ಸುವರ್ಣ ಸೇತುವೆ

Author : ಹೆಚ್.ಜಿ. ರಾಧಾದೇವಿPublished by: ಶ್ರೀಲಕ್ಷ್ಮೀ ವೆಂಕಠೇಶ್ವರ ಪ್ರಕಾಶನ

Synopsys

ಎಚ್.ಕೆ ರಾಧಾದೇವಿ ಅವರ ಸಾಮಾಜಿಕ ಕಾದಂಬರಿ ಸುವರ್ಣ ಸೇತುವೆ.ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಹೆಣ್ಣು ಅನ್ನುವ ಕಾರಣಕ್ಕೆ ಎದುರಿಸಬೇಕಾದ ಸಮಸ್ಯೆಗಳು ಹಾಗೂ ಹೆಣ್ಣೇ ನಿಂದಿಸುವ ಪರಿ ಇದರಲ್ಲಿ ಚಿತ್ರಿತವಾಗಿದೆ.ಈ ಸಮಾಜದಲ್ಲಿ ಗಂಡು ಹತ್ತು ಕಡೆ ಮೇಯ್ದು ಬಂದರೂ ಸೈ. ಏಕಪತ್ನಿ ವೃತಸ್ತನಾದರೂ ಸೈ. ಸನ್ಯಾಸಿ ಆದರೂ ಸೈ. ಆದರೆ ಹೆಣ್ಣು ಮಾತ್ರ ವಯಸ್ಸಿಗೆ ಬಂದಾಕ್ಷಣ ಮದುವೆಯಾಗಬೇಕು. ಅವಳಿಗೆ ಮದುವೆ ಆಸಕ್ತಿ ಇರಲಿ ಇರದೇ ಇರಲಿ ಸಮಾಜದ ನಿರ್ಧಾರಕ್ಕೆ ಅವಳು ಬದ್ಧಳಾಗಿರಬೇಕು. ಇಲ್ಲವಾದಲ್ಲಿ ಹೆಣ್ಣೇ ಅವಳನ್ನು ಹೀಯಾಳಿಸಿ ಚಿತ್ರಹಿಂಸೆ ಕೊಟ್ಟು ಕೊಲ್ಲುವಳು. ಮದುವೆಯಾಗದಿರುವ ಸುಂದರಿ ನಗುತ ಯಾವ ಗಂಡಸಿನ ಜೊತೆಗೂ ಮಾತನಾಡದ ಸ್ಥಿತಿ. ಹೆತ್ತ ತಂದೆಯೇ ಮಗಳು ಸಂಸಾರ ಜವಾಬ್ದಾರಿ ವಹಿಸುವ ಹಾಗೂ ವಿವಾಹ ನಿರಾಕರಿಸಿದಾಗ ಬೇಸರ ಅಸಮಧಾನ ವ್ಯಕ್ತಪಡಿಸಿದ್ದು. ಅವಳ ಮೇಲೆ ಇನ್ನೂ ಮೂರು ಮಕ್ಕಳ ಜವಾಬ್ದಾರಿ ವಹಿಸಿ ಬೇರೆ ಊರಿಗೆ ಹೋದ ಸಂಗತಿ ಹೃದಯ ಕಲಕುತ್ತದೆ. ಒಂಟಿ ಹೆಣ್ಣು ಅಂದಾಕ್ಷಣ ಕಣ್ಣಾಕುವ ಕಾಮುಕರಿಂದ ರಕ್ಷಿಸಿಕೊಂಡು ಬದುಕುವ ಆ ಹೆಣ್ಣಿನ ತೊಳಲಾಟ ಕಣ್ಣಲ್ಲಿ ನೀರೂರಿಸುವುದು.ಕೊನೆಗೆ ತಾಯಿಯಂತೆ ಪ್ರೀತಿ ಕೊಟ್ಟು ಬೆಳಸಿದ ಸ್ವಂತ ತಂಗೀನೇ ಅವಳನ್ನು ಕೀಳಾಗಿ ನೋಡುವ ಸ್ಥಿತಿ ಓದುಗರಲ್ಲಿ ತಳಮಳ ಸೃಷ್ಟಿಸುವದು. ಸರಳ ಸುಂದರ ಸ್ವಾಭಿಮಾನದ ಯುವತಿ ಎಲ್ಲರ ಕಣ್ಣಿಗೆ ಸೊಕ್ಕಿನವಳಂತೆ ಕಾಣುವಳು. ಹಾಗೆ ಭಾವಿಸಿದ ಕಥಾನಾಯಕ ಕೊನೆಯಲ್ಲಿ ಅವಳನ್ನರಿತು ಕೈಹಿಡಿಯುವನು. ಇವರ ಮಿಲನಕ್ಕೆ ಕಾರಣ ನಾಯಕನ ಪ್ರೀತಿಯ ತಂಗಿ. ಅವಳೇ ಇವರ ಪ್ರೇಮದ ಸುವರ್ಣ ಸೇತುವೆ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books