ಲೀನಾ ಮೀನಾ ರೀನಾ

Author : ವಂಶಿYear of Publication: 1986
Published by: ಪಾವನಿ ಕೈ ಹೊತ್ತಿಗೆ

Synopsys

ಕಾದಂಬರಿಕಾರ ವಂಶಿ ಅವರ ಸಾಮಾಜಿಕ ಕಾದಂಬರಿ ಲೀನಾ ಮೀನಾ ರೀನಾ. ಈ ಕಾದಂಬರಿ ಅಸ್ಸಾಂ ರಾಜ್ಯದ ಧುಬ್ರಿ ನಗರದಲ್ಲಿ ನಡೆದ ಸರಣಿ ಕೊಲೆ ಪ್ರಕರಣಗಳ ಮೇಲೆ ಆಧಾರಿತ ಆಗಿದೆ. ಉಪೇಂದ್ರನಾಥ್ ರಾಜಖೋವ ಅಲ್ಲಿ ಸೆಷನ್ ನ್ಯಾಯಾಧೀಶ ಆಗಿದ್ದರು. ಅವರದ್ದು ಸುಂದರ ಸಂಸಾರ ಪತ್ನಿ ಮತ್ತು ಅಪ್ಸರೆಯರು ನಾಚುವ ಮೂವರು ಸುಂದರ ಹೆಣ್ಣು ಮಕ್ಕಳು. ಮೊದಲ ಮಗಳು ನಿರ್ಮಲ ಆಲಿಯಾಸ್ ಲೀನಾ ತನ್ನ ಪದವಿ ಮುಗಿಸಿ ತಂದೆ ತಾಯಿ ಜೊತೆ ಮನೆಯಲ್ಲಿ ಇದ್ದಾಳೆ. ಎರಡನೇ ಮಗಳು ಜೋನಲಿ ಆಲಿಯಾಸ್ ಲುನ ಮತ್ತು ಮೂರನೇ ಮಗಳು ರೂಪಲೇಖ ಆಲಿಯಾಸ್ ರೀನಾ ಗೌಹತಿಯಲ್ಲಿ ಕಲಿಯುತ್ತಾ ಇದ್ದಾರೆ. ಪತ್ನಿಯ ಹೆಸರು ಪುತುಲಿ. ೧೯೬೯ ರ ಮಧ್ಯಭಾಗ, ಜಡ್ಜ್ ಸಾಹೇಬರಿಗೆ ದುಬ್ರಿ ಗೆ ವರ್ಗ ಆಗುತ್ತದೆ ಫೆಬ್ರವರಿ 2,1970 ಅವರು ನಿವೃತ್ತಿ ಆಗಬೇಕು. ತಮ್ಮ ಸಂಸಾರವನ್ನು ಅಲ್ಲಿಗೆ ಒಯ್ಯದೆ ಒಬ್ಬರೇ ಹೋಗುತ್ತಾರೆ. ಅವರ ವಾಸಕ್ಕೆ ಸರಕಾರದ ಬಂಗಲೆ ಇರುತ್ತದೆ ಕುಟುಂಬದ ಸದಸ್ಯರು ಆಗಾಗ ಬಂದು ಹೋಗುತ್ತಾ ಇರುತ್ತಾರೆ. ಫೆಬ್ರುವರಿ ೨ ೧೯೭೦ ರ ದಿನ ಜಡ್ಜ್ ಸಾಹೇಬರು ನಿವೃತ್ತಿ ಹೊಂದುತ್ತಾರೆ. ಅದೇ ಸಮಯ ಸರಸ್ವತಿ ಪೂಜೆ ಇತ್ತು. ಅದಲ್ಲದೆ ನಿವೃತ್ತಿ ಹೊಂದಿದ ಮೇಲೂ ಒಂದು ತಿಂಗಳು ಅವರು ಬಂಗೆಯಲ್ಲಿ ಇರಬಹುದಿತ್ತು. ಅವರ ಮನೆಗೆ ಪತ್ನಿ ಹಾಗೂ ಹಿರಿಯ ಮಗಳು ಲೀನಾ ಬರುತ್ತಾರೆ ಏನಾಯಿತೋ ಗೊತ್ತಿಲ್ಲ ಫೆಬ್ರವರಿ 10, 1970ರ ರಾತ್ರಿ ಜಡ್ಜ್ ಸಾಹೇಬರು ತಮ್ಮ ಪತ್ನಿ ಹಾಗೂ ಹಿರಿಯ ಮಗಳು ಲೀನಾ ಕೊಲೆ ಮಾಡುತ್ತಾರೆ. ಅವರ ಶವಗಳನ್ನು ಆಗಲೇ ತಮ್ಮ ಮನೆಯ ಹಿಂಭಾಗದಲ್ಲಿ ಇದ್ದ ಮರ ಕಡಿಸಿ ಅಲ್ಲಿ ಬೇರೆ ಗಿದ ಹಾಕುತ್ತೇನೆ ಅಂತ ತೋಡಿ ಇತ್ತ ಗುಂಡಿಯಲ್ಲಿ ಹೂಳುತ್ತಾರೆ. ಮರುದಿನ ಆಳುಗಳು ಬಂದಾಗ ತನ್ನ ಪತ್ನಿ ಹಾಗೂ ಮಗಳು ಹತ್ತಿರದ ಸಂಬಂಧಿಕರು ಮರಣ ಹೊಂದಿದ ಕಾರಣ ದೆಹಲಿಗೆ ಹೋದರು ಅಂತ ಹೇಳುತ್ತಾರೆ. ಕೆಲವು ದಿನಗಳ ಬಳಿಕ ಅಂದರೆ ಫೆಬ್ರುವರಿ 25, 1970 ರ ದಿನ ತಮ್ಮ ಉಳಿದ ಇಬ್ಬರು ಮಕ್ಕಳನ್ನು ಕರೆಯುತ್ತಾರೆ. ತಾಯಿ ಮತ್ತು ಅಕ್ಕನ ಕುರಿತು ಅವರ ಬಳಿ ಸುಳ್ಳು ಹೇಳುತ್ತಾರೆ ಆದೆ ರಾತ್ರಿ ಅವರ ಕೊಲೆ ಮಾಡಿ ಇನ್ನೊಂದು ಮರ ಕಡಿದು ಅಲ್ಲಿ ಮಾಡಿ ಇಟ್ಟಿದ್ದ ಗುಂಡಿಯಲ್ಲಿ ಹೂಳುತ್ತಾರೆ ಮತ್ತು ತಾವು ಕಾಣೆ ಆಗುತ್ತಾರೆ. ಸ್ವಲ್ಪ ಕಾಲ ಕಳೆಯುತ್ತದೆ. ಪುತುಲಿ ಅವರ ಅಣ್ಣ ಪೊಲೀಸ್ ಇಲಾಖೆಯಲ್ಲಿ ಇದ್ದರು ತನ್ನ ತಂಗಿ ಬಹಳ ಕಾಲ ಸುದ್ದಿ ಸಮಾಚಾರ ಕಳಿಸದೆ ಇದ್ದ ಕಾರಣ ಮೊದಲು ಫೋನ್ ಮಾಡುತ್ತಾರೆ ಆದರೆ ಸಂಪರ್ಕ ಆಗದ ಕಾರಣ ತಾವೇ ಡುಬ್ರಿ ಗೆ ಬರುತ್ತಾರೆ. ಅಲ್ಲಿನ ಸ್ಥಳೀಯ ಪೊಲೀಸ್ ಸಹಾಯದಿಂದ ಕೊಲೆ ಆದದ್ದನ್ನು ಕಂಡು ಹಿಡಿಯುತ್ತಾರೆ. ತಲೆ ಮರೆಸಿ ತಿರುಗುತ್ತಿದ್ದ ಜಡ್ಜ್ ಬಂಧನ ಆಗುತ್ತದೆ. ನ್ಯಾಯಾಲಯ ಅವರಿಗೆ ಮರಣದಂಡನೆಗೆ ಗುರಿ ಮಾಡುತ್ತದೆ ಹೈ ಕೋರ್ಟ್ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರ ಪತಿಗಳು ಇವರ ಕ್ಷಮಾದಾನ ಅರ್ಜಿ ತಿರಸ್ಕಾರ ಮಾಡುತ್ತಾರೆ ಕೊನೆಗೆ 1976 ಫೆಬ್ರುವರಿ ತಿಂಗಳಲ್ಲಿ ಅವರಿಗೆ ಗಲ್ಲು ಆಗುತ್ತದೆ. ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಗಲ್ಲಿಗೆ ಏರಿದ ಮೊದಲ ಜಡ್ಜ್ ಎನ್ನುವ ಕುಖ್ಯಾತಿ ಸಿಗುತ್ತದೆ. ಆದರೆ ಕೊಲೆ ಏಕೆ ಮಾಡಿದರು ಎನ್ನುವ ವಿಷಯ ಅವರು ಸಾಯುವವರೆಗೆ ಬಾಯಿ ಬಿಡುವುದಿಲ್ಲ. ಅವರು ಮಾನಸಿಕ ಅಸ್ವಸ್ಥರೂ ಆಗಿರಲಿಲ್ಲ. ಈ ಕುರಿತು ಪತ್ತೆ ಮಾಡುವ ಪೊಲೀಸ್ ಯತ್ನ ಕೂಡ ವಿಫಲ. ಇಂದಿಗೂ ಅದು ರಹಸ್ಯ ಆಗಿ ಉಳಿದಿದೆ. ಈ ದಾರುಣ ಘಟನೆಯ ಮೇಲೆ ಈ ಪುಸ್ತಕ ಬಂದಿದೆ ಲೇಖಕರು ತಮ್ಮ ಕಲ್ಪನೆ ಸೇರಿಸಿದ್ದಾರೆ. ಜಡ್ಜ್ ಸಾಹೇಬರು ತುಂಬಾ ಹಳೆ ಕಾಲದ ವಿಚಾರ ಇಟ್ಟು ಕೊಂಡವರಾಗಿದ್ದು ಪತ್ನಿ ಮತ್ತು ಮಕ್ಕಳ ಸ್ವೇಚ್ಛೆ ಅವರಿಗೆ ಇಷ್ಟ ಇರಲಿಲ್ಲ ಅದರಲ್ಲೂ ಹಿರಿಯ ಇಬ್ಬರು ಹೆಣ್ಣು ಮಕ್ಕಳು ದಾರಿ ತಪ್ಪಿದ್ದರು. ಈ ವಿಷಯ ತಿಳಿದ ಮನೆಯ ಆಳು ಮಹೇಶ ಅವರೆಲ್ಲರನ್ನೂ ಅನೈತಿಕ ಸಂಬಂಧಕ್ಕೆ ಪೀಡಿಸುತ್ತಾನೆ. ಅವರು ಒಪ್ಪಲೇ ಬೇಕಾಗುತ್ತದೆ. ಇದು ಜಡ್ಜ್ ಸಾಹೇಬರಿಗೆ ಗೊತ್ತಾಗಿ ಅವರೆಲ್ಲರನ್ನು ಕೊಂದು ಹಾಕುತ್ತಾರೆ. ಮಹೇಶನ ಬೆದರಿಸಿ ಅವನ ಸಹಾಯದಿಂದಲೇ ಹೆಣಗಳನ್ನು ಹೂಳುತ್ತಾರೆ. ಮಹೇಶನನ್ನು ಕೊಲ್ಲುವ ಅವರ ಯತ್ನ ಸಫಲ ಆಗುವುದಿಲ್ಲ. ಆದರೆ ಇದು ಲೇಖಕರ ಕಲ್ಪನೆ ಮಾತ್ರ. ನಿಜ ಜೀವನದಲ್ಲಿ ಜಡ್ಜ್ ಸಾಹೇಬರ ಕುಟುಂಬದ ಕುರಿತು ನಿಜವಾಗಿ ಯಾರೂ ಅಂತಹ ಆಪಾದನೆ ಮಾಡಿರಲಿಲ್ಲ. ಕೊಲೆ ಆದದ್ದು ನಿಜ ಆದ ಕಾರಣ ಜಡ್ಜ್ ಸಾಹೇಬರು ಗಲ್ಲಿಗೆ ಹೋದರು ಯಾಕೆ ಅವರು ತನ್ನ ಕುಟುಂಬದ ನಾಶ ಮಾಡಿದರು, ಅದು ಎಂದಿಗೂ ಹೊರ ಬರುವುದಿಲ್ಲ

About the Author

ವಂಶಿ

ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.      ...

READ MORE

Related Books