ಪುರುಷಾವತಾರ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 390




Year of Publication: 1951
Published by: ಹಿಂದ್ ಬ್ರದರ್ಸ್ ಪ್ರಕಾಶನ
Address: ಬೆಂಗಳೂರು

Synopsys

ಪುರುಷಾವತಾರ ಕಾದಂಬರಿಯನ್ನು ಸಾಹಿತಿ ತ.ರಾ.ಸು. ಅವರು ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಸುಳಿವ ಪ್ರದಾನ ಪಾತ್ರಗಳು ಸಮಾಜದ ಗಣ್ಯ ವ್ಯಕ್ತಿಗಳಲ್ಲ, ಕಲಾವಿದರಲ್ಲ, ರಾಜಕಾರಣಿಗಳಲ್ಲ, ಯಾವುದೊಂದು ಬಗೆಯ ಹೊಳಪೂ ಇಲ್ಲದೆ ದಿನದ ಅನ್ನಕ್ಕೆ ಮೈ ಮಿದುಳನ್ನು ಮಾರಿಕೊಂಡ ಯಾಂತ್ರಿಕ ಮಧ್ಯವರ್ಗದ ಜೀವಿಯಲ್ಲ. ಮುಂಬರುವ ಕ್ರಾಂತಿಯ, ಮಸೆಯುತ್ತಿರುವ ಕೈಮಗಳಾದ ಕೂಲಿಗಳೂ ಅಲ್ಲ ಬದಲಾಗಿ ಯಾರ ಕಣ್ಣಿಗೂ ಬೀಳದ ಅರ್ಧ ಮನುಷ್ಯ ಅರ್ಧ ಹಸು. ಹುಟ್ಟು ಮನುಷ್ಯರಂತೆ ಬದುಕು ಪಶುಗಳಂತೆ. ಮಾನವನ ಸಹಜವಾದ ಕರುಣೆ, ಕೊಂಚ ಪ್ರೀತಿ, ನಾಲ್ಕು ಆತ್ಮೀಯತೆಯ ಮಾತು ಹೀಗೆ ಇಲ್ಲಿನ ಕಾದಂಬರಿಯು ಕನ್ನಡದಲ್ಲಿ ಭಿನ್ನ ಕಾದಂಬರಿಯಾಗಿ ಹೆಸರು ಪಡದಿದೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books