ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಸಾಮಾನ್ಯ ಜನ ಅನುಭವಿಸಿದ ಯಾತನೆ, ಶೋಷಣೆ, ಲೈಂಗಿಕ ಕ್ರೌರ್ಯ ಇತ್ಯಾದಿ ಚಿತ್ರಣವೇ ಈ ಕಾದಂಬರಿ. ಜರ್ಮನಿಯಿಂದ ತಂದೆಯೊಂದಿಗೆ ಭಾರತಕ್ಕೆ ಬಂದಿದ್ದರೂ ಹ್ಯಾನ್ ಎಂಬ ಯಶಾದ್ ವಶೇಮ್ ಆ ನೆನಪುಗಳಿಂದ ತತ್ತರಿಸಿ ಹೋಗುತ್ತಾಳೆ. ಒಂದು ತುಣುಕು ಬ್ರೆಡ್ ಗಾಗಿ ಹುಡುಕಿ ಹುಡುಕಿ ಬಸವಳಿದ ಮಕ್ಕಳು ಸಾಲು ಸಾಲಾಗಿ ಸತ್ತರು. ಮಹಿಳೆಯರು ಕಾಮುಕರ ಲೈಂಗಿಕ ಶೋಷಣೆಗೆ ಒಳಗಾದರು. ವೃದ್ಧರು ಬರ್ಬರ ಹಿಂಸೆ ಅನುಭವಿಸಿದರು. ಊರು ತುಂಬೆಲ್ಲಾ ನರಕ ಯಾತನೆ, ಇಂತಹ ಭೀಕರ ಚಿತ್ರಣ ಕಟ್ಟಿಕೊಡುವ ಈ ಕಾದಂಬರಿಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (2007) ಹಾಗೂ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ‘ಅಕ್ಕ ಪ್ರಶಸ್ತಿ’ (2009) ಪಡೆದಿದೆ.
ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...
READ MORE