ಗತಿ

Author : ಬಿ.ಟಿ. ಲಲಿತಾ ನಾಯಕ್

Pages 118

₹ 90.00




Year of Publication: 2014
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು- 560018

Synopsys

'ಗತಿʼ ಕಾದಂಬರಿಯನ್ನು ಲೇಖಕಿ ಬಿ. ಟಿ. ಲಲಿತಾ ನಾಯಕ್‌ ಅವರು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ಈ ಪುಸ್ತಕವನ್ನು ಹೊರತರಲಾಗಿದೆ. ಈ ಕಾದಂಬರಿಯಲ್ಲಿ ಚಳುವಳಿಗಳು ಹಾಗೂ ವಿವಿಧ ಸಾಹಿತ್ಯಿಕ ಸಂವೇದನೆಗಳನ್ನು ಒಟ್ಟುಸೇರಿಸಿ ಕಥೆ ಹೆಣೆಯಲಾಗಿದೆ. ಸಾಮಾಜಿಕ ನ್ಯಾಯಗಳ ಸುತ್ತ ಸುತ್ತುವ ಇಲ್ಲಿನ ಕಥೆ ಸರಳ ಬಾಷೆಯಲ್ಲಿ ಲೇಖಕಿ ವಿವರಿಸಿದ್ದಾರೆ. ಜಗತ್ತಿನಲ್ಲಿರುವುದು ಮನುಷ್ಯ ಜಾತಿ ಒಂದೇ ಎಂಬ ಸಾರಾಂಶವನ್ನು ಹೊಂದಿರುವ ಕಾದಂಬರಿಯು ಸಾಹಿತ್ಯದ ಎಲ್ಲಾ ಪ್ರಕಾರಗಳ ಪ್ರಾತಿನಿಧ್ಯವಿರುವಂತೆ ಲೇಖಕಿ ಚಿತ್ರಿಸಿದ್ದಾರೆ.

About the Author

ಬಿ.ಟಿ. ಲಲಿತಾ ನಾಯಕ್
(04 April 1945)

ಬಿ.ಟಿ. ಲಲಿತಾ ನಾಯಕ್  ಜನಿಸಿದ್ದು 1945 ಏಪ್ರಿಲ್‌ 4 ರಂದು ಚಿಕ್ಕಮಗಳೂರಿನ ತಂಗಲಿ ತಾಂಡದಲ್ಲಿ. ಪತ್ರಿಕಾ ವರದಿಗಾರ್ತಿಯಾಗಿ ಅನುಭವ ಹೊಂದಿರುವ ಇವರು, ಸಕ್ರಿಯ ರಾಜಕಾರಣಿ, ಸಮಾಜಸೇವಕಿಯಾಗಿ ಜನರಿಗೆ ಪರಿಚಯವಾದವರು. ಕೆಲಕಾಲ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಇವರು ಕನ್ನಡಕ್ಕೆ ಸಾರಸತ್ವ ಲೋಕಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕವಿತೆ, ಕತೆ, ಕಾದಂಬರಿ ಹಾಗೂ ನಾಟಕ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ರಚಿಸಿರುತ್ತಾರೆ. 1981 ರಲ್ಲಿ ಲಂಕೇಶ್ ಪತ್ರಿಕೆಗೆ ವರದಿಗಾರ್ತಿಯಾಗಿ 6 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಾರೆ.   ಕಾರ್ಯಕ್ಷೇತ್ರಗಳು : ಸೇವಾಲಾಲ್ ದಂತ ವೈದ್ಯಕೀಯ ಕಾಲೇಜಿನ ಕಾಲೇಜಿನ ಗೌರ್‍ನಿಂಗ್ ಕೌನ್ಸಿಲ್ ಕಾರ್ಯಧ್ಯಕ್ಷೆಯಾಗಿ ಸೇವೆ, ಕನ್ನಡ ಕುಲತಿಲಕ ಮಾಸಪತ್ರಿಕೆ ಗೌರವಾಧ್ಯಕ್ಷೆಯಾಗಿ ...

READ MORE

Related Books