ಇದೂ ಒಂದು ಪ್ರೇಮ ಕಥೆ

Author : ಚಿತ್ರಲೇಖಾ ಎಸ್.



Published by: ಸುಧಾ ಶಿಶು ಸಾಹಿತ್ಯ ಮಾಲೆ

Synopsys

ಕಾದಂಬರಿಕಾರ್ತಿ ಚಿತ್ರಲೇಖ ಅವರ ಸಾಮಾಜಿಕ ಕಾದಂಬರಿ ಇದೂ ಒಂದು ಪ್ರೇಮ ಕಥೆ. ಮನೆ ಇದೆ, ಬೇಕಾದ್ದು ತಂದು ಹಾಕ್ತೀನಿ, ಒಡವೆ ವಸ್ತ್ರಗಳನ್ನು ಕೊಡಿಸ್ತೀನಿ, ತಿಂದು ಉಂಡು, ಆರಾಮಾಗಿ ಇರು. ಇದಕ್ಕಿಂತ ಇನ್ನೇನು ಸುಖ ಬೇಕು ನಿನಗೆ. ಇದಕ್ಕಿಂತ ನನ್ನನ್ನೇನೂ ಕೇಳಬೇಡ ನನ್ನೆದುರು ಮಾತಾಡಬೇಡ, ನನಗೆ ಸಲಹೆ ಸೂಚನೆ ಕೊಡಬೇಡ, ನಾನು ಹೇಳಿದಂತೆ ಕೇಳಿಕೊಂಡು ಇರು (ಬಿದ್ದಿರು). ನಂಗೆ ಬೇಕಾದಾಗ ಮಾತ್ರ ನಗು ನಗುತ್ತಾ ಸಹಕರಿಸಿ ಮಕ್ಕಳನ್ನು ಹೆರು ಎಂದು ಹೇಳುವ ಪುರುಷರು ಇಂದಿಗೂ ನಮ್ಮ ಸಮಾಜದಲ್ಲಿ ಇದ್ದಾರೆ. ಅದೂ ವಿದ್ಯಾವಂತರು ಎನಿಸಿಕೊಂಡವರೇ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದ ಅಹಿತಕರ ಸತ್ಯ. ಇಂತಹದೇ ಒಬ್ಬ ವಿಕೃತಿ ಎನ್ನಿಸುವ ಮನಸ್ಥಿತಿಯ ಮನುಷ್ಯ ಹೇಮಂತ್ ಈ ಕಥೆಯ ನಾಯಕಿಯ ಗಂಡನ ಪಾತ್ರ. ಮಾಧುರಿ ಈ ಕಾದಂಬರಿಯ ನಾಯಕಿ. ಈಕೆಯ ತಂದೆ ಜಾನಕಿರಾಮನ್ ಅವರ ಐದು ಹೆಣ್ಣು ಮಕ್ಕಳು ಮೂರು ಗಂಡು ಮಕ್ಕಳಲ್ಲಿ ಒಬ್ಬಳು. ತಾಯಿಯನ್ನು ಕಳೆದುಕೊಂಡಾಕೆ. ನಾಲ್ಕನೆಯ ಮಗಳಾದ ಈಕೆ ಬಿ.ಎಸ್.ಸಿ. ಪದವಿಯ ಜೊತೆಗೆ ನೃತ್ಯ, ಸಂಗೀತ, ಚಿತ್ರಕಲೆ, ಟೈಪಿಂಗ್, ಶೀಘ್ರಲಿಪಿ (ಶಾರ್ಟ್ ಹ್ಯಾಂಡ್) ಎಲ್ಲವನ್ನೂ ಕಲಿತವಳು. ಇಷ್ಟೆಲ್ಲ ಕಲಿತರೂ ಕೆಲಸಕ್ಕೆ ಸೇರಲು ತಂದೆಯ ಅನುಮತಿ ಇರಲಿಲ್ಲ. ಕೆಲಸ ಮಾಡಲು ಕಲಾವಿದೆಯಾಗಲು‌ ಬಯಸಿದರೂ ಅಸಾಧ್ಯವೆಂದು ತಿಳಿದಾಗ ಉತ್ತಮ ಗೃಹಿಣಿಯಾಗುವ ಕನಸು ಕಂಡವಳು. ಎಲ್ಲ ಹೆಣ್ಣು ಮಕ್ಕಳಂತೆ, ಸುಂದರ, ರಸಿಕ, ಹೆಂಡತಿಯನ್ನು ಅರಿತು ಬೆರೆತು ಬಾಳುವಂತಹ ಗಂಡನೊಂದಿಗೆ ಸಂಸಾರ ನಡೆಸುವ ಕನಸು ಕಂಡಿದ್ದಳು…ಹೀಗೆ ಸಾಗುತ್ತದೆ ಕತೆಯ ನಿರೂಪಣೆ..

About the Author

ಚಿತ್ರಲೇಖಾ ಎಸ್.
(06 May 1945)

ಸಾಹಿತಿ, ಕಾದಂಬರಿಗಾರ್ತಿ ಚಿತ್ರಲೇಖಾ ಎಸ್ ಅವರು 1945 ಮೇ 01 ಜನಿಸಿದರು.  ಇವರ ಬಹುತೇಕ ಕಾದಂಬರಿಗಳು ಸಿನಿಮಾಗಳಾಗಿವೆ. ‘ಮುದುಡಿದ ತಾವರೆ ಅರಳಿತು, ಸಮಯದ ಗೊಂಬೆ’ ಕನ್ನಡದಲ್ಲಿ ಚಲನಚಿತ್ರವಾಗಿದೆ.  ‘ಪ್ರೇಮಪಲ್ಲವಿ, ಸ್ವರ್ಗದ ನೆರಳು, ಕೆಂಪಾದ ದೀಪ, ಹೂಮಂಚ, 47 ದಿನಗಳು 1987, ಕರುಣಹತ್ಯೆ, ನಂಜಾದ ನೆನಪು, ಸಂಗಮಿಸದ ನದಿಗಳು’ ಅವರ ಪ್ರಮುಖ ಕಾದಂಬರಿಗಳು. ...

READ MORE

Related Books