹಾಗಂತ ಅದು ವರದಿಯಾ ರೂಪದಲ್ಲಿ ಇರುತ್ತದೆ ಎಂದು ಕೊಂಡರೆ ನಿಮ್ಮ ಗ್ರಹಿಕೆ ತಪ್ಪಾಗುತ್ತದೆ. ಈ ಕತೆಯನ್ನು ಓದುವ ಓದುಗ ,ಓದುವುದರ ಜೊತೆಗೆ ತನ್ನ ಭಾವನೆಗಳಾ ಹರವಿನಲ್ಲಿಯೇ ಸಾಗುವಂತೆ ಮಾಡುವುದರಿಂದ,ಕತಾ ಪಾತ್ರಗಳನ್ನು ನಾವು ಸ್ವತಃ ಅನುಭವಿಸಿದಂತೆಯೆ ಇರುತ್ತದೆ. ಹಾಗಂತ ಯಾವುದೇ ಉತ್ಪ್ರೇಕ್ಷೆ, ಆಶ್ಲೀಲತೆಯಾ ಬಳಕೆ ಮಾಡುವುದಿಲ್ಲ. "ತಾಯಿಯ ಕರೆ" ಎಂಬ ಕತೆಯು ಹಣದ ಹಿಂದೆ ಓಡುತ್ತಿರುವ‌ ಇಂದಿನ ಯುವ ಪೀಳಿಗೆಯವರನ್ನು ಎದುರಿಗೆ ಕೂರಿಸಿಕೊಂಡು ಬುದ್ದಿಮಾತು ಹೇಳಿದಂತೆ ಇದ್ದರೆ, " ಬದುಕ ಪಯಣದಲ್ಲೊಂದು ಆಕಸ್ಮಿಕ" ಕತೆಯು ಇಂದಿನ ದಿನಮಾನದಲ್ಲಿದಲ್ಲಿ ನೈತಿಕ ಅಧಃಪತನಕ್ಕೆ ಒಳಗಾಗುತ್ತಿರುವಾ ಯುವಕರ ಮನಸ್ಸಿನ ಕೈಗನ್ನಡಿಯಂತೆಯೂ, ಜೊತೆಗೆ ಸ್ವೇಚ್ಛಾರಕ್ಕೆ ತೆತ್ತಾ ಬೆಲೆಯಂತೆ ನಿರುಪಿಸಲಾಗಿದೆ. ಆದರೆ ಇಲ್ಲಿ ಲೇಖಕಿ ತಾವು ಒಬ್ಬ ನ್ಯಾಯದೀಶೆಯಾ ಸ್ಥಾನದಲ್ಲಿ ನಿಲ್ಲದೇ, ಕೇವಲ ಕತೆಯಾ ನಿರುಪಕಿಯಾಗಿ ಓದುಗರ ಮನ ಸೆಳೆಯುತ್ತಾರೆ. ಅತ್ಯಾಚಾರಕ್ಕೊಳಗಾದ ಮನುಜ ಎಂಬ ಹೆಣ್ಣುಮಗಳಾ ಬಾಯಲ್ಲಿ ಸಮಾಜದ ಮುಂದೆನೆ‌ ಬದುಕಿ ತೋರಿಸುತ್ತೇನೆ ಎಂದು ಹೇಳಿಸುವ ಮಾತು ನಿಜ ಜೀವನದಲ್ಲಿ ಈ ರೀತಿಯ ಆಕಸ್ಮಿಕ ಘಟನೆಯಿಂದ ವಿಚಲಿತರಾದವರಿಗೆ ಹೇಳುವ ಮಾನಸಿಕ ಸ್ಥೈರ್ಯದ ಮಾತಿನಂತೆಯೂ, ಅವರಲ್ಲಿ ಆತ್ಮವಿಶ್ವಾಸ ತುಂಬುವ ಮಾತಿನಂತೆಯೂ ಇದೇ. ಇದೆ ಕತೆಯಾ ಇನ್ನೊಂದು ರೂಪದಂತಿರುವ " ನಿಗೂಢ" ಕತೆಯು ಸ್ವೇಚ್ಛಾಚಾರಕ್ಕೆ ತೆತ್ತ ಬೆಲೆಯಂತೆ ವಿವರಿಸಲಾಗಿದೆ. ಅಸಾಮಾನ್ಯ ತಿರುವನ್ನು ನೀಡುವಾ " ಪಸರಿಸಿದ ಗಂಧ" ಕತೆಯಲ್ಲಿ ಲೇಖಕಿ ಕೇಳುವ ಪ್ರಶ್ನೆ ಈ ಸಮಾಜ ಗಂಡು ತಪ್ಪು ಮಾಡಿದಾಗ ಹೆಣ್ಣು ಕ್ಷಮಿಸಿ ಅವನೊಂದಿಗೆ ಬಾಳಲಿ ಎಂದು ಹೇಳುತ್ತದೆ, ಅದೇ ಹೆಣ್ಣು ತಪ್ಪು ಮಾಡಿದ್ರೆ ಗಂಡು ಕ್ಷಮಿಸಲಿ ಅಂತ ಏಕೆ ಹೇಳೊಲ್ಲಾ? ಎಡವಿದ ಕಾಲನ್ನು ತುಂಡರಿಸಿ ಬದುಕೊದು ನ್ಯಾಯವೇ? ಎಂದು ಕೇಳುವ ಪ್ರಶ್ನೆ ಎಂತಹ ಪ್ರಜ್ಞಾವಂತಿಕೆಯ ಪ್ರಶ್ನೆಯ ಜೊತೆಗೆ ಸಮಾಜದ ಮಾನೊಭಾವದಲ್ಲಿ ಆಗಬೇಕಾದ ಬದಲಾವಣೆಯಾ ಧಿಕ್ಸೂಚಿಯಂತೆ ಇದೇ. " ಅವನು ಅವಳುಮತ್ತು ಬದುಕು" ಎಂಬ ಕತೆಯಲ್ಲಿ ಪ್ರೇಮಿಗಳಾಗಿದ್ದವರು ಮದುವೆಯಾದ ಮೇಲೆ ಹೇಗೆ ಬದಲಾಗುತ್ತಾರೆ ಎಂಬುದರ ಬಹಳ ಸೂಕ್ಷ್ಮವಾದ ವಿಶ್ಲೇಷಣೆಯಂತೆ ಇದೆ. " ದರ್ಪಣ" ಎಂಬ ಕತೆಯು ಇಂದು ನಮಗೆ ಹೆಚ್ಚಾಗಿ ಕಾಣಸಿಗುವ ಅತ್ತೆ ಸೊಸೆ ಕಲಹಕ್ಕೆ ಬಹಳ ಸುಲಭವಾಗಿ ಪರಿಹಾರವನ್ನು ಸೂಚಿಸಿದ್ದಾರೆ. " ತಾಯಿಯ ಕರೆ" ಕತೆಯ ಮುಂದುವರಿದ ಭಾಗದಂತಿರುವಾ " ನಿರಾಳ" ಎಂಬ ಕತೆಯು ಆಧುನಿಕತೆ ಎಂಬ ಹೆಸರಿನಲ್ಲಿ ಹೆತ್ತಾ ಮಕ್ಕಳನ್ನೆ ಸಣ್ಣ ವಯಸ್ಸಿನಲ್ಲೇ ದೂರ ಮಾಡಿದರೆ ಅದರ ಪರಿಣಾಮವೇ ನಾವು ನಮ್ಮ ವೃದ್ಧಾಪ್ಯದಲ್ಲಿ ವೃದ್ಧಾಶ್ರಮ ಸೇರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಂಬ ಆಶಯವನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತಾರೆ. ಇದನ್ನು ಓದಿ ಒಂದಷ್ಟು ಜನ ಎಚ್ಚೆತ್ತು ಕೊಂಡರೆ ಅಷ್ಟು ವೃದ್ಧಾಶ್ರಮದಲ್ಲಿ ಇರುವವರಿ ಸಂಖ್ಯೆ ಕಡಿಮೆ ಆಗಬಹುದು. " ಹೀಗೂಬ್ಬ ತಾಯಿ" ಎಂಬ ಕತೆಯಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುವ ಮಗನಾ ಆರೈಕೆಗೆ ಒಬ್ಬ ಒಂಟಿ ತಾಯಿ ಪಡುವ ಕಷ್ಟಗಳು ಮತ್ತು ಅಂತಹ ಮಗನನ್ನು ತಾನೆ ತನ್ನ ಕೈಯಾರೆ ಕೊಲ್ಲುವ ಪರಿಸ್ಥಿತಿಗೆ ಸಿಲುಕುವ ವಿಧಿಯಾಟದ ಚಿತ್ರಣ ಎಂತಹ ಕಲ್ಲು ಹೃದಯದವರ ಮನ ಕಲಕುವಂತೆ ಇದೇ. ಇನ್ನು " ಚೈತ್ರ ಪಲ್ಲವಿ ಚಿಗುರಿತು" ಕತೆಯಲ್ಲಿ ಲೇಖಕಿ ' ಹೆಣ್ಣಿಗೆ ಹೆಣ್ಣೇ ಶತ್ರು' ಎಂಬ ಗಾದೆ ಮಾತು ಸುಳ್ಳು ಎಂಬುದರ ಜೊತೆ ಜೊತೆಗೆ ಸಮಾಜದ ಗೊಡ್ಡು ಸಂಪ್ರದಾಯದ ಕಟ್ಟುಪಾಡುಗಳನ್ನು ಬಿಟ್ಟು ಜೀವನಲ್ಲಿ ನವ ಚೈತ್ರ ಪಲ್ಲವಿ ಚಿಗುರಿಸಿಕ್ಕೊಳ್ಳಲು ಬೇಕಾದ ನೈತಿಕ ಬೆಂಬಲ ಮತ್ತು ಅದಕ್ಕಾಗಿ ಮಾಡುವ ಸಹಾಯ ಎರಡೂ ಅನುಕರಣಿಯಾ ಎಂಬುದನ್ನು ಒಪ್ಪುವಂತಹ ಮಾತಾಗಿದೆ. ಇವಿಷ್ಟೇ ಅಲ್ಲದೇ ಕಥಾ ಸಂಕಲನದಲ್ಲಿ ಇರುವ ಎಲ್ಲಾ ಕತೆಗಳು ಮನೋಜ್ಞವಾಗಿರುವುದಲ್ಲದೇ ಮಾನವಿಯಾ ಮೌಲ್ಯಗಳನ್ನು ಯಾವುದೇ ಹೇರಿಕೆಯಿಲ್ಲದಂತೆ ಓದುಗರರಿಗೆ ಮಾಡಿಕೊಡುತ್ತದೆ " ದರ್ಪಣ" ಎಂಬ ಪದದ ಅರ್ಥವೇ ಕನ್ನಡಿ . ಅಂತೆಯೇ ಈ ಕಥಾಸಂಕಲನವೂ ನಮ್ಮನಿಮ್ಮಲ್ಲರ ಜೀವನವನ್ನು ಕನ್ನಡಿಯಲ್ಲಿ ಮತ್ತೊಮ್ಮೆ ನೋಡಿಕೊಂಡಂತೆ ಭಾಸವಾಗುತ್ತದೆ. 

About the Author

ಶೈಲಜಾ ಹಾಸನ
(15 May 1964)

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...

READ MORE

Related Books