ನರಭಕ್ಷಕ

Author : ಆರ್‍ಯಾಂಬ ಪಟ್ಟಾಭಿ

Pages 146

₹ 99.00

Synopsys

ಲೇಖಕಿ ಆರ್‍ಯಾಂಬ ಪಟ್ಟಾಭಿ ಅವರ ಕಾದಂಬರಿ ನರಭಕ್ಷಕ.

ಲೇಖಕಿ ಕೃತಿಯ ಮುನ್ನುಡಿಯಲ್ಲಿ ಬರೆದುಕೊಂಡಿರುವಂತೆ ವಿಶ್ವದ ಅನೇಕ ದೇಶಗಳಲ್ಲಿ ಹುಲಿ ರಾಷ್ಟ್ರಮಟ್ಟದ ಪ್ರಮುಖ ಪ್ರಾಣಿ ಗಳಲ್ಲಿ ಒಂದಾಗಿದೆ. ವೈವಿಧ್ಯಮಯವಾದ ರೂಪ, ಉಜ್ವಲವಾದ ಬಣ್ಣ, ಅದ್ಭುತವಾದ ಆಕಾರ, ಅಸಾಧಾರಣವಾದ ಶಕ್ತಿ ಸಾಮರ್ಥ್ಯ ಈ ವಿಶಿಷ್ಟ ಗುಣಗಳಿಂದಾಗಿ 1972ರಲ್ಲಿ ಮೃಗ ಮಂಡಲಿ ಹುಲಿಗೆ ಮೃಗರಾಜನ ಸ್ಥಾನವನ್ನು ನೀಡಿ "ಭಾರತದ ರಾಷ್ಟ್ರೀಯ ಮೃಗ” ಎಂಬ ಪಟ್ಟ ಕಟ್ಟಿತು. ಹುಲಿಯ ಉಲ್ಲೇಖ ಪುರಾಣ, ಇತಿಹಾಸ ಮತ್ತು ದಂತ ಕಥೆಗಳಲ್ಲಿ ಯಥೇಚ್ಛವಾಗಿ ಬರುತ್ತದೆ. ಹುಲಿ ಪ್ರಕೃತಿಯ ಶಕ್ತಿದ್ಯೋತಕ ಹಾಗೂ ಸೌಂದರ್ಯದ ಪ್ರತೀಕ. ವಿಶ್ವದಲ್ಲಿ ಬಹುಶಃ ಹುಲಿಯಷ್ಟು ಬೇರೆ ಯಾವ ಪ್ರಾಣಿಯೂ ಪ್ರಭಾವ ಬೀರಿಲ್ಲ. ಹುಲಿಯ ಸೌಂದರ್ಯ, ಶಕ್ತಿಗಳಿಗೆ ಮಾರು ಹೋಗದ ಕವಿಗಳಿಲ್ಲ. ಅದರ ಭವ್ಯತೆ, ರಮ್ಯತೆಗಳಿಗೆ ಸಾಹಿತಿಗಳು ಬೆರಗಾಗಿ “ವನರಾಜ” ಎಂಬ ಬಿರುದು ಕೊಟ್ಟಿದ್ದಾರೆ. ಮೃಗಾಲಯಗಳಲ್ಲಿ, ಚಿತ್ರಗಳಲ್ಲಿ ಹುಲಿಯನ್ನು ನೋಡಿದಾಗ ಲೆಲ್ಲ ನನ್ನ ಮೇಲೆ ವಿಚಿತ್ರ ಪ್ರಭಾವ ಬೀರಿ ಒಂದು ರೀತಿಯ ಅನುಭವವನ್ನೇ ತಂದು ಕೊಡುತ್ತಿತ್ತು.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯ ಪುಸ್ತಕಗಳು ಬೆಳಕಿಗೆ ಬಂದಿದ್ದರೂ ಪ್ರಾಣಿಗಳನ್ನು ಅದರಲ್ಲೂ ಹುಲಿಯನ್ನು ಕುರಿತಾದ ಪುಸ್ತಕಗಳು ಪ್ರಕಟವಾಗಿರುವುದು ತೀರ ಕಡಿಮೆ. ಹುಲಿಯ ಜೀವನ, ಸ್ವಭಾವ, ಆಹಾರ, ಬೇಟೆ, ನಡವಳಿಕೆ ಇತ್ಯಾದಿ ವಿಷಯಗಳನ್ನು ಕುರಿತು ಕನ್ನಡದಲ್ಲಿ ಪುಸ್ತಕಗಳು ಬಂದಿದ್ದರೂ ಅವು ಪಠ್ಯ ಪುಸ್ತಕಗಳಂತಿದ್ದು ಶ್ರೀ ಸಾಮಾನ್ಯ ಓದುಗರ ಗಮನ ಸೆಳೆಯುವುದರಲ್ಲಿ ಸಾಕಷ್ಟು ಯಶಸ್ವಿಯಾಗಿಲ್ಲ.ಕಾದಂಬರಿ ಕನ್ನಡ ಸಾಹಿತ್ಯದ ಪ್ರಮುಖ ಹಾಗೂ ಜನಪ್ರಿಯ ಪ್ರಕಾರ, ಇದು ಕಾದಂಬರಿ ಯುಗ, ಕಾದಂಬರಿ ಜನಸಾಮಾನ್ಯರ ಹೃದಯವನ್ನು ತೀವ್ರ ವಾಗಿ ತಟ್ಟುವಂಥ ಶಕ್ತಿಯುಳ್ಳದ್ದು. ನನ್ನ ಮುಖ್ಯ ಅಭಿವ್ಯಕ್ತಿ ಪ್ರಕಾರ ಕಾದಂಬರಿ, ಹಲವಾರು ಕಾದಂಬರಿಗಳನ್ನು ಬರೆದಿರುವ ನಾನು ಹುಲಿಯ ಬಗ್ಗೆ ಅದರಲ್ಲೂ ಮನುಷ್ಯರನ್ನೇ ಕೊಂದು ತಿನ್ನುವ ಹುಲಿಯನ್ನು ಕುರಿತು ಕಾದಂಬರಿ ಬರೆಯಲು ಬಯಸಿದೆ. ಅದರ ಪರಿಣಾಮವೇ ಈ ಕೃತಿ “ನರಭಕ್ಷಕ'. ಈ ಕೃತಿಯಲ್ಲಿ ಹುಲಿಯ ಸ್ವಭಾವ, ಜೀವನ, ಹುಲಿಶಿಕಾರಿಯ ಅನುಭವ ಗಳನ್ನಲ್ಲದೆ ಅರಣ್ಯಸಂಪತ್ತು, ಅರಣ್ಯ ರಕ್ಷಣಾಯೋಜನೆಯ ಉದ್ದೇಶಗಳನ್ನು ಶ್ರೀ ಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಕೃತಿ ನೈಜಕ್ಕೆ ಹತ್ತಿರ ವಾಗಿದ್ದು ವಾಸ್ತವಾಂಶಗಳಿಗೆ ಮೆರುಗು ಕೊಡುವಂತಾಗಬೇಕೆಂಬ ಉದ್ದೇಶ ದಿಂದ ಹುಲಿಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರನ್ನು ಮತ್ತು ಕೆಲವು ಹಿರಿಯ ಶಿಕಾರಿಗಳನ್ನು ಭೇಟಿಯಾಗಿ ಅವರಿಂದ ವಿಚಾರಗಳನ್ನು, ಅನುಭವ ಗಳನ್ನು ಸಂಗ್ರಹಿಸಿ ಈ ಕಾದಂಬರಿಯಲ್ಲಿ ಅಭಿವ್ಯಕ್ತಿಸಿದ್ದೇನೆ ಎನ್ನುತ್ತಾರೆ ಲೇಖಕಿ ಆರ್‍ಯಾಂಬ ಅವರು.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books