ಕನ್ಯಾದಾನ

Author : ಎಚ್. ಕೆ. ಅನಸೂಯಾ ಸಂಪತ್

Pages 184

₹ 90.00
Year of Publication: 2010
Published by: ಹೇಮಂತ ಸಾಹಿತ್ಯ
Address: ಬೆಂಗಳೂರು

Synopsys

ಹೆಚ್. ಕೆ. ಅನಸೂಯ ಸಂಪತ್ ಅವರ ಸಾಮಾಜಿಕ ಕಾದಂಬರಿ ಕನ್ಯಾದಾನ. ನರಸಿಂಹಯ್ಯ ಮತ್ತು ಮೀನಾಕ್ಷಮ್ಮನ ಮಗಳು ಅಂಬಿಕಾ. ತಂದೆ ನರಸಿಂಹಯ್ಯ ಅನ್ವರ್ಥನಾಮರು. ಯಾವಾಗಲೂ ಸಿಟ್ಟಿನಲ್ಲೆ ಇರುತ್ತಿದ್ದರು. ತಮ್ಮನಾದ ಗೋಪಾಲನೊಂದಿಗೆ ಆಡುತ್ತಾ ಬೆಳೆದ ಅಂಬಿಕಾಳಿಗೆ, ತಂದೆಯ ಪ್ರೀತಿಗಿಂತ ಕಟ್ಟುನಿಟ್ಟಿನ ನಡವಳಿಕೆಯ ಬಿಸಿ ಹೆಚ್ಚು ತಗಲಿತ್ತು. ತಾಯಿಯೂ ಮಗನ ಮೇಲೆ ಅತಿಯಾದ ಪ್ರೀತಿ ಹರಿಸುವಾಗ, ಮಗಳು ಅಂಬಿಕಾ 'ಹೆಣ್ಣು' ಎಂಬ ನಿರ್ಲಕ್ಷ್ಯಕ್ಕೆ ಗುರಿಯಾದಂತೆ ತೋರುತ್ತಿತ್ತು ಎಂಬಂತೆ ಕತೆ ಸಾಗುತ್ತದೆ. ಪ್ರಥಮ ಮುದ್ರಣ : 1998. 2ನೇ ಮುದ್ರಣ 2010

About the Author

ಎಚ್. ಕೆ. ಅನಸೂಯಾ ಸಂಪತ್
(28 April 1955)

ಕಾದಂರಿಗಾರ್ತಿ ಅನಸೂಯಾ ಸಂಪತ್ ಎಚ್. ಕೆ. ಅವರು ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1955 ಏಪ್ರಿಲ್ 28 ರಂದು ಜನನ. ತಂದೆ ಹೆಚ್.ವಿ. ಕೃಷ್ಣಮೂರ್ತಿ, ತಾಯಿ ಹೆಚ್. ಕೆ. ಸರೋಜ. ’ಅಗ್ನಿಸಾಕ್ಷಿ, ಮುತ್ತಿನ ಮಂಟಪ, ಮದುವೆಯ ಈ ಬಂಧ, ಹೂವಿನಹುತ್ತ, ಮಂಜುಳ ಗೀತ, ಸುಗಂಧ ಸಿಂಚನ, ಹೂವು-ಮೊಗ್ಗು, ಮಧು ತುಂತುರು, ಹೂವೊಂದು ಬೇಕು ಬಳ್ಳಿಗೆ, ರಂಜಿತಾ’  ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books