ನಾಲ್ಕನೆಯ ಆಯಾಮ

Author : ಎಂ.ವಿ ನಾಗರಾಜರಾವ್

Pages 240

₹ 120.00
Year of Publication: 2007
Published by: ಸಾಹಿತ್ಯ ನಂದನ
Phone: +91 94484 6772

Synopsys

ಎಂ.ವಿ ನಾಗರಾಜರಾವ್ ಅವರ ಕಾದಂಬರಿ ನಾಲ್ಕನೆಯ ಆಯಾಮ. ಲೇಖಕ ಸುರೇಶ ಸೋಮಪುರ ಅವರ ಗುಜರಾತಿ ಮೂಲದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಅಹಂಕಾರ, ಮೋಹ, ಸ್ವಾರ್ಥ, ಧನದಾಹದ ಸುಳಿಯಲ್ಲಿ ನಿಲುಕಿರುವ ಅತೃಪ್ತ ಕುಟುಂಬವೊಂದರ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ. ಸಾರ್ಥಿಗಳ ಕುತಂತ್ರಕ್ಕೆ ಸಿಲುಕಿ ಅಕಾಲ ಮರಣಕ್ಕೆ ತುತ್ತಾದ ಹೆಣ್ಣು ‘ನಾಲ್ಕನೆಯ ಆಯಾಮ’ ದಲ್ಲಿ ಸೇರಿ ತನಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲುವ ರೋಚಕ ಕಥೆ ಇಲ್ಲಿಯ ಕಥಾ ವಸ್ತು.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books