ಜೀವನ ಜೋಕಾಲಿ

Author : ಲತಾ ಜೋಶಿ

Pages 80

₹ 100.00




Year of Publication: 2020
Published by: ಹೆಚ್ ಎಸ್ ಆರ್ ಎ. ಪ್ರಕಾಶನ
Address: #2, ಶ್ರೀ ಅನ್ನಪೂರ್ಣೇಶ್ವರಿ ನಿಲಯ, 1ನೇ ಮುಖ್ಯರಸ್ತೆ, ಭೈರವೇಶ್ವರ ನಗರ, ಲಗ್ಗೆರೆ, ಬೆಂಗಳೂರು- 560058

Synopsys

ಲೇಖಕಿ ಲತಾ ಜೋಶಿ ಅವರ ಸಾಮಾಜಿಕ ಕಿರು ಕಾದಂಬರಿ ‘ಜೀವನ ಜೋಕಾಲಿ’. ಒಂದು ಅವಿಭಕ್ತ ಕುಟುಂಬದ ಚೌಕಟ್ಟನ್ನು ಹೊಂದಿರುವ ಈ ಕಥೆಯಲ್ಲಿ ಆದರ್ಶ ಕುಟುಂಬವೊಂದರ ಚಿತ್ರಣವಿದೆ. ನಿಜ ಜೀವನಕ್ಕೆ ಹತ್ತಿರವಾದ ಕಥಾ ಹಂದರವನ್ನು ಹೊಂದಿದ್ದು ಪ್ರತಿ ಪಾತ್ರಗಳಿಗೂ ಈ ಕಥೆಯಲ್ಲಿ ಮೌಲ್ಯಗಳಿವೆ. ಸರಿ- ತಪ್ಪುಗಳ ತುಲನೆಯ ಜೊತೆಗೆ "ಗೃಹಿಣಿ ಗೃಹ ಮಚ್ಯತೆ " ಎಂಬ ಮಾತನ್ನು ಪುಷ್ಟಿಕರಿಸುವ ಸಂದರ್ಭಗಳು ಈ ಕಥೆಯಲ್ಲಿ ಅಡಕವಾಗಿವೆ. ಮಾಧವಿ ಎಂಬ ಹೆಸರಿನ ಹಿರಿಯ ಸೊಸೆಯ ಜವಾಬ್ದಾರಿಯುತ ನಡುವಳಿಕೆ, ಆ ಮನೆಯ ಸಮಸ್ಯೆಗಳನ್ನು ನವಿರಾಗಿ ಪರಿಹರಿಸಿದ ರೀತಿ ಆದರ್ಶಪ್ರಾಯವಾಗಿದ್ದು ಈ ಕಥೆಯ ಕಥಾಹಂದರ ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪತ್ತೇದಾರಿ ಎಳೆಯೂ ಈ ಕಥೆಯಲ್ಲಿದ್ದು, ಯುವಜನತೆಯಲ್ಲಿ ಮೊಬೈಲ್ ಗೀಳು ಅಪಾಯಕ್ಕೆ ಈಡು ಮಾಡುವ ಹಲವಾರು ಮಜಲುಗಳನ್ನು ತುಂಬಿದ ಈ ಕಥೆ ಕುತೂಹಲವನ್ನು ಕೊನೆಯವರೆಗೂ ಕಾಯ್ದಿಟ್ಟುಕೊಂಡಿದೆ. ಶ್ರೀಲಕ್ಷ್ಮೀ ಭಟ್ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ.

About the Author

ಲತಾ ಜೋಶಿ

ಲೇಖಕಿ ಲತಾ ಜೋಶಿ ಮೂಲತಃ ಉತ್ತರ ಕರ್ನಾಟಕದವರು. ಹುಟ್ಟೂರು ರಾಣೆಬೆನ್ನೂರು ಹಾಗೂ ಬ್ಯಾಡಿಗಿಯ ಸೊಸೆಯೂ ಹೌದು. ಸದ್ಯ ಮಕ್ಕಳೊಂದಿಗೆ ಬೆಂಗಳೂರಲ್ಲಿ ವಾಸವಿದ್ದು,ಕೆಲವು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ . ಓದುವ ಹವ್ಯಾಸ ಅತೀವ.. ಬರೆಯುವುದರಲ್ಲಿ ತುಂಬಾ ಆಸಕ್ತಿ. ದಿನಪತ್ರಿಕೆಗಳಲ್ಲಿ ಇವರ ಅನೇಕ ಬರಹಗಳು ಪ್ರಕಟವಾಗಿವೆ..ಹಾಸ್ಯ ಪ್ರಬಂಧ ನೆಚ್ಚಿನ ವಿಷಯ.  ಫೇಸ್ಬುಕ್ ನಲ್ಲಿ ಕನ್ನಡ ಕಥಾಗುಚ್ಛ ಎಂಬ ಸಾಹಿತ್ಯದ ಗುಂಪು ಮೂರುವರೆ ವರ್ಷದ ಹಿಂದೆ ಪ್ರಾರಮಬಿಸಿ, ಅದರ ಸಂಸ್ಥಾಪಕಿ, ಮುಖ್ಯ ನಿರ್ವಾಹಕಿಯಾಗಿದ್ದಾರೆ. ಕೃತಿ; ಜೀವನ ಜೋಕಾಲಿ (ಕಾದಂಬರಿ) ...

READ MORE

Related Books