ಗಹನ

Author : ಸಿ. ನಂದಿನಿ

Pages 196

₹ 157.00
Published by: ಎಸ್. ಎಲ್. ಎನ್. ಪಬ್ಲಿಸಿಂಗ ಹೌಸ್

Synopsys

ಲೇಖಕ ನಂದಿನಿ. ಸಿ. ಅವರ ಕಾದಂಬರಿ ಗಹನ. ಬೆಳ್ಳಿ ತೆರೆ ಎಂಬ ಮಾಯಾ ಲೋಕದೆಡೆಗೆ ಇಂದಿನ ಯುವಪೀಳಿಗೆ ಆಕರ್ಷಿತರಾಗುವುದು ಸಹಜ. ತೆರೆಯ ಮೇಲಿನ ಅವರ ಥಳಕು ಬೆಳಕಿನ ನಟನೆಯನ್ನೇ ನಿಜವೆಂದು ನಂಬಿ ಭ್ರಮೆಯ ಲೋಕದಲ್ಲಿ ತೇಲಾಡುತ್ತಾ ಕೊನೆಗೆ ಸತ್ಯತೆಯ ಅರಿವಾಗಿ ಭ್ರಮನಿರಸನ ಹೊಂದಿದವರೇ ಬಹಳಷ್ಟು ಮಂದಿ. ಈ ಕಾದಂಬರಿಯ ನಾಯಕಿ ಸಾನ್ವಿ ಕೂಡ ಬೆಳ್ಳಿ ತೆರೆಯತ್ತ ಆಕರ್ಷಿತಳಾಗಿ ಟಿ.ವಿ ಸೀರಿಯಲ್ ನಲ್ಲಿ ನಟಿಸುವ ಸಲುವಾಗಿ ಮಂಗಳೂರಿನಿಂದ ಮುಂಬೈ ಗೆ ಬರುತ್ತಾಳೆ. ನಿರಂತರ ಪ್ರಯತ್ನದ ನಂತರ ಹಿಂದಿ ಸಿರಿಯಲ್ ಒಂದರಲ್ಲಿ ನಟಿಸುವ ಅವಕಾಶ ಸಿಕ್ಕಾಗ ಅವಳಿಗೆ ಸ್ವರ್ಗಕ್ಕೆ ಮೂರೇ ಗೇಣು. ಅವಳದು ನಾಯಕಿ ಪಾತ್ರವಲ್ಲದಿದ್ದರೂ ಪೋಷಕ ಪಾತ್ರದಲ್ಲಿ ಸಹಜ, ಸರಳ ಅಭಿನಯದಿಂದ ಮಧ್ಯಮ ವರ್ಗದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾಳೆ. ಮುಂದೆ ಬೇರೆ ಸೀರಿಯಲ್ ನಲ್ಲಿ ನಾಯಕಿ ಪಾತ್ರ ದೊರೆತು ನಾಲ್ಕು ಪಟ್ಟು ಸಂಭಾವನೆ ದೊರೆತ ನಂತರ ಆಕೆಯ ಜೀವನದ ಗತಿಯೇ ಬದಲಾಗುತ್ತದೆ. ಮನೆ, ಕಾರು, ಡ್ರೈವರ್.... ಅಪೇಕ್ಷೆಯಂತೆ ಎಲ್ಲ ಗಳಿಸುತ್ತಾಳೆ. ಮುಂಬೈ ಎಂಬ ಮಹಾನಗರಿಯಲ್ಲಿ ಮೋಸಗಾರರಿಗೆ ಏನು ಕಡಿಮೆ? ಆಪ್ತನಂತೆ, ಹಿತಚಿಂತಕನಂತೆ ಕಂಡ ಯುವಕನೊಬ್ಬನನ್ನು ನಂಬಿ ಮೋಸ ಹೋಗಿ ಗಳಿಸಿದ್ದನ್ನೆಲ್ಲಾ ಕಳೆದುಕೊಂಡು ಕಂಗಾಲಾಗುತ್ತಾಳೆ ಸಾನ್ವಿ. ಮುಂದೆ ಸಾನ್ವಿ ಗತಿ ಏನಾಯಿತು...? ತಿಳಿಯಲು "ಗಹನ" ಕಾದಂಬರಿಯನ್ನು ಓದಲೇ ಬೇಕು.

About the Author

ಸಿ. ನಂದಿನಿ
(16 August 1975)

ಸಿ. ನಂದಿನಿ ಅವರು ದಿನಾಂಕ 16.8.1975ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆ. ಎಂ.ಚಂದ್ರಶೇಖರ. 3 ನೇ ತರಗತಿವರೆಗೂ ಪುತ್ತೂರಿನಲ್ಲಿ ವಿದ್ಯಭ್ಯಾಸವನ್ನು ಮಾಡಿದ ಇವರು, ಮಂಗಳೂರಿನಲ್ಲಿ ದ್ವಿತೀಯ ಪಿಯುಸಿವರೆಗಿನ ಶಿಕ್ಷಣ ಪೂರ್ತಿಗೊಳಿಸಿದರು. ಎಂ.ಎಸ್ಸಿ (ಮೆಡಿಕಲ್ ಮೈಕ್ರೋಬಯಲಜಿ ) ವಿನಾಯಕ ಮಿಷನರಿಸ್. ಸೇಲಂನಲ್ಲಿ ಮಾಡಿದ ನಂತರ H. I. V ರೋಗಿಗಳ ಕುರಿತಾಗಿ ಪಿ. ಹೆಚ್. ಡಿ ಪಡೆದರು. ಪ್ರಸ್ತುತ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾದ್ಯಾಪಕಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಗಳು:- ಲೇಖಕಿ ಸಂಘ ದಿಂದ ತ್ರಿವೇಣಿ ಪ್ರಶಸ್ತಿ, ಗುಲ್ಬರ್ಗ ಯೂನಿವರ್ಸಿಟಿ ಯಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ ನ ...

READ MORE

Related Books