ಒಂದೊಂದು ತಲೆಗೂ ಒಂದೊಂದು ಬೆಲೆ

Author : ಎಂ.ಆರ್‌. ದತ್ತಾತ್ರಿ

Pages 248

₹ 250.00
Year of Publication: 2022
Published by: ಅಂಕಿತ ಪುಸ್ತಕ
Address: ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು, 53, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004
Phone: 08026617100

Synopsys

ಎಂ.ಆರ್ ದತ್ತಾತ್ರಿ ಅವರ ನಾಲ್ಕನೇ ಕಾದಂಬರಿ ‘ಒಂದೊಂದು ತಲೆಗೂ ಒಂದೊಂದು ಬೆಲೆ’. ಕೃತಿಯಲ್ಲಿ ಲೇಖಕರು ಬರೆದಿರುವಂತೆ, ಹಾಲಿವುಡ್‌ನ ಜನಪ್ರಿಯ ಸಿನಿಮಾ `ದ ಗಾಡ್‌ಫಾದರ್'ನಲ್ಲಿ ಬರುವ ದೃಶ್ಯ ವೊಂದು ನನ್ನನ್ನು ಸದಾ ಕಾಡುತ್ತದೆ. ಗುಲಾಬಿ ಸಿಕ್ಕಿಸಿದ ಕರಿಕೋಟನ್ನು ತೊಟ್ಟ ಅಮೆರಿಕದ ಭೂಗತಜಗತ್ತಿನ ದೊರೆ ಡಾನ್ ವಿಟೋ ಕಾರ್ಲಿವೋನೀ ತನ್ನ ಅರೆಮರೆಯ ಕೋಣೆಯಲ್ಲಿ ನಿಂತು, ಸಹಾಯ ಕೇಳಿ ಬಂದವನ ಆರ್ತ ಕಣ್ಣುಗಳನ್ನೇ ಅಳೆಯುವವನಂತೆ ನೋಡುತ್ತ, ಮುಖಚಹರೆ ಯಲ್ಲಿ ಯಾವ ಭಾವಗಳನ್ನೂ ಸುಲಭಕ್ಕೆ ಬಿಟ್ಟುಕೊಡದೆ, ತನ್ನ ಹುಟ್ಟುಹವ್ಯಾಸದಂತೆ ದಪ್ಪತುಟಿಗಳನ್ನು ಕೊಂಚವಷ್ಟೆ ಚಲಿಸಿ, ನ್ಯೂಯಾರ್ಕ್-ಸಿಸಿಲಿಯನ್ ಶೈಲಿಯ ಉಚ್ಚಾರಣೆಯಲ್ಲಿ, `ಐಯಾಮ್ ಗೊನಾ ಮೇಕ್ ಹಿಮ್ ಆನ್ ಆಫರ್ ಹಿ ಕ್ಯಾಂಟ್ ರೆಫ್ಯೂಸ್' - ನಾನು ಮಾಡುವ ಪ್ರಸ್ತಾಪವನ್ನು ಅವನು ತಿರಸ್ಕರಿಸಲಾರ - ಎನ್ನುತ್ತಾನೆ. `ಎಲ್ಲರ ಬೆಲೆ ನನಗೆ ತಿಳಿದಿದೆ' ಎನ್ನುವ ಧಾರ್ಷ್ಟ್ಯದ ಮಾತದು. ಆ ಮಾತಿರುವ ಕಾದಂಬರಿಯನ್ನು ಮಾರಿಯೋ ಪೂಝೆ ಬರೆದು ಐವತ್ತೆರಡು ವರ್ಷಗಳಾದವು ಮತ್ತು ಅದ್ಭುತ ನಟ ಮಾರ್ಲನ್ ಬ್ರಾಂಡೋ ಸಿನಿಮಾದಲ್ಲಿ ನುಡಿದು, ನಟಿಸಿ, ನಲ್ವತ್ತೊಂಬತ್ತು ವರ್ಷಗಳು ಸಂದವು. ಆದರೂ, ಆ ಮಾತು ಈ ಕಾದಂಬರಿ ಬರವಣಿಗೆಯ ಉದ್ದಕ್ಕೂ ನನ್ನ ಕಿವಿಗಳಲ್ಲಿ ರಿಂಗಣಿಸಿದೆ. ಬದುಕಿನಲ್ಲಿ ಮಾಯೆಯು ನಾವು ಕೇವಲ ಮನುಷ್ಯರನ್ನು ಆವರಿಸಿಕೊಳ್ಳುವ ಪರಿಗೆ ರೂಪಕವಾಗಿ ಕಂಡಿದೆ ಎಂಬುದಾಗಿ ಹೇಳಿದ್ದಾರೆ.

About the Author

ಎಂ.ಆರ್‌. ದತ್ತಾತ್ರಿ

ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿ ಎಂ ಆರ್ ದತ್ತಾತ್ರಿ ಯವರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲದ ಊರು ಚಿಕ್ಕಮಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯ ರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳ ಕೀರ್ತಿ ದತ್ತಾತ್ರಿಯವರದ್ದಾಗಿದೆ. ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವವು ಅವರದ್ದು. ಅಮೆರಿಕ ಮತ್ತು ಭಾರತದ ಅನೇಕ ...

READ MORE

Related Books