ಪೂರ್ವ ಪಶ್ಚಿಮ

Author : ವಾಣಿ ರಾವ್

Pages 216

₹ 155.00




Year of Publication: 2015
Published by: ರಾಘವೇಂದ್ರ ಎಂಟರ್ ಪ್ರೈಸಸ್
Address: ಗುಡುಗನಹಳ್ಳಿ, ಅಕ್ಕಿಹೆಬ್ಬಾಳ್ (ಹೆಚ್), ಕೆ.ಆರ್. ಪೇಟ್ (ಟಿ), ಮಂಡ್ಯ

Synopsys

‘ಪೂರ್ವ ಪಶ್ಛಿಮ’ ವಾಣಿ ರಾವ್ ಅವರ ಕಾದಂಬರಿಯಾಗಿದೆ. ವಿದೇಶಕ್ಕೆ ಹೋಗಿ ನಮ್ಮವರು, ಅಲ್ಲಿಯ ಸಂಸ್ಕೃತಿ, ನಡೆ, ನುಡಿ, ಪದ್ಧತಿಗಳನ್ನು ಅಳವಡಿಸಿಕೊಂಡ ಮೇಲೆ, ಮುಂದೆ ಅಲ್ಲಿಯೇ ಹುಟ್ಟುವ ಅವರ ಮಕ್ಕಳಿಗೆ, ಒಮ್ಮೆ ಭಾರತಕ್ಕೆ ಬಂದರೂ, ಆರೋಗ್ಯ ಕೆಟ್ಟುಹೋಗುತ್ತೆ, ಆಹಾರ ಪಾನೀಯವೆಲ್ಲ ಒಗ್ಗುವುದೇ ಇಲ್ಲ, ಇಲ್ಲಿಯ ರೀತಿ-ನೀತಿ ಅಷ್ಟಾಗಿ ಹಿಡಿಸದೇ, ತಮ್ಮ ಊರಿಗೆ (?) ಹೋಗಲು ಚಡಪಡಿಸುತ್ತಾರೆ. ಇಂತಹ ತಂದೆ-ತಾಯಿಯರ ಮನಸ್ಸಿನಲ್ಲಿ ತಮ್ಮ ತಾಯ್ನಾಡು ಇನ್ನೂ ಹಳೆಯ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇದ್ದು ಆಧುನಿಕ ಯುಗಕ್ಕೆ ಹೊಂದಾಣಿಕೆ ಇಲ್ಲದೇ, ಪ್ರಗತಿಯ ಹಾದಿತಪ್ಪಿ, ಏನೋ-ಎಂತೋ, ಹೇಗೋ- ಎಂದು ನಾವು ಕಾಲ ಕಳೆಯುತ್ತಿರುವೆವೆಂದೂ, ಅಲ್ಲಿಯ ಶಿಸ್ತು, ಸಮಯ ಪ್ರಜ್ಞೆ, ಅನುಕೂಲದ ಸುಲಭ ಜೀವನ ಕ್ರಮವನ್ನರಸದ ಮೂರ್ಖತನದಲ್ಲಿಯೇ ಇದ್ದೇವೆಂಬ ಭಾವನೆ ಅನೇಕರಿಗೆ.

ಇದು ಕೆಲವು ಅಂಶಗಳಲ್ಲಿ ಸತ್ಯವೂ ಹೌದು; ಆದರೆ ಅಲ್ಲಿಯವರು ಇಲ್ಲಿಗೆ ಬಂದಾಗ ಏನನ್ನು ಕಂಡುಕೊಳ್ಳುತ್ತಾರೆ ? ನಮ್ಮ ಗೊಂದಲಮಯದ ಜೀವನಕ್ರಮದಲ್ಲಿಯೂ, ಏನೋ ಒಂದು ತಿರುಳಿದೆ... ಅದು ಮಾನವನ ಸ್ವಭಾವಕ್ಕೆ ಬೇಕಾದ ಒಂದು ತನ್ನತನವಿದೆ. ಯಾರಿಗೆ ಯಾರೋ ಎಂಬಂತಿರುವ ಸಮಾಜಕ್ಕೂ, ಎಲ್ಲರಿಗೂ ಎಲ್ಲರೂ ಎನ್ನುವ ಸಮಾಜಕ್ಕೂ ವ್ಯತ್ಯಾಸವಿಲ್ಲವೇ? ಇದನ್ನು ದಿನಾ ನೊಡುತ್ತಿರುವ ನಾವು ಕೇವಲವಾಗಿ ಕಾಣಬಹುದು, ಆದರೆ ಅದನ್ನು ಅನುಭವಿಸದ ಜನಕ್ಕೆ ಇದಕ್ಕಿಂತ ಮಹತ್ವ ಬೇಕೆ? ಹೀಗೇ ಅಲ್ಲಿಯವರು ಇಲ್ಲಿಗೆ, ಇಲ್ಲಿಯವರು ಅಲ್ಲಿಗೆ, ಇಲ್ಲದುದನ್ನು ಹುಡುಕಿಕೊಂಡು ಹೋಗುವುದು ಸಹಜವೇ ಅಲ್ಲವೇ? ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ.

About the Author

ವಾಣಿ ರಾವ್
(04 October 1931)

ಕವಿತೆ, ಕತೆ, ಕಾದಂಬರಿ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ತಮ್ಮದೇ ಛಾಪು ಮೂಡಿಸಿದ ಬರಹಗಾರ್ತಿ ವಾಣಿ ರಾವ್‌ ಅವರು 1931 ಅಕ್ಟೋಬರ್‌ 4ರಂದು ಜನಿಸಿದರು. ತಾಯಿ ಇಂದಿರಾಬಾಯಿ. ತಂದೆ ಭೀಮಾಚಾರ್‌. ಹೋಮಿಯೋಪತಿಯಲ್ಲಿ ಪಿಎಚ್‌ಡಿ ಪದವೀಧರರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಕವಿತೆ, ಮಕ್ಕಳ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ವಾಣಿ ಅವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸುಪ್ತಚೇತನ, ದರ್ಪಣ, ಆಕಾಶದೀಪ, ಹೇಮಶೃಂಗ (ಕಾದಂಬರಿ); ವನಸುಮ, ನೀಲಕೊಳ, ಗಣೇಶ ಎಲ್ಲಿ, ಮಾಯಾವಿ (ಮಕ್ಕಳ ಕತೆ), ಸಿಂಧು-ಬಿಂದು (ಭಾಷಾಂತರ); ಚಿನ್ನಯ ರಾಮಾಯಣ, ಮಗು, ಸ್ವಾಮಿ ಪ್ರಣವಾನಂದಜೀ (ವೈದ್ಯಕೀಯ); ಹೋಮಿಯೋಪತಿ, ಮೆಟೀರಿಯಾ ಮೆಡಿಕಾ ಸೂತ್ರಗಳು (ಕವನ ಸಂಕಲನ); ...

READ MORE

Related Books