ಸೂರ್ಯನ್ ಪರ್ಪಂಚ

Author : ಸೂರ್ಯ ಪ್ರಸಾದ್ ಕುಲಕರ್ಣಿ

Pages 236

₹ 250.00
Year of Publication: 2022
Published by: ಹೆಚ್.ಎಸ್. ಆರ್.ಎ.ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560 058
Phone: 7892793054

Synopsys

ಕಾದಂಬರಿಕಾರ ಸೂರ್ಯ ಪ್ರಸಾದ್ ಕುಲಕರ್ಣಿ ಅವರ ಕಾದಂಬರಿ ಸೂರ್ಯನ್ ಪರ್ಪಂಚ. ಸುರೇಶ ಕೋರಕೊಪ್ಪ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ವಾಸುದೇವ ನಾಡಿಗ್ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಪ್ರಸಾದ್ ಅವರ ಭಾಷಿಕ ಲವಲವಿಕೆ, ಕತೆ ಹೇಳುವ ಉತ್ಸುಕತೆ ಮತ್ತು ಕತೆ ಕೇಳಿಸಿಕೊಳ್ಳುವ, ಕತೆಯನ್ನು ಅನಾವರಣ ಮಾಡುವ ತಾಳ್ಮೆ ಇಲ್ಲಿ ಅಚ್ಚರಿ ಮೂಡಿಸುತ್ತದೆ. ಇದು ಬರಹಗಾರರಿಗೆ ಇರಬೇಕಾದ ಮೂಲ ಗುಣ ಕೂಡಾ. ‘ಇದೇ ಸತ್ಯ ಇದೇ ವಾಸ್ತವ’ ಎಂದು ಬರೆಯುತ್ತಲೇ ‘ಇಲ್ಲ ಇಲ್ಲ ಇನ್ನೂ ಬೇರೆ ಏನೋ ಇದೆ’ ಎಂಬ ಅಸಮಾಧಾನವೇ ಬರಹದ ನಿರಂತರತೆ ಮತ್ತು ತಾತ್ವಿಕತೆಯನ್ನು ಗಟ್ಟಿ ಗೊಳಿಸಬಲ್ಲದು ಎಂದು ಹೇಳಿದ್ದಾರೆ.

About the Author

ಸೂರ್ಯ ಪ್ರಸಾದ್ ಕುಲಕರ್ಣಿ
(04 April 1981)

ಲೇಖಕ ಸೂರ್ಯ ಪ್ರಸಾದ್ ಕುಲಕರ್ಣಿ ಅವರು ಸೂರ್ಯಸಖ ಎಂಬ ಕಾವ್ಯನಾಮದಿಂದ ಬರಹ , ಕವನ , ಲೇಖನಗಳನ್ನು ಬರೆಯುತ್ತಾರೆ. ಮೂಲತಃ ಬೆಳಗಾವಿಯವನು.ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ ಪೂರೈಸಿದ ಇವರು ಜನಿಸಿದ್ದು ಏಪ್ರಿಲ್ 4, 1981ರಂದು.ತಂದೆ ನಾರಾಯಣ ಕುಲಕರ್ಣಿ. ತಾಯಿ ಲಕ್ಷ್ಮಿ ಕುಲಕರ್ಣಿ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇರುವ ಇವರು ಖಾಸಗಿ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ , ಕವನ , ಲೇಖನಗಳು ಪ್ರಕಟಗೊಂಡಿವೆ. ಕೃತಿಗಳು - ಸೂರ್ಯನ್ ಪರ್ಪಂಚ ( ಕಾದಂಬರಿ. 2022 ) ಪ್ರಹರಿ ( ಕವನ ಸಂಕಲನ. 2022 ) ...

READ MORE

Related Books