ತೆಂಬರೆ ಕಾದಂಬರಿಯನ್ನು ಸಾಹಿತಿ ಎಂ. ವೀರಪ್ಪ ಮೊಯಿಲಿ ಅವರು ರಚಿಸಿದ್ದಾರೆ. . ಹೊಸ ಕ್ರಾಂತಿಯ ಆಶಯ ಹೊಂದಿದ ಕಾದಂಬರಿ ತೆಂಬರೆ. ತುಳುನಾಡು ಎಂಬುದು ಜಾನಪದ ವೀರನಾಡು. ನಾಗಾರಾಧನೆ, ಭೂತಾರಾಧನೆ ಇಲ್ಲಿಯ ಸಾಂಸ್ಕೃತಿಕ ಬೇರುನ ಎಂಬುದನ್ನೇ ಕೇಂದ್ರವಾಗಿರಿಸಿಕೊಂಡು ಈ ಕೃತಿಯನ್ನು ರಚಿಸಲಾಗಿದೆ.
ಕರ್ನಾಟಕ ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರಸಚಿವರಾಗಿ ರಾಜಕಾಣದಲ್ಲಿ ವೀರಪ್ಪ ಮೊಯ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ತಂದೆ- ತಮ್ಮಯ್ಯ ಮೊಯಿಲಿ, ತಾಯಿ ಪೂವಮ್ಮ. ಪ್ರಾಥಮಿಕ ಶಿಕ್ಷಣ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮೂಡಬಿದರೆಯಲ್ಲಿ ಪೂರೈಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಪದವಿ, ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆ ಹಾಗೂ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿ ಪಡೆದಿದ್ದಾರೆ. ಕಾರ್ಕಳ ಹಾಗೂ ಮಂಗಳೂರಿನಲ್ಲಿ ವಕೀಲ ವೃತ್ತಿಯನ್ನಾರಂಭಿಸಿದ ನಂತರದಲ್ಲಿ ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿಗಳಾಗಿದ್ದರು. 1968ರಲ್ಲಿ ಕಾಂಗ್ರೆಸ್ ಸದಸ್ಯರಾಗಿ, 1969ರಲ್ಲಿ ಕಿಸಾನ್ ಸಭಾ ಸ್ಥಾಪಿಸಿದರು. 1972ರಿಂದ 1999ರವರೆಗೆ ಮೊಯ್ಲಿಯವರೆಗೆ ...
READ MORE